Chanakya Niti: ಇಂತಹವರ ಬಳಿ ಎಂದಿಗೂ ಹಣ ನಿಲ್ಲಲ್ಲ
Chanakya Niti: ಖ್ಯಾತ ಅರ್ಥಶಾಸ್ತ್ರಜ್ಞ ಎಂದೇ ಖ್ಯಾತಿ ಪಡೆದಿರುವ ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಇದು ವ್ಯಕ್ತಿಯ ಯಶಸ್ವೀ ಜೀವನಕ್ಕೆ ಬಹಳ ಪ್ರಯೋಜನಕಾರಿ ಎಂದು ನಂಬಲಾಗಿದೆ.
Chanakya Niti: ಹಣ, ಹಣ ಯಾರಿಗೆ ತಾನೇ ಬೇಡ ಹೇಳಿ. ಪ್ರತಿಯೊಬ್ಬರೂ ದುಡಿಯುವುದೂ ಕೂಡ ಹಣ ಸಂಪಾದನೆಗಾಗಿಯೇ. ಆದರೆ, ಜೀವನ ಎಂಬ ತೇರಿನಲ್ಲಿ ಕೆಲವರು ತುಂಬಾ ಕಷ್ಟಪಟ್ಟು ದುಡಿದರೂ ಕೂಡ ಉತ್ತಮ ಜೀವನ ನಡೆಸಲು ಸಾಕಾಗುವಷ್ಟು ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ಯಾವುದೇ ಪರಿಶ್ರಮವಿಲ್ಲದೆ ಬಹಳ ಸುಲಭವಾಗಿ ರಾತ್ರೋ ರಾತ್ರಿ ಶ್ರೀಮಂತರಾಗುತ್ತಾದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಬಣ್ಣಿಸಿದ್ದಾರೆ.
ಆಚಾರ್ಯ ಚಾಣಕ್ಯರು ಹಣವನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವತೆಯ ಪ್ರತಿರೂಪ ಎಂದು ಬಣ್ಣಿಸಿದ್ದಾರೆ. ಯಾರ ಮೇಲೆ ತಾಯಿ ಲಕ್ಷ್ಮಿ ಕೃಪೆ ಇರುತ್ತದೆಯೋ ಅವರು ಜೀವನದಲ್ಲಿ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ಚಾಣಕ್ಯ ನೀತಿಯಲ್ಲಿ, ವ್ಯಕ್ತಿಯು ಯಾವ ರೀತಿ ಹಣ ಸಂಪಾದಿಸುತ್ತಾನೆ ಎಂಬುದರ ಮೇಲೆ ಅವರು ಸಂಪತ್ತಿನ ಒಡೆಯರಾಗುತ್ತಾರೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ ಎಂದು ಹೇಳಲಾಗುತ್ತದೆ.
ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವರ ಬಳಿ ಎಷ್ಟೇ ಸಂಪತ್ತಿದ್ದರೂ ಕೂಡ ಅದು ದೀರ್ಘಕಾಲ ಉಳಿಯುವುದಿಲ್ಲ. ಅವರು ಎಷ್ಟೇ ಹಣವನ್ನು ಸಂಪಾದಿಸಿದರೂ ಕೂಡ ಅವರ ಕೈಯಲ್ಲಿ ಬಿಡಿಗಾಸು ಕೂಡ ಉಳಿಯುವುದಿಲ್ಲ. ಇದಕ್ಕೆ ಆ ವ್ಯಕ್ತಿ ಯಾವ ರೀತಿ ಹಣ ಸಂಪಾದಿಸಿದ್ದಾನೆ ಎಂಬುದೇ ಪ್ರಮುಖ ಕಾರಣವಾಗಿರುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ- Chanakya Niti: ಹುಂಜದ ಈ 4 ಅಭ್ಯಾಸಗಳಲ್ಲಡಗಿದೆ ಯಶಸ್ಸಿನ ಗುಟ್ಟು, ಅನುಸರಿಸುವವರಿಗೆ ಯಶಸ್ಸು ಗ್ಯಾರಂಟಿ
ಈ ರೀತಿ ಸಂಪಾದಿಸಿದ ಹಣ ಎಂದಿಗೂ ಉಳಿಯುವುದಿಲ್ಲ:
* ಮೋಸ ಮಾಡಿ ಸಂಪಾದಿಸಿದ ಹಣ:
ಆಚಾರ್ಯ ಚಾಣಕ್ಯರ ಪ್ರಕಾರ, ಬೇರೆಯವರಿಗೆ ಮೋಸ ಮಾಡಿ ಕೆಟ್ಟ ದಾರಿಯಲ್ಲಿ ಸಂಪಾದಿಸ ಹಣ ಎಂದಿಗೂ ಕೈಯಲ್ಲಿ ನಿಲ್ಲುವುದಿಲ್ಲ. ಕೆಟ್ಟ ಮಾರ್ಗದಲ್ಲಿ ಎಷ್ಟೇ ಹಣ ಸಂಪಾದಿಸಿದರೂ ಕೂಡ ಅದು ವ್ಯರ್ಥವಾಗಿ ಖರ್ಚಾಗುತ್ತದೆಯೇ ಹೊರತು ನಿಮ್ಮ ಬಳಕೆಗೆ ಬರುವುದಿಲ್ಲ.
* ಅನ್ಯಾಯದಿಂದ ಸಂಪಾದಿಸಿದ ಹಣ:
ಇತರರು ಕಷ್ಟಪಟ್ಟು ದುಡಿದ ಹಣವನ್ನು ಕಳ್ಳತನ, ಜೂಜಾಟ, ಕೊಲೆ, ಸುಲಿಗೆ ಮೂಲಕ ತಮ್ಮದಾಗಿಸಲು ಬಯಸುವವರ ಬಳಿ ಲಕ್ಷ್ಮಿ ಕ್ಷಣಿಕವೂ ನಿಲ್ಲುವುದಿಲ್ಲ. ಈ ರೀತಿಯಾಗಿ ಅನ್ಯಾಯದಿಂದ ಅವರು ಎಷ್ಟೇ ಕೋಟಿ, ಕೋಟಿ ಹಣ ಗಳಿಸಿದರೂ ಕೂಡ ಕೊನೆಗೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ- Chanakya Niti : ಹಾವಿನ ಈ ಗುಣ ನೀವು ಅಳವಡಿಸಿಕೊಂಡ್ರೆ ಜೀವನದಲ್ಲಿ ನಿಮಗಿಲ್ಲ ಯಾವತ್ತೂ ಸೋಲು!
* ಅನೈತಿಕವಾಗಿ ಗಳಿಸಿದ ಹಣ:
ಕೆಲವರು ಇತರರಿಗೆ ಹಣವನ್ನು ಸಾಲವಾಗಿ ನೀಡಿ ಅವರಿಂದ ಸಾಲ ನೀಡಿದ ಹಣಕ್ಕಿಂತ ಹೆಚ್ಚು ಬಡ್ಡಿ ಹಣವನ್ನು ಸುಲಿಗೆ ಮಾಡುತ್ತಾರೆ. ಆದರೆ, ಈ ರೀತಿ ಅನೈತಿಕವಾಗಿ ಗಳಿಸಿದ ಸಂಪತ್ತು ಮಂಜಿನಂತೆ ಕರಗಳು ದೀರ್ಘ ಸಮಯ ಬೇಕಾಗುವುದಿಲ್ಲ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.