Astro Tips: ಶಿವನಿಗೆ ಕಪ್ಪು ಎಳ್ಳು ಅರ್ಪಿಸಿದ್ರೆ ನಿಮ್ಮ ದುಃಖ-ಸಂಕಟಗಳು ನಾಶವಾಗುತ್ತವೆ!

ಪ್ರದೋಷ ಉಪವಾಸವು ಶಿವನಿಗೆ ಬಹಳ ಪ್ರಿಯವಾಗಿದೆ. ಭೋಲೆನಾಥನ ಅನುಗ್ರಹ ಪಡೆಯಲು ಭಕ್ತರು ಪ್ರದೋಷ ಉಪವಾಸ ಆಚರಿಸಲು ಸಲಹೆ ನೀಡಲಾಗುತ್ತದೆ. ಈ ಬಾರಿಯ ಪ್ರದೋಷ ವ್ರತವು ಶನಿವಾರದಂದು ಬರುತ್ತದೆ, ಇದನ್ನು ಶನಿ ಪ್ರದೋಷ ವ್ರತವೆಂದು ಕರೆಯಲಾಗುತ್ತದೆ.

Written by - Puttaraj K Alur | Last Updated : Nov 5, 2022, 09:03 PM IST
  • ಪ್ರತಿ ತಿಂಗಳ ಎರಡೂ ಕಡೆಯ ತ್ರಯೋದಶಿ ತಿಥಿಯಂದು ಪ್ರದೋಷ ಉಪವಾಸ ಆಚರಿಸಲಾಗುತ್ತದೆ
  • ನ.5ರ ಸಂಜೆ 5:06ರಿಂದ ಶನಿ ಪ್ರದೋಷ ವ್ರತ ಪ್ರಾರಂಭವಾಗಿ ನ.6ರ ಸಂಜೆ 04.26ರವರೆಗೆ ಇರುತ್ತದೆ
  • ಶನಿ ಪ್ರದೋಷ ಉಪವಾಸದ ದಿನದಂದು ಭಗವಾನ್ ಶಿವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ
Astro Tips: ಶಿವನಿಗೆ ಕಪ್ಪು ಎಳ್ಳು ಅರ್ಪಿಸಿದ್ರೆ ನಿಮ್ಮ ದುಃಖ-ಸಂಕಟಗಳು ನಾಶವಾಗುತ್ತವೆ! title=
ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸಿ

ನವದೆಹಲಿ: ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ವಿಶೇಷ ಮಹತ್ವವಿದೆ. ಪ್ರದೋಷ ವ್ರತವನ್ನು ಆಚರಿಸುವ ವಾರದ ದಿನವನ್ನು ಅದರ ಹೆಸರಿನಿಂದ ಕರೆಯಲಾಗುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರದೋಷ ವ್ರತ ಶನಿವಾರ ಬೀಳುತ್ತಿದೆ. ಹೀಗಾಗಿ ಇದನ್ನು ಶನಿ ಪ್ರದೋಷ ವ್ರತ ಎಂದು ಕರೆಯಲಾಗುವುದು. ಈ ದಿನ ಪ್ರದೋಷ ಕಾಲದಲ್ಲಿ ಭೋಲೆನಾಥನನ್ನು ಪೂಜಿಸುವುದರಿಂದ ಶಿವನ ಆಶೀರ್ವಾದ ದೊರೆಯುತ್ತದೆ. ಇದರೊಂದಿಗೆ ಶನಿದೇವನ ಕೃಪೆಯೂ ದೊರೆಯಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರದೋಷ ಉಪವಾಸವನ್ನು ಕಾರ್ತಿಕ ಶುಕ್ಲದ ತ್ರಯೋದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ಪ್ರದೋಷ ವ್ರತವನ್ನು ನವೆಂಬರ್ 5ರಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರವಾದ್ದರಿಂದ ಈ ದಿನ ಶಿವನ ಜೊತೆಗೆ ಶನಿದೇವನ ಆಶೀರ್ವಾದ ಪಡೆಯುವುದು ಸುಲಭ. ಶನಿ ಪ್ರದೋಷ ವ್ರತದ ದಿನದಂದು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಸಂಪತ್ತು, ಸುಖ-ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಶನಿ ಪ್ರದೋಷದ ದಿನ ಯಾವೆಲ್ಲ ಕೆಲಸಗಳನ್ನು ಮಾಡಬಹುದೆಂದು ತಿಳಿಯಿರಿ.

ಇದನ್ನೂ ಓದಿ: ಮೀನ ರಾಶಿಗೆ ಗುರುವಿನ ಪ್ರವೇಶ: ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ, ಹಣದ ಮಳೆಯಾಗಲಿದೆ!

ಶನಿ ಪ್ರದೋಷ ವ್ರತ 2022 ಶುಭ ಮುಹೂರ್ತ

ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರದೋಷ ಉಪವಾಸವನ್ನು ಪ್ರತಿ ತಿಂಗಳ ಎರಡೂ ಕಡೆಯ ತ್ರಯೋದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿಯ ಶನಿ ಪ್ರದೋಷ ವ್ರತದ ದಿನಾಂಕವು ನವೆಂಬರ್ 5ರ ಶನಿವಾರದಂದು ಸಂಜೆ 5:06 ರಿಂದ ಪ್ರಾರಂಭವಾಗಿ ನವೆಂಬರ್ 06ರ ಭಾನುವಾರದ ಸಂಜೆ 04.26ರವರೆಗೆ ಇರುತ್ತದೆ.

ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸಿ

ಶನಿ ಪ್ರದೋಷ ಉಪವಾಸದ ದಿನದಂದು ಭಗವಾನ್ ಶಿವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಹಾಗೆಯೇ ಶಿವಲಿಂಗಕ್ಕೆ ಜಲಾಭಿಷೇಕ ಮಾಡಲಾಗುತ್ತದೆ. ಭಗವಾನ್ ಶಿವನಿಗೆ ಜಲಾಭಿಷೇಕ ಮಾಡಲು ಒಂದು ಪಾತ್ರೆಯಲ್ಲಿ ಕಪ್ಪು ಎಳ್ಳನ್ನು ತೆಗೆದುಕೊಂಡು ಶಿವ ಪಂಚಾಕ್ಷರ 'ಓಂ ನಮಃ ಶಿವಾಯ' ಮಂತ್ರವನ್ನು ನೀರು ಹಾಕುತ್ತಾ ಜಪಿಸಬೇಕು. ಹೀಗೆ ಮಾಡುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೀರಿ.

ಇದನ್ನೂ ಓದಿ: Astro Tips: ಈ ರಾಶಿಯವರು ಎಂದಿಗೂ ಕೆಂಪು ದಾರವನ್ನು ಧರಿಸಬಾರದು..!

ಶನಿ ದೇವನಿಗೆ ಪರಿಹಾರಗಳು

ಶನಿ ಪ್ರದೋಷ ವ್ರತದ ದಿನದಂದು ಶಿವನೊಂದಿಗೆ ಶನಿ ದೇವನನ್ನು ಪೂಜಿಸಲು ನಿಯಮ ಕೂಡ ಇದೆ. ಈ ದಿನದಂದು ಶನಿದೇವನ ಆರಾಧನೆಯು ಲಾಭದಾಯಕವಾಗಿದೆ. ಈ ದಿನದಂದು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಅಥವಾ ಮಣ್ಣಿನ ದೀಪದಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿ. ನಂತರ ಅದರಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಬೇಕು. ಬಳಿಕ ಅದನ್ನು ಶನಿ ದೇವಸ್ಥಾನಕ್ಕೆ ದಾನ ಮಾಡಬೇಕು. ಈ ದಿನ ಸಂಜೆ ಕಪ್ಪು ನಾಯಿಗೆ ಸಿಹಿ ರೊಟ್ಟಿಯನ್ನು ತಿನ್ನಿಸಿ. ಇದರೊಂದಿಗೆ ಜಾತಕದಲ್ಲಿ ಶನಿಯ ಸಾಡೇ ಸತಿ ಅಥವಾ ಧೈಯಾದಿಂದ ನಿಮಗೆ ಮುಕ್ತಿ ದೊರೆಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News