Chanakya Niti: ದಿನದ ಆರಂಭ ಚೆನ್ನಾಗಿದ್ದರೆ, ದಿನದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ ಎನ್ನಲಾಗುತ್ತದೆ. ದಿನದ ಶುಭ ಆರಂಭಕ್ಕಾಗಿ, ಒಬ್ಬರು ಕೆಲವು ವಿಷಯಗಳನ್ನು ಅನುಸರಿಸಬೇಕು, ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಮತ್ತು ವ್ಯಕ್ತಿಯು ತನ್ನ ತನ್ನ ನಿರ್ಧಿಷ್ಟ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಸಮಯದ ಮೌಲ್ಯವನ್ನು ಅರ್ಥಮಾಡಿಕೊಂಡವರು ಜೀವನದಲ್ಲಿ ಎಂದಿಗೂ ವಿಫಲರಾಗುವುದಿಲ್ಲ ಎಂಬುದು ಅವರ ಅಭಿಮತ. ಚಾಣಕ್ಯನ ಪ್ರಕಾರ, ಬೆಳಗಿನ ಸಮಯ ದಿನದ ತುಂಬಾ ಮುಖ್ಯವಾದ ಸಮಯವಾಗಿದೆ, ಅದನ್ನು ವ್ಯರ್ಥ ಮಾಡಲು ಬಿಡಬೇಡಿ. ಪ್ರತಿದಿನ ಬೆಳಗ್ಗೆ ಎದ್ದ ನಂತರ ಚಾಣಕ್ಯನ ಈ ನಾಲ್ಕು ವಿಷಯಗಳನ್ನು ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

1. ಬೇಗ ಎದ್ದೇಳಿ - ದೀರ್ಘಕಾಲ ನಿದ್ದೆ ಮಾಡುವುದು ಆರೋಗ್ಯ ಮತ್ತು ವೃತ್ತಿ ಎರಡಕ್ಕೂ ಹಾನಿಕಾರಕ. ಬೇಗ ಮಲಗಿ ಬೇಗ ಏಳುವುದು ಯಶಸ್ಸಿನ ಮೊದಲ ಮೆಟ್ಟಿಲು ಎನ್ನುತ್ತಾರೆ ಚಾಣಕ್ಯ. ಬೆಳಗ್ಗೆ ಬೇಗ ಏಳುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಅನುಕೂಲವಾಗುತ್ತದೆ.


2. ಯೋಜನೆ ಮಾಡಿ - ಚಾಣಕ್ಯನ ಪ್ರಕಾರ, ಬೆಳಿಗ್ಗೆ ಎದ್ದ ನಂತರ, ಇಡೀ ದಿನದ ಯೋಜನೆಯನ್ನು ರೂಪಿಸಬೇಕು. ತನ್ನ ಇಡೀ ದಿನದ ಕ್ರಿಯಾ ಯೋಜನೆಯನ್ನು ಮಾಡುವ ವ್ಯಕ್ತಿಗೆ ಗುರಿಯನ್ನು ಸಾಧಿಸುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಾಗುವುದಿಲ್ಲ. ಅಲ್ಲದೆ ಕೆಲಸ ಮಾಡುವುದು ಸುಲಭವಾಗುತ್ತದೆ. ಇದರೊಂದಿಗೆ ಸಮಯ ವ್ಯರ್ಥವಾಗುವುದಿಲ್ಲ ಮತ್ತು ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ.


3. ಸಮಯ ನಿರ್ವಹಣೆ - ಸಮಯವು ತುಂಬಾ ಅಮೂಲ್ಯವಾಗಿದೆ. ಆದ್ದರಿಂದ ಅದನ್ನು ಬುದ್ಧಿವಂತಿಕೆಯಿಂದ ಬಳಸಿ. ಸಿದ್ಧಪಡಿಸಿರುವ ರೂಪುರೇಷೆಯ ಎಲ್ಲ ಕೆಲಸಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕು ಎನ್ನುತ್ತಾರೆ ಚಾಣಕ್ಯ. ಯಾವುದೇ ಕೆಲಸವನ್ನು ನಾಳೆಗೆ ಮುಂದೂಡಬೇಡಿ. ಹೀಗೆ ಮಾಡುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನೀವು ಕನಸುಗಳನ್ನು ಅರ್ಥಪೂರ್ಣವಾಗಿಸಲು ಬಯಸುತ್ತಿದ್ದರೆ, ಟೈಮ್ ಟೇಬಲ್ ಅನ್ನು ಅನುಸರಿಸಿ, ಅದು ಯಶಸ್ಸನ್ನು ಮಾತ್ರವಲ್ಲದೆ ಸಂಪತ್ತು, ಘನತೆ ಮತ್ತು ಗೌರವವನ್ನು ತರುತ್ತದೆ.


ಇದನ್ನೂ ಓದಿ-Palm Luck Sign: ಬೆರಳುಗಳು ನಿರ್ಧರಿಸುತ್ತೆ ಅದೃಷ್ಟ: ನಿಮ್ಮ ಕೈಯಲ್ಲೂ ಇದೆಯೇ ಅಂತಹ ಬೆರಳುಗಳು


4. ಆರೋಗ್ಯ - ಆರೋಗ್ಯದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ ಎಂದು ಚಾಣಕ್ಯ ಹೇಳುತ್ತಾರೆ, ಏಕೆಂದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಅಜಾಗರೂಕರಾಗಿದ್ದರೆ, ರೋಗಗಳು ನಿಮ್ಮನ್ನು ಆವರಿಸುತ್ತವೆ. ಅನಾರೋಗ್ಯದಿಂದ ಇರುವ ವ್ಯಕ್ತಿ ಬಯಸಿದ ನಂತರವೂ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ದೇಹದಲ್ಲಿ ಶಕ್ತಿ ಇದ್ದಾಗ ಮಾತ್ರ ಅದು ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದುದರಿಂದ ಯೋಗ, ವ್ಯಾಯಾಮ, ಪ್ರತಿನಿತ್ಯ ಪೌಷ್ಟಿಕ ಆಹಾರ ಸೇವಿಸಿ. 


ಇದನ್ನೂ ಓದಿ-Shanichari Amavasya 2022: ಇಂದು ಶನಿ ಅಮಾವಾಸ್ಯೆ, ರಾಶಿಗಳಿಗೆ ಅನುಗುಣವಾಗಿ ಈ ಕೆಲಸ ಮಾಡಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.