Chanakya Niti :  ಶಾಂತಿಯುತ ಜೀವನ ಸಾಗಿಸಲು ಯಾವುದೇ ವಿವಾದದಲ್ಲಿ ಸೀಳುಕಬಾರದು ಎಂದು  ಚಾಣಕ್ಯ ನೀತಿ ಹೇಳುತ್ತದೆ. ಆದರೆ ತಿಳಿದೋ ಅಥವಾ ತಿಳಿಯದೆಯೋ ಕೆಲವರ ವಿಷಯದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ.  ಆದರೆ, ಚಾಣಕ್ಯ ನೀತಿಯು ಶಾಸ್ತ್ರದಲ್ಲಿ ಉಲ್ಲೇಖಿಸಾಲಾಗಿರುವ 9 ರೀತಿಯ ಜನರೊಂದಿಗೆ ಎಂದಿಗೂ ದ್ವೇಷವನ್ನು ಬೆಳೆಸಬಾರದು ಎಂದು ಹೇಳಲಾಗಿದೆ. ಒಬ್ಬ ವ್ಯಕ್ತಿಯು ಅವರೊಂದಿಗೆ ವೈರತ್ವ ಸಾಧಿಸಲು ಧೈರ್ಯಮಾಡಿದರೆ, ಸೋಲು ನಿಶ್ಚಿತ ಎನ್ನಲಾಗಿದೆ.  ಅಚಾತುರ್ಯದಿಂದ ಈ ರೀತಿಯ ಜನರನ್ನು ವಿರೋಧಿಸಿ ಅನೇಕ ರಾಜರು ಮತ್ತು ಚಕ್ರವರ್ತಿಗಳು ತಮ್ಮ ರಾಜ್ಯವನ್ನು ಕಳೆದುಕೊಂಡಿದ್ದಾರೆ. ಆಚಾರ್ಯ ಚಾಣಕ್ಯರ ನೀತಿಯಲ್ಲಿ ಇಂತಹ ಹಲವು ವಿಷಯಗಲಿದ್ದು ಅವು ಇಂದಿಗೂ ಕೂಡ ನಮಗೆ ಯೋಚಿಸುವಂತೆ ಮಾಡುತ್ತವೆ.


COMMERCIAL BREAK
SCROLL TO CONTINUE READING

ಈ 9 ಜನರ ಜೊತೆಗೆ ಹಗೆತನ ಬೇಡ
1 - ಶಸ್ತ್ರ ಹೊಂದಿರವವ: ಕೈಯಲ್ಲಿ ಆಯುಧವನ್ನು ಹೊಂದಿರುವವನನ್ನು ವಿರೋಧಿಸಬಾರದು ಅಥವಾ ಅವನೊಂದಿಗೆ ಜಗಳಕ್ಕಿಳಿಯಬಾರದು. ಏಕೆಂದರೆ ಕೋಪ ಹೆಚ್ಚಾದರೆ, ಆತ ಆಯುಧಗಳನ್ನು ಬಳಸಿ ಎದುರಾಳಿಯನ್ನು ಹತ್ಯೆಗೈಯಬಹುದು.


2- ಮರ್ಮ ಬಲ್ಲವ: ನಿಮ್ಮ ಅಂತರಂಗದ ರಹಸ್ಯ ತಿಳಿದಿರುವ ವ್ಯಕ್ತಿ ಅಂದರೆ ಮರ್ಮಬಲ್ಲವ  ಅಥವಾ ನಮ್ಮ ಎಲ್ಲಾ ರಹಸ್ಯಗಳನ್ನು ತಿಳಿದಿರುವ ವ್ಯಕ್ತಿಯನ್ನು ವಿರೋಧಿಸಬಾರದು. ಏಕೆಂದರೆ ವಿಭೀಷಣ ರಾವಣನ ಎಲ್ಲಾ ರಹಸ್ಯಗಳನ್ನು ಅರಿತವನಾಗಿದ್ದ ಎಂದು ಹೇಳಲಾಗುತ್ತದೆ, ಅವುಗಳನ್ನು ಆತ   ಶ್ರೀರಾಮನಿಗೆ ಹೇಳಿದ ಕಾರಣ ರಾವಣ ಯುದ್ಧದಲ್ಲಿ ಹತನಾದ ಎನ್ನಲಾಗುತ್ತದೆ.


3- ರಾಜ್ಯ ಅಥವಾ ಮಾಲೀಕ:  ಒಡೆಯ ಅಥವಾ ರಾಜನೊಡನೆಯೂ ದ್ವೇಷ ಕಟ್ಟಿಕೊಳ್ಳಬಾರದು. ಅವನು ಅಪಾರವಾದ ಶಕ್ತಿಯನ್ನು ಹೊಂದಿರುವುದರಿಂದ, ಅವನು ನಿಮಗೆ ದೊಡ್ಡ ಹಾನಿ ಮಾಡಬಲ್ಲ.


4- ಮೂರ್ಖ ವ್ಯಕ್ತಿ:  ಮೂರ್ಖ ವ್ಯಕ್ತಿಯೊಂದಿಗೆ ದ್ವೇಷ ಕಟ್ಟಿಕೊಳ್ಳಬಾರದು.  ಧರ್ಮಗ್ರಂಥಗಳಲ್ಲಿ, ಅಂತಹ ಜನರೊಂದಿಗೆ ಸ್ನೇಹಿತರಾಗುವುದು ಉತ್ತಮವೆಂದು ಪರಿಗಣಿಸಲಾಗಿಲ್ಲ.  ತನ್ನ ಸ್ವಂತ ಹಿತಾಸಕ್ತಿ ಅಥವಾ ಹಾನಿಯ ಬಗ್ಗೆ ಜ್ಞಾನವಿಲ್ಲದ ವ್ಯಕ್ತಿಯನ್ನು ಮೂರ್ಖ ಎಂದು ಪರಿಗಣಿಸಲಾಗುತ್ತದೆ. 


5- ಶ್ರೀಮಂತ: ಒಬ್ಬ ಅತ್ಯಂತ ಶ್ರೀಮಂತ ವ್ಯಕ್ತಿಯೊಂದಿಗೆ ಹಗೆತನ ಸಾಧಿಸಬಾರದು. ಏಕೆಂದರೆ ಅವನು ಕಾನೂನು ಮತ್ತು ನ್ಯಾಯವನ್ನು ಸಹ ಖರೀದಿಸಬಹುದು.


6- ವೈದ್ಯ: ಅಂದರೆ, ವೈದ್ಯರೊಂದಿಗೆ ಎಂದಿಗೂ ದ್ವೇಷ ಕಟ್ಟಿಕೊಳ್ಳಬಾರದು. ಇಲ್ಲದಿದ್ದರೆ ಅವನು ಯಾವಾಗ ಬೇಕಾದರೂ ನಿನ್ನನ್ನು ತೊಂದರೆಗೆ ಸಿಲುಕಿಸಬಹುದು.


7- ಚಾಡಿ ಹೇಳುವವ: ಇಲ್ಲಿಂದ ಅಲ್ಲಿಗೆ ಅಥವಾ ಅಲ್ಲಿಂದ ಇಲ್ಲಿಗೆ ಚಾಡಿ ಹೇಳುವವರ ಜೊತೆಗೆ ಹಗೆತನ ಸಾಧಿಸಬಾರದು. 


8- ಕವಿಗಳು: ಕವಿಗಳ ವರ್ಗದಲ್ಲಿ ನೀವು ಪತ್ರಕರ್ತರನ್ನು, ಭಾಷಣಕಾರರನ್ನು ಮತ್ತು ಬರಹಗಾರರನ್ನು ಕೂಡ ಶಾಮೀಲುಗೊಳಿಸಬಹುದು. ಈ ಜನರೊಂದಿಗೆ ದ್ವೇಷ ಸಾಧಿಸಬೇಡಿ.


ಇದನ್ನೂ ಓದಿ-Chanakya Niti : ಗಂಡ-ಹೆಂಡತಿ ಸಂಬಂಧದ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಿದ್ದೇನು ಗೊತ್ತಾ?


9- ಬಾಣಸಿಗ - ಅಡುಗೆ ಮಾಡುವವನಿಗೆ ಎಂದಿಗೂ ಕೆಟ್ಟದ್ದನ್ನು ಮಾಡಬಾರದು. ಇಲ್ಲದಿದ್ದರೆ ಆತ ನಿಮಗೆ . ಆಹಾರದಲ್ಲಿ ವಿಷ ಬೆರೆಸಿ ಹಾನಿಯುಂಟು ಮಾಡಬಹುದು. 


ಇದನ್ನೂ ಓದಿ-Nakshatra Parivartan 2022: ಗ್ರಹಗಳ ರಾಶಿ ಪರಿವರ್ತನೆಯ ಬಳಿಕ ಇದೀಗ ನಕ್ಷತ್ರಗಳ ಪರಿವರ್ತನೆ, ಮುಂಗಾರಿನ ಕುರಿತು ಪ್ರಮುಖ ಮುನ್ಸೂಚನೆ


(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.