Chanakya Niti for Enemy : ಆಚಾರ್ಯ ಚಾಣಕ್ಯ ಮಹಾನ್ ರಾಜತಾಂತ್ರಿಕರಾಗಿದ್ದರು. ಅವರು ಮಾನವ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅವರ ಮಾತುಗಳನ್ನು ಚಾಣಕ್ಯ ನೀತಿ ಶಾಸ್ತ್ರದಲ್ಲಿ ಕ್ರೂಡೀಕರಿಸಲಾಗಿದೆ. ಆಚಾರ್ಯ ಚಾಣಕ್ಯರ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಯಾವತ್ತೂ ಸೋಲುವುದಿಲ್ಲ. ಚಾಣಕ್ಯ ನೀತಿಯ ಪ್ರಕಾರ, ನೀವು ಪ್ರಾಣಿ ಮತ್ತು ಪಕ್ಷಿಗಳ ಕೆಲವು ವಿಶೇಷ ಗುಣಗಳನ್ನು ನೀವು ಅಳವಡಿಸಿಕೊಂಡರೆ ನಿಮಗೆ ಸೋಲು ನಿಮ್ಮಿಂದ ದೂರಾಗುತ್ತದೆ. ಈ ಕೆಲವು ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ಸನ್ನು ಸಾಧಿಸಬಹುದು. ಆ ಗುಣಗಳು ಯಾವವು ಈ ಕೆಳಗಿದೆ ನೋಡಿ.. 


COMMERCIAL BREAK
SCROLL TO CONTINUE READING

ಸಿಂಹ


ಏಕಾಗ್ರತೆಯ ಗುಣವನ್ನು ಸಿಂಹದಿಂದ ಕಲಿಯಬಹುದು. ಸಿಂಹದ ಮರಿ ಸೋಮಾರಿತನ ಮಾಡುವುದಿಲ್ಲ. ಬೇಟೆಗಾಗಿ, ಸಿಂಹ ಸೋಮಾರಿತನವನ್ನು ಬಿಟ್ಟು ಏಕಾಗ್ರತೆಯನ್ನು ಕಾಪಾಡಿಕೊಳ್ಳುತ್ತದೆ. ಸಿಂಹದ ಹಿಡಿತದಿಂದ ಬೇಟೆಗೆ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ, ಸಿಂಹದ ಈ ಗುಣಗಳನ್ನು ಮನುಷ್ಯರೂ ಅಳವಡಿಸಿಕೊಳ್ಳಬೇಕು.


ಇದನ್ನೂ ಓದಿ : Chanakya Niti : ಜೀವನದಲ್ಲಿ ಯಾವಾಗಲೂ ಯಶಸ್ಸು ಸಿಗಲು ಅನುಸರಿಸಿ ಚಾಣಕ್ಯನ ಈ ನೀತಿಗಳನ್ನು!


ಹದ್ದು


ಚಾಣಕ್ಯ ನೀತಿ ಪ್ರಕಾರ, ಹದ್ದು ಅತ್ಯಂತ ಅಪಾಯಕಾರಿ ಪಕ್ಷಿ ಎಂದು ಹೇಳಲಾಗುತ್ತದೆ. ಬೇಟೆಯಾಡಲು ಅದು ಯಾವತ್ತೂ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅದು ತನ್ನ ಗುರಿಯತ್ತ ಗಮನಹರಿಸುತ್ತದೆ, ಅದಕ್ಕಾಗಿಯೇ ಹದ್ದು ತನ್ನ ಗುರಿಯನ್ನು ಕಳೆದುಕೊಳ್ಳುವುದಿಲ್ಲ. ಅದೇ ರೀತಿ ಪ್ರತಿಯೊಂದು ಸಂದರ್ಭದಲ್ಲೂ ಕೂಲಂಕುಷವಾಗಿ ಯೋಚಿಸಿಯೇ ನಿರ್ಧಾರ ತೆಗೆದುಕೊಳ್ಳಬೇಕು. ಯಾವತ್ತೂ ಆತುರಪಡಬೇಡಿ.


ಹಾವು


ಚಾಣಕ್ಯ ನೀತಿಯ ಪ್ರಕಾರ ಹಾವಿಗೆ ಕಾಲುಗಳಿಲ್ಲ. ಆದರೂ ಅದು ಯಾವತ್ತೂ ತನ್ನ ದೌರ್ಬಲ್ಯವನ್ನು ತೋರಿಸುವುದಿಲ್ಲ. ಅದು ತೆವಳುತ್ತಾ ಬೇಟೆಯಾಡುತ್ತದೆ. ಹರಿದಾಡುವುದನ್ನು ತನ್ನ ಶಕ್ತಿಯನ್ನಾಗಿ ಮಾಡಿಕೊಂಡಿದೆ. ಹಾವು ಕಂಡರೆ ಜನ ಭಯಪಡಲು ಇದೇ ಕಾರಣ. ಅಂತೆಯೇ, ಒಬ್ಬ ವ್ಯಕ್ತಿಯು ತನ್ನ ಯಾವುದೇ ನ್ಯೂನತೆಗಳನ್ನು ಜನರಿಗೆ ತೋರಿಸಬಾರದು.


ಕತ್ತೆ


ಆಚಾರ್ಯ ಚಾಣಕ್ಯ ತನ್ನ ನೀತಿಯಲ್ಲಿ ಕತ್ತೆಯನ್ನು ಮೂರ್ಖ ಎಂದು ಪರಿಗಣಿಸಿದರೂ ಅದು ತುಂಬಾ ಶ್ರಮದಾಯಕ ಪ್ರಾಣಿಯಾಗಿದೆ. ಕಠಿಣ ಪರಿಶ್ರಮದ ಆಧಾರದ ಮೇಲೆ ಪ್ರತಿಯೊಂದು ಗಮ್ಯಸ್ಥಾನವನ್ನು ಸುಲಭವಾಗಿ ಸಾಧಿಸಬಹುದು. ಅದಕ್ಕೆ ಕತ್ತಿಯ ಈ ಗುಣವನ್ನು ನೀವು ಅಳವಡಿಸಿಕೊಳ್ಳಬೇಕು.


ಇದನ್ನೂ ಓದಿ : Garuda Purana: ಯಾವುದೇ ವ್ಯಕ್ತಿಗೆ ಸಾಯುವ ಮೊದಲು ಈ 5 ಮುನ್ಸೂಚನೆಗಳು ಸಿಗುತ್ತವೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.