Chanakya Niti For Woman: ಆಚಾರ್ಯ ಚಾಣಕ್ಯರು ಓರ್ವ ಮಹಾನ್ ವಿದ್ವಾಂಸ, ನೀತಿಶಾಸ್ತ್ರ, ರಾಜತಾಂತ್ರಿಕ, ಶಿಕ್ಷಕ, ತಂತ್ರಜ್ಞ ಮತ್ತು ಅರ್ಥಶಾಸ್ತ್ರಜ್ಞರಾಗಿದ್ದರು. ಆಚಾರ್ಯ ಚಾಣಕ್ಯರು ತನ್ನ ನೀತಿಯ ಬಲದ ಮೇಲೆ ಚಂದ್ರಗುಪ್ತ ಮೌರ್ಯನಂತಹ ಸಾಮಾನ್ಯ ಮಗುವನ್ನು ಮಗಧ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿಸಿದ್ದರು. ಆಚಾರ್ಯ ಚಾಣಕ್ಯರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಚಾಣಕ್ಯ ನೀತಿ ತುಂಬಾ ವಿಶೇಷವಾಗಿದೆ. ಜೀವನ ಮತ್ತು ವ್ಯಕ್ತಿಗೆ ಸಂಬಂಧಿಸಿದ ಸಂಬಂಧಗಳು ಪೋಷಕರು, ಸ್ನೇಹಿತರು, ಹೆಂಡತಿ ಮತ್ತು ಸಹೋದರರ ಜೊತೆಗೆ ಹೇಗೆ ಇರಬೇಕು ಎಂಬುದರ ಬಗ್ಗೆಯೂ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿಯು ಚಾಣಕ್ಯ ನೀತಿ ಮಾತುಗಳನ್ನು ಅನುಸರಿಸಿದರೆ, ಅವನು ಖಂಡಿತವಾಗಿಯೂ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಚಾಣಕ್ಯ ನೀತಿಯಲ್ಲಿ, ಆಚಾರ್ಯ ಚಾಣಕ್ಯರು ಪುರುಷರಿಗಿಂತ ಮಹಿಳೆಯರಲ್ಲಿ ಅನೇಕ ಪಟ್ಟು ಹೆಚ್ಚು ಬಯಕೆಗಳ ಕುರಿತು ಕೂಡ ಹೇಳಿದ್ದಾರೆ.  ಬನ್ನಿ ಅವು ಯಾವುವು ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಚಾಣಕ್ಯ ನೀತಿ ಶ್ಲೋಕ:
ಸ್ತ್ರೀನಾಂ ದ್ವಿಗುಣ ಆಹಾರೋ ಚಾಪಿ ಚತುರ್ಗುಣ
ಸಾಹಸಂ ಷಡ್ಗುಣಂ ಕಾಮಶ್ಚಾಷ್ಠಗುಣಃ ಸ್ಮೃತಃ


ಚಾಣಕ್ಯ ನೀತಿಯ ಈ ಶ್ಲೋಕದಲ್ಲಿ, ಆಚಾರ್ಯ ಚಾಣಕ್ಯರು ಮಹಿಳೆಯರಲ್ಲಿ ಹಸಿವು ಪುರುಷರಿಗಿಂತ ಎರಡು ಪಟ್ಟು ಹೆಚ್ಚು,  ನಾಚಿಕೆ ಪುರುಷರಿಗಿಂತ 4 ಪಟ್ಟು ಹೆಚ್ಚು, ಧೈರ್ಯವು ಪುರುಷರಿಗಿಂತ 6 ಪಟ್ಟು ಹೆಚ್ಚು ಮತ್ತು ಕಾಮದ ಮನೋಭಾವವು ಪುರುಷರಿಗಿಂತ 8 ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. ಪುರುಷರಿಗಿಂತ ಹೆಚ್ಚಿನ ಸಹನಶಕ್ತಿ ಅಥವಾ ತಾಳ್ಮೆ ಹಾಗೂ ನಾಚಿಕೆಯ ಪ್ರಜ್ಞೆಯನ್ನು ಹೊಂದಿರುವ ಮಹಿಳೆಯರು ಎಂದಿಗೂ ಕೂಡ ತಮ್ಮ ಬಯಕೆಯನ್ನು ಬಹಿರಂಗಪಡಿಸುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳುತ್ತಾರೆ


ಮೂರ್ಖಶಿಷ್ಯೋಪದೇಶೇನ್ ದುಷ್ಟಸ್ತ್ರೀಭರಣೇನ್ ಚ.
ದುಃಖಿತೈ: ಸಮ್ಪ್ರಯೋಗೆಣ ಪಂಡಿತೋ-ಪ್ಯನ್ವಸಿದತಿ.


ಇದನ್ನೂ ಓದಿ-Tarot Card Horoscope : ವಾರದ ಟ್ಯಾರೋ ರಾಶಿ ಭವಿಷ್ಯ ; ದೀಪಾವಳಿಯ ಮುನ್ನವೇ ಈ ರಾಶಿಯವರಿಗೆ ಭಾರಿ ಆರ್ಥಿಕ ಲಾಭ! 


ಈ ಶ್ಲೋಕದಲ್ಲಿ ಆಚಾರ್ಯ ಚಾಣಕ್ಯರು ಶಿಷ್ಯನು ಮೂರ್ಖನಾಗಿದ್ದರೆ ಅವನಿಗೆ ಉಪದೇಶ ಮಾಡುವುದು ವ್ಯರ್ಥ, ಮಹಿಳೆ ಕೆಟ್ಟವಳಾಗಿದ್ದರೆ ಅವಳನ್ನು ಪೋಷಿಸುವುದು ವ್ಯರ್ಥ ಎಂದು ಹೇಳಿದ್ದಾರೆ. ನಿಮ್ಮ ಹಣ ವ್ಯರ್ಥವಾದರೆ ಅಥವಾ ಅತೃಪ್ತ ವ್ಯಕ್ತಿಯೊಂದಿಗೆ ನೀವು ಬಾಂಧವ್ಯವನ್ನು ಹೊಂದಿದ್ದರೆ, ನೀವು ಎಷ್ಟೇ ಬುದ್ಧಿವಂತರಾಗಿದ್ದರೂ ಸಹ, ನೀವು ಕಷ್ಟಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ-Chanakya Niti: ಇಂತಹ ಸ್ವಭಾವದ ಸ್ತ್ರೀ ಜೊತೆಗೆ ವಿವಾಹವಾದರೆ ಜೀವನವೇ ಹಾಳಾಗುತ್ತದೆ... ಎಚ್ಚರ!


(ಹಕ್ಕುತ್ಯಾಗ- ಈ ಲೇಖನ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.