Chanakya Niti: ಹಣ ಸಂಪಾದಿಸಿದ ಬಳಿಕ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
ಹಣವು ದೇವರಲ್ಲ ಎಂದು ಹೇಳಲಾಗುತ್ತದೆ, ಆದರೆ ಅದು ದೇವರಿಗಿಂತ ಕಡಿಮೆ ಅಲ್ಲ. ಒಬ್ಬ ವ್ಯಕ್ತಿಯ ಜೀವನದಲ್ಲಿ ಹಣವಿದ್ದರೆ ಅವನು ಎಲ್ಲ ಸೌಕರ್ಯಗಳನ್ನು ಪಡೆಯಬಹುದು ಮತ್ತು ಆರಾಮದಾಯಕ ಜೀವನವನ್ನು ನಡೆಸಬಹುದು.
ನವದೆಹಲಿ: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮಾನವ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅವರ ನೀತಿಗಳಲ್ಲಿ ಅದ್ಭುತವಾದ ಜ್ಞಾನ ಭಂಡಾರ ಅಡಗಿದೆ. ಚಾಣಕ್ಯ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ನೀತಿಗಳನ್ನು ಅನುಸರಿಸಿದವರು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಆಚಾರ್ಯ ಚಾಣಕ್ಯರು ವ್ಯಕ್ತಿಯ ವೈವಾಹಿಕ ಜೀವನ, ಆರ್ಥಿಕ ಜೀವನದ ಬಗ್ಗೆಯೂ ಹೇಳಿದ್ದಾರೆ. ಅವರ ಈ ನೀತಿಗಳು ಅನೇಕ ರೀತಿಯ ತೊಂದರೆಗಳಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ.
ದಾನ
ಹಣವನ್ನು ಗಳಿಸಿದ ನಂತರ ಯಾವಾಗಲೂ ಸಂಗ್ರಹಿಸಬಾರದು ಅಥವಾ ಉಳಿಸಬಾರದು. ಅದರ ಒಂದು ಭಾಗವನ್ನು ದಾನ ಅಥವಾ ಒಳ್ಳೆಯ ಕಾರ್ಯಗಳಿಗೆ ಬಳಸಬೇಕು. ಜಿಪುನರ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ಎಂದಿಗೂ ನಿಲ್ಲುವುದಿಲ್ಲವಂತೆ.
ಇದನ್ನೂ ಓದಿ: Astro Tips: ಶಿವನಿಗೆ ಕಪ್ಪು ಎಳ್ಳು ಅರ್ಪಿಸಿದ್ರೆ ನಿಮ್ಮ ದುಃಖ-ಸಂಕಟಗಳು ನಾಶವಾಗುತ್ತವೆ!
ಒಳ್ಳೆಯ ಕಾರ್ಯ
ಚಾಣಕ್ಯ ನೀತಿಯ ಪ್ರಕಾರ, ಮನುಷ್ಯನ ಕ್ರಿಯೆಯು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇರಿ, ಕೆಟ್ಟ ಕರ್ಮಗಳ ಫಲಿತಾಂಶ ಮುಂದೊಂದು ದಿನ ಕೆಟ್ಟದಾಗಿರುತ್ತದೆ. ಕೆಟ್ಟ ಕರ್ಮದ ಫಲಿತಾಂಶವು ಮನುಷ್ಯನನ್ನು ಬಡತನ, ದುಃಖ, ರೋಗ, ಬಂಧನ ಮತ್ತು ವಿಪತ್ತುಗಳ ರೂಪದಲ್ಲಿ ಕಾಡುತ್ತದೆ.
ನೈತಿಕ ಕ್ರಿಯೆ
ಯಾವುದೇ ಒಬ್ಬ ವ್ಯಕ್ತಿಯು ಯಾವಾಗಲೂ ನೈತಿಕ ಕಾರ್ಯಗಳಿಂದ ಮಾತ್ರ ಹಣವನ್ನು ಸಂಪಾದಿಸಬೇಕು. ಕೆಟ್ಟ ಕೆಲಸಗಳನ್ನು ಮಾಡಿ ಅಥವಾ ಯಾರನ್ನಾದರೂ ನೋಯಿಸಿ ಅಥವಾ ಮೋಸಗೊಳಿಸಿ ಗಳಿಸಿದ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ. ಈ ರೀತಿ ಗಳಿಸಿದ ಹಣವು ಮುಂದೊಂದು ದಿನ ನಿಮಗೆ ದೊಡ್ಡ ತೊಂದರೆ ನೀಡುತ್ತದೆ, ಅದು ಎಂದಿಗೂ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲವಂತೆ. ಈ ರೀತಿ ಹಣ ಗಳಿಸಿದ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಬಡತನವನ್ನು ಎದುರಿಸಬೇಕಾಗುತ್ತದಂತೆ.
ಇದನ್ನೂ ಓದಿ: Chandra Grahan 2022: ಚಂದ್ರಗ್ರಹಣವು ಈ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ!
ಹಣದ ಮೌಲ್ಯ
ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹಣ ಗಳಿಸಿದ ನಂತರ, ಅದನ್ನು ಜಾಣತನದಿಂದ ಉಳಿಸಿ, ಆದರೆ ಯಾವಾಗಲೂ ಹಣವನ್ನು ಗೌರವಿಸಿ ಎಂದು ಹೇಳಿದ್ದಾರೆ. ಹಣದ ಮೌಲ್ಯ ಅರಿಯದವರಿಂದ ತಾಯಿ ಲಕ್ಷ್ಮಿದೇವಿ ಅಸಮಾಧಾನಗೊಂಡು ದೂರ ಹೋಗುತ್ತಾಳೆ. ಇಂತಹ ಜನರು ಮತ್ತೆ ಬಡತನ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.