Nakshatra Parivartan 2022: ಗ್ರಹಗಳ ರಾಶಿ ಪರಿವರ್ತನೆಯ ಬಳಿಕ ಇದೀಗ ನಕ್ಷತ್ರಗಳ ಪರಿವರ್ತನೆ, ಮುಂಗಾರಿನ ಕುರಿತು ಪ್ರಮುಖ ಮುನ್ಸೂಚನೆ

Star Transit 2022: ಗ್ರಹ-ನಕ್ಷತ್ರಗಳ ಗೋಚರ ಎಲ್ಲಾ 12 ರಾಶಿಗಳ ಜನರ ಜೀವನದ ಮೇಲಾಗುತ್ತದೆ. ಗ್ರಹಗಳ ಸ್ಥಾನ ಪಲ್ಲಟದ ವಿಷಯದಲ್ಲಿ ಮೇ ತಿಂಗಳು ತುಂಬಾ ವಿಶೇಷವಾಗಿದೆ. 

Written by - Nitin Tabib | Last Updated : May 14, 2022, 08:07 PM IST
  • ಗ್ರಹಗಳ ರಾಶಿ ಪರಿವರ್ತನೆಯ ಬಳಿಕ ಇದೀಗ ನಕ್ಷತ್ರ ಪರಿವರ್ತನೆ
  • ಮುಂಬರುವ ವರ್ಷಾ ಋತುವಿನ ಪ್ರಮುಖ ಮುನ್ಸೂಚನೆ
  • ತಿಳಿದುಕೊಳ್ಳಲು ಈ ವರದಿಯನ್ನೊಮ್ಮೆ ಓದಿ
Nakshatra Parivartan 2022: ಗ್ರಹಗಳ ರಾಶಿ ಪರಿವರ್ತನೆಯ ಬಳಿಕ ಇದೀಗ ನಕ್ಷತ್ರಗಳ ಪರಿವರ್ತನೆ, ಮುಂಗಾರಿನ ಕುರಿತು ಪ್ರಮುಖ ಮುನ್ಸೂಚನೆ title=
Nakshatra Parivartan 2022 Effect

Nakshatra Parivartan 2022 Effect: ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನನ್ನು ನವಗ್ರಹಗಳ ಅಧಿಪತಿ ಎಂದು ಕರೆಯಲಾಗುತ್ತದೆ.  ಸೂರ್ಯದೇವನ ರಾಶಿಯ ಬದಲಾವಣೆಯೊಂದಿಗೆ ಇದೀಗ ಗ್ರಹ-ನಕ್ಷತ್ರಗಳ ಗೋಚರ ಸಂಭವಿಸಲಿದೆ. ಗ್ರಹಗಳು ಮತ್ತು ನಕ್ಷತ್ರಗಳ ಈ ಗೋಚರ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ.  ಗ್ರಹಗಳ ರಾಶಿ ಪರಿವರ್ತನೆಯ ವಿಷಯದಲ್ಲಿ ಮೇ ತಿಂಗಳು ತುಂಬಾ ವಿಶೇಷವಾಗಿದೆ. ಮೇ 12 ರಂದು ಸೂರ್ಯನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಅಲ್ಲಿ 15 ದಿನ ತಂಗಿದ ನಂತರ ಸೂರ್ಯ ಮೃಗಶೀರ ನಕ್ಷತ್ರದಲ್ಲಿ ಪ್ರವೇಶಿಸಲಿದ್ದಾನೆ. ಸೂರ್ಯನ ರೋಹಿಣಿ ನಕ್ಷತ್ರ ಪ್ರವೇಶಕ್ಕೂ ಮುನ್ನ 9 ದಿನಗಳು ಭೀಕರ ಬಿಸಿಲು ಬೀಳಲಿದೆ.  ಆದ್ದರಿಂದ ಈ ಒಂಬತ್ತು ದಿನಗಳನ್ನು 'ನೌತಪಾ' ಎಂದು ಕರೆಯಲಾಗುತ್ತದೆ. ಇದು ಮೇ 25 ರಿಂದ ಮೇ 3 ರವರೆಗೆ ಇರಲಿದೆ.

9 ನಕ್ಷತ್ರಗಳಲ್ಲಿ 9 ದಿನಗಳವರೆಗೆ ನೌತಪಾ
ನೌತಪಾ ಎಂದರೆ ಜೇಷ್ಠ ಮಾಸದ ಗ್ರೀಷ್ಮ ಋತುವಿನ ತಾಪಮಾನದ ಗರಿಷ್ಠತೆ ಎಂದು ಭಾವಿಸಲಾಗುತ್ತದೆ. ಶುಕ್ಲ ಪಕ್ಷದಲ್ಲಿ ಆರ್ದ್ರ ನಕ್ಷತ್ರದಿಂದ ಹಿಡಿದು 9 ನಕ್ಷತ್ರಗಳಲ್ಲಿ 9 ದಿನಗಳ ಕಾಲ ನೌತಪಾ ಇರಲಿದೆ. ಶುಕ್ರವಾರವೇ ಹಸ್ತಾ ನಕ್ಷತ್ರದಿಂದ ಜ್ಯೇಷ್ಠ ಶುಕ್ಲ ಪಕ್ಷ ಆರಂಭವಾಗುತ್ತಿದೆ. ಜ್ಯೋತಿಷಿಗಳ ಪ್ರಕಾರ, ನೌತಪಾದಲ್ಲಿ ಹೆಚ್ಚು ಉಷ್ಣಾಂಶ ಇರಬೇಕು ಎಂಬ ಯಾವುದೇ ನಿಯಮವಿಲ್ಲ ಎನ್ನಲಾಗುತ್ತದೆ. ಆರ್ದ್ರಾ 10 ನಕ್ಷತ್ರಗಳಲ್ಲಿ ಹೆಚ್ಚು ಉಷ್ಟಾಂಶವನ್ನು ಪಡೆಯುವ ನಕ್ಷತ್ರವಾಗಿದೆ, ನಂತರ ಸೂರ್ಯನು 15 ದಿನಗಳ ಕಾಲ ಈ ನಕ್ಷತ್ರದಲ್ಲಿ ನೆಲೆಸುತ್ತಾನೆ ಮತ್ತು ಉತ್ತಮ ಮಳೆಯಾಗುತ್ತದೆ. ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಪಲ್ಲಟದಿಂದ  ದೇಶದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿನ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣಬಹುದು. 

ಇದನ್ನೂ ಓದಿ-Lucky Girls: ಪತಿ ಹಾಗೂ ಕುಟುಂಬದ ಪಾಲಿಗೆ ಲಕ್ಕಿ ಸಾಬೀತಾಗುತ್ತಾರೆ ಈ ಯುವತಿಯರು

ರೋಹಿಣಿ ನಕ್ಷತ್ರದಲ್ಲಿ 14 ದಿನಗಳ ಕಾಲ ಸೂರ್ಯನ ಪರಿಭ್ರಮಣೆ
ಜ್ಯೋತಿಷಿಗಳ ಪ್ರಕಾರ, ರೋಹಿಣಿ ನಕ್ಷತ್ರದಲ್ಲಿ ಸೂರ್ಯನ 14 ದಿನಗಳ ಪರಿಭ್ರಮಣೆ  ಮುಂಬರುವ ವರ್ಷಾ ಋತುವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. ತಜ್ಞರ ಪ್ರಕಾರ ಈ ವರ್ಷ ಮಳೆಗಾಲದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳಿವೆ. ಈ ವರ್ಷ ಶೇ.80ಕ್ಕೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. 15 ದಿನಗಳ ನಂತರ, ಜೂನ್ 8 ರಂದು ರೋಹಿಣಿ ನಕ್ಷತ್ರದಿಂದ ಸೂರ್ಯನು ಮೃಗಶಿರಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈ ನಕ್ಷತ್ರ ಪರಿವರ್ತನೆಯಿಂದ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತಿದೆ. 

ಇದನ್ನೂ ಓದಿ -Lucky Girls: ಪತಿ ಹಾಗೂ ಕುಟುಂಬದ ಪಾಲಿಗೆ ಲಕ್ಕಿ ಸಾಬೀತಾಗುತ್ತಾರೆ ಈ ಯುವತಿಯರು

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News