ನವದೆಹಲಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಜಾತಕವನ್ನು ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ಕನ್ನಡಿ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ನೋಡುವುದರಿಂದ, ಒಬ್ಬ ವ್ಯಕ್ತಿಯು ಜೀವನದಲ್ಲಿ ಯಾವ ರೀತಿಯಲ್ಲಿ ಸುಖ ಮತ್ತು ದುಃಖವನ್ನು ಅನುಭವಿಸುತ್ತಾನೆ ಎನ್ನುವುದನ್ನು ಖಚಿತವಾಗಿ ಹೇಳಬಹುದು (Jathaka Dosha) . ಯಾವುದೇ ಮಾನವನ ಆಯುಷ್ಯ ಎಷ್ಟಿರುತ್ತದೆ ಎಂಬುದು ಕೂಡಾ ಜಾತಕದಲ್ಲಿನ ಗ್ರಹಗಳ ಸ್ಥಾನದ ಮೂಲಕ ಹೇಳಬಹುದು ಎನ್ನಲಾಗುತ್ತದೆ. ಹಾಗಿದ್ದರೆ ಜಾತಕದಲ್ಲಿ ಅಲ್ಪಾಯುಷ್ಯದ ಯೋಗವು ಹೇಗೆ ರೂಪುಗೊಳ್ಳುತ್ತದೆ ನೋಡೋಣ.
ಜಾತಕದಲ್ಲಿ ಗ್ರಹಗಳ ಸ್ಥಾನವು ಅಲ್ಪಾಯುಷ್ಯದ ಯೋಗವನ್ನು ತೋರಿಸುತ್ತದೆ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಲಗ್ನವು ಜಾತಕದ 6, 8 ಅಥವಾ 12 ನೇ ಮನೆಯಲ್ಲಿದ್ದರೆ, ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ (Negetive impact)ಬೀರುತ್ತದೆ. ಹಾಗೆಯೇ ಜಾತಕದ 8ನೇ ಮನೆಯ ಅಧಿಪತಿಯು 6ನೇ ಅಥವಾ 12ನೇ ಮನೆಯಲ್ಲಿ ಕುಳಿತರೆ ಆಯುಷ್ಯ ಕಡಿಮೆಯಾಗುತ್ತದೆ. ಇದಲ್ಲದೆ, ಲಘ್ನದ ಮನೆಯಲ್ಲಿ ಸೂರ್ಯನಿದ್ದು, ಅದರ ಮೇಲೆ ಪಾಪಿ ಗ್ರಹ ದೃಷ್ಟಿ ಬೀರಿದ್ದರೆ, ವ್ಯಕ್ತಿಯ ಆಯುಷ್ಯವು ಕಡಿಮೆಯಾಗುತ್ತದೆ.
ಇದನ್ನೂ ಓದಿ: ಜೀವನದ ಎಲ್ಲಾ ಕಷ್ಟಗಳಿಂದಲೂ ಮೇಲೆದ್ದು ಬರಲು ಸಹಾಯ ಮಾಡುತ್ತದೆ ಈ ಮೂರು ವಿಷಯಗಳು..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಾಪ ಗ್ರಹಗಳಾದ ರಾಹು-ಕೇತು (Rahu Ketu) , ಶನಿ (Saturn)ಮತ್ತು ಮಂಗಳ (Mars)ಜಾತಕದ ಮೂರನೇ, ಆರನೇ, ಮತ್ತು 12 ನೇ ಮನೆಯಲ್ಲಿದ್ದರೆ, ವ್ಯಕ್ತಿಯನ್ನು ಅಲ್ಪಾಯುಷ್ಯನನ್ನಾಗಿ ಮಾಡುತ್ತಾರೆ. ಇದರ ಹೊರತಾಗಿ, ದುಷ್ಟ ಗ್ರಹ ಮತ್ತು ಲಗ್ನವು ಎರಡನೇ ಮತ್ತು 12 ನೇ ಮನೆಯಲ್ಲಿ ದುರ್ಬಲ ಸ್ಥಿತಿಯಲ್ಲಿದ್ದರೆ, ವ್ಯಕ್ತಿಯ ಆಯುಷ್ಯವು ಕಡಿಮೆಯಾಗುತ್ತದೆ. ಒಬ್ಬ ವ್ಯಕ್ತಿಯ ಲಗ್ನವು ಚಂದ್ರನಾಗಿದ್ದರೆ ಮತ್ತು ಅದು ಅಸ್ತಮಿಸುತ್ತಿದ್ದರೆ ಅಥವಾ ಗ್ರಹಣವಿದ್ದರೆ, ಅಂತಹ ವ್ಯಕ್ತಿಯ ಆಯುಷ್ಯ ಕೂಡಾ ಕಡಿಮೆಯಾಗುತ್ತದೆ.
ಯಾರ ಜಾತಕದಲ್ಲಿ ಲಗ್ನವು ತುಂಬಾ ಬಲಹೀನವಾಗಿದ್ದು, ಎಲ್ಲಾ ಪಾಪಗ್ರಹಗಳು ಅವನ ಮೇಲೆ ದೃಷ್ಟಿಯನ್ನು ಹೊಂದಿದ್ದರೆ , ಎಲ್ಲಾ ಪಾಪಗ್ರಹಗಳು ಕೇಂದ್ರದಲ್ಲಿಯೇ ಕುಳಿತಿದ್ದರೆ, ಯಾವುದೇ ಶುಭ ಗ್ರಹದ ದೃಷ್ಟಿ ಅವನ ಮೇಲೆ ಬೀಳದಿದ್ದರೆ, ಆಗ ಅಂತಹ ಅಲ್ಪಾಯು ಯೋಗವು ರೂಪುಗೊಳ್ಳುತ್ತದೆ.
ಇದನ್ನೂ ಓದಿ: ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ ಈ ಅಕ್ಷರದಿಂದ ಹೆಸರು ಆರಂಭವಾಗುವವರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.