ನವದೆಹಲಿ: Chanakya Niti - ತನ್ನ ನೀತಿ ಶಾಸ್ತ್ರದಲ್ಲಿ, ಆಚಾರ್ಯ ಚಾಣಕ್ಯರು (Acharya Chanakya) ಜೀವನದ ಬಗ್ಗೆ ಅನೇಕ ಒಳ್ಳೆಯ ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯ ನೀತಿಯ (Chanakya Niti On Friendship) ಪ್ರಕಾರ, ವ್ಯಕ್ತಿಯ ಜೀವನವು ಬಹಳ ಅಮೂಲ್ಯವಾಗಿದೆ. ಕಳೆದುಹೋಗುವ ಸಮಯ ಮತ್ತೆ ಹಿಂತಿರುಗಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಜೀವನವನ್ನು ಯಶಸ್ವಿಗೊಳಿಸಲು ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಮನುಷ್ಯನ ಯಶಸ್ಸಿನಲ್ಲಿ ಒಳ್ಳೆಯ ಸಹವಾಸವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಯಾರು ಸದ್ಗುಣಿಗಳು ಮತ್ತು ಒಳ್ಳೆಯ ಜನರೊಂದಿಗೆ ಸಹವಾಸ ಮಾಡುತ್ತಾರೆ, ಅವರು ಪ್ರತಿ ಹೆಜ್ಜೆಯಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಮತ್ತೊಂದೆಡೆ, ಈ ಬಗ್ಗೆ ಕಾಳಜಿ ವಹಿಸದ ಮತ್ತು ಸ್ನೇಹಿತರ (Friendship) ಆಯ್ಕೆಯಲ್ಲಿ ಕಾಳಜಿ ವಹಿಸದ ಜನರು ಪ್ರತಿ ಕ್ಷಣವೂ ಸವಾಲು ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಸ್ನೇಹ ಮಾಡುವಾಗ ಯಾವುದರ ಕಾಳಜಿ ವಹಿಸಬೇಕು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ನಿಜವಾದ ಸ್ನೇಹಿತನನ್ನು ಹೇಗೆ ಗುರುತಿಸಬೇಕು?
ಚಾಣಕ್ಯನ ಪ್ರಕಾರ, ನಿಜವಾದ ಸ್ನೇಹಿತನನ್ನು ಗುರುತಿಸುವುದು ಬಹಳ ಮುಖ್ಯ. ಯಾವಾಗಲೂ ಯೋಗ್ಯ ಮತ್ತು ಸರಿಯಾದ ಮಾರ್ಗವನ್ನು ತೋರಿಸುವವನೆ ಒಬ್ಬ ನಿಜವಾದ ಸ್ನೇಹಿತನಾಗಬಹುದು. ಆಟ ತಪ್ಪು ದಾರಿಯಲ್ಲಿ ಹೋಗದಂತೆ ನಿಮ್ಮನ್ನು ತಡೆಯುವವನಾಗಿರಬೇಕು. ಇದಲ್ಲದೇ ಸುಖ-ದುಃಖಗಳಲ್ಲಿ ಸದಾ ನಿಮ್ಮ ಜೊತೆಗೆ ಇರುವವನಾಗಿರಬೇಕು. ತಪ್ಪಾದ ಸ್ನೇಹಿತ ತೊಂದರೆಗೆ ಸಿಲುಕಿಸಿ ಜೀವನವನ್ನು ನಾಶಪಡಿಸಬಹುದು ಎಂದು ಚಾಣಕ್ಯ ಹೇಳುತ್ತಾನೆ. ಆದ್ದರಿಂದ, ನಿಜವಾದ ಸ್ನೇಹಿತನನ್ನು ಗುರುತಿಸಿದ ನಂತರ, ಒಬ್ಬರು ಆತನ ಜೊತೆಗೆ ಸ್ನೇಹವನ್ನು ಮಾಡಬೇಕು.

ಇಂತಹ ಜನರ ಜೊತೆಗೆ ಗೆಳೆತನ ಒಳ್ಳೆಯದಲ್ಲ
ನೀತಿಶಾಸ್ತ್ರದಲ್ಲಿ, ಚಾಣಕ್ಯ ಹೇಳುವ ಪ್ರಕಾರ, ತಪ್ಪು ಸಂಸ್ಕಾರ ಅಥವಾ ತಪ್ಪು ಅಭ್ಯಾಸಗಳಿಂದ ಸುತ್ತುವರೆದಿರುವ ಜನರ ಜೊತೆಗೆ ಅಪ್ಪಿತಪ್ಪಿಯೂ ಕೂಡ ಗೆಳೆತನ ಬೆಳೆಸಬಾರದು. ಹಾಗೆಯೇ ಸದಾ ತಮ್ಮ ಸ್ವಾರ್ಥದ ಬಗ್ಗೆ ಗಮನ ಹರಿಸುವವರ ಜೊತೆಗೂ ಕೂಡ ಸ್ನೇಹತನ ಒಳ್ಳೆಯದಲ್ಲ. ಇಂತಹ ಸ್ನೇಹಿತರು ಸಮಯ ಬಂದಾಗ ಮೋಸ ಮಾಡಬಹುದು. ಆದ್ದರಿಂದ, ಒಬ್ಬರು ಅವರೊಂದಿಗೆ ಜಾಗರೂಕರಾಗಿರಬೇಕು.
ನಿಜವಾದ ಗೆಳೆಯನ ಬಗ್ಗೆ ಯಾವಾಗ ತಿಳಿಯುತ್ತದೆ


ಇದನ್ನೂ ಓದಿ-ಜೀವನದಲ್ಲಿ ಈ ಜನರಿಗೆ ತೊಂದರೆ ಕೊಟ್ಟರೆ ಕಷ್ಟಗಳ ಪರ್ವತವೇ ಮೇಲೆರಗಬಹುದು.! ಮುನಿಸಿಕೊಳ್ಳಲಿದ್ದಾಳೆ ಲಕ್ಷ್ಮೀ

ಒಬ್ಬ ವ್ಯಕ್ತಿಯ ಜೀವನದಲ್ಲಿ ಕೆಟ್ಟ ಕಾಲ ಬಂದಾಗ ನಿಜವಾದ ಸ್ನೇಹಿತರು ಅರಿವಿಗೆ ಬರುತ್ತಾರೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಕೆಟ್ಟ ಕಾಲದಲ್ಲಿ ನಿಜವಾದ ಸ್ನೇಹದ ಅರಿವಾಗುತ್ತದೆ. ನಿಜವಾದ ಸ್ನೇಹಿತರಲ್ಲದವರು ಕೆಟ್ಟ ಕಾಲ ಬಂದಾಗ ಓಡಿಹೋಗುತ್ತಾರೆ.. ಈ ಸ್ನೇಹಿತರು ಸ್ವಾರ್ಥಿಗಳಾಗಿರುತ್ತಾರೆ ಮತ್ತು ದ್ರೋಹ ಬಗೆಯುವವರಾಗಿರುತ್ತಾರೆ.


ಇದನ್ನೂ ಓದಿ-ಜೀವನದಲ್ಲಿ ಕೆಟ್ಟ ಸಮಯ ನಡೆಯುತ್ತಿದ್ದಾಗ ಈ ವಿಚಾರಗಳು ನೆನಪಿರಲಿ, ಜಯ ಸಿಕ್ಕೇ ಸಿಗುತ್ತದೆ.!

(Declaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.