Lucky Sign on Body: ಮೈಮೇಲೆ ಈ ಚಿಹ್ನೆಗಳಿರುವ ಮಹಿಳೆಯರು ತಮ್ಮ ಪತಿ ಮತ್ತು ಕುಟುಂಬಕ್ಕೆ ಭಾರಿ ಅದೃಷ್ಟವನ್ನೇ ತರುತ್ತಾರೆ

Signs Of Lucky Women: ಮಹಿಳೆ ಹಾಗೂ ಪುರುಷರ ಶರೀರದ ಅಂಗಾಂಗಗಳ ಮೂಲಕ ಅವರ ಭಾಗ್ಯ ಹಾಗೂ ಭವಿಷ್ಯವನ್ನು ಸಾಮುದ್ರಿಕ ಶಾಸ್ತ್ರದ ಮೂಲಕ ಹೇಳಲಾಗುತ್ತದೆ. ವ್ಯಕ್ತಿಯ ಅಂಗಗಳ ಮೇಲಿರುವ ಚಿಹ್ನೆಗಳು ಆ ವ್ಯಕ್ತಿಯ ಆರ್ಥಿಕ ಸ್ಥಿತಿಯ ಕುರಿತು ಮಾಹಿತಿ ನೀಡುತ್ತವೆ. 

Signs Of Lucky Women: ಮಹಿಳೆ ಹಾಗೂ ಪುರುಷರ ಶರೀರದ ಅಂಗಾಂಗಗಳ ಮೂಲಕ ಅವರ ಭಾಗ್ಯ ಹಾಗೂ ಭವಿಷ್ಯವನ್ನು ಸಾಮುದ್ರಿಕ ಶಾಸ್ತ್ರದ ಮೂಲಕ ಹೇಳಲಾಗುತ್ತದೆ. ವ್ಯಕ್ತಿಯ ಅಂಗಗಳ ಮೇಲಿರುವ ಚಿಹ್ನೆಗಳು ಆ ವ್ಯಕ್ತಿಯ ಆರ್ಥಿಕ ಸ್ಥಿತಿಯ ಕುರಿತು ಮಾಹಿತಿ ನೀಡುತ್ತವೆ. ಆ ವ್ಯಕ್ತಿ ತನ್ನ ಜೀವನದಲ್ಲಿ ಎಷ್ಟು ಯಶಸ್ಸನ್ನು ಸಂಪಾದಿಸುತ್ತಾನೆ ಎಂಬುದನ್ನು ಈ ಚಿಹ್ನೆಗಳು ಹೇಳುತ್ತವೆ. ಇಂದು ನಾವು ನಿಮಗೆ ಹುಡುಗಿಯರ ಶರೀರದ ಮೇಲೆ ಇರುವ ಕೆಲ ವಿಶೇಷ ಚಿಹ್ನೆಗಳ ಕುರಿತು ಮಾಹಿತಿ ನೀಡುತ್ತಿದ್ದು, ಈ ಚಿಹ್ನೆಗಳು ಅವರನ್ನು ಅಪಾರ ಭಾಗ್ಯಶಾಲಿಗಳನ್ನಾಗಿ ಮಾಡುತ್ತವೆ.

 

ಇದನ್ನೂ ಓದಿ-Sun Transit October 2022: ಎರಡು ದಿನಗಳ ಬಳಿಕ ಈ ರಾಶಿಗೆ ಸೂರ್ಯನ ಪ್ರವೇಶ, ಯಾರಿಗೆ ಲಾಭ? ಯಾರಿಗೆ ನಷ್ಟ?

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


 

1 /5

ಪಾದದ ಅಡಿಭಾಗ: ಪಾದಗಳು ನಯವಾದ, ಮೃದುವಾದ ಮತ್ತು ಕೆಂಪಾಗಿರುವ ಹೆಣ್ಣುಮಕ್ಕಳು ಅಥವಾ ಮಹಿಳೆಯರ ಮೇಲೆ ತಾಯಿ ಲಕ್ಷ್ಮಿ ವಿಶೇಷ ಅನುಗ್ರಹ ಇರುತ್ತದೆ ಎನ್ನಲಾಗಿದೆ.  ಅಂತಹ ಮಹಿಳೆಯರಿಗೆ ಎಂದಿಗೂ ಕೂಡ ಹಣದ ಕೊರತೆ ಇರುವುದಿಲ್ಲ. ಇದೇ ವೇಳೆ, ಪಾದದ ಅಡಿಭಾಗದ ಮೇಲೆ ಕಮಲ, ಶಂಖ ಅಥವಾ ಚಕ್ರದ ಗುರುತು ಇರುವುದು ಕೂಡ ಅವರಿಗೆ ಹೆಚ್ಚಿನ ಗೌರವವನ್ನು ನೀಡುತ್ತದೆ.  

2 /5

ಕಾಲಿನ ಹೆಬ್ಬೆರಳು: ಹೆಬ್ಬೆರಳು ಅಗಲ, ದುಂಡಾಗಿರುವ ಮಹಿಳೆಯರು ತಮ್ಮ ಕುಟುಂಬಕ್ಕೆ ತುಂಬಾ ಅದೃಷ್ಟವಂತರಾಗಿರುತ್ತಾರೆ. ಇವರು ತಮ್ಮ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಅದೃಷ್ಟದಿಂದ ಜೀವನದಲ್ಲಿ ಸಾಕಷ್ಟು ಪ್ರಗತಿ ಮತ್ತು ಸಂಪತ್ತನ್ನು ಪಡೆಯುತ್ತಾರೆ. ಇವುಗಳಿಂದಾಗಿ ಅವರ ಇಡೀ ಕುಟುಂಬ ಐಷಾರಾಮಿ ಜೀವನ ಸಾಗಿಸುತ್ತದೆ.  

3 /5

ಕೈ ಬೆರಳುಗಳು: ಕೈಯಲ್ಲಿ ಉದ್ದವಾದ ಬೆರಳುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಪತಿಗೆ ತುಂಬಾ ಅದೃಷ್ಟಶಾಲಿಯಾಗುತ್ತಾರೆ. ಇಂತಹ ಮಹಿಳೆಯರ ಪತಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ಇಂತಹ ಮಹಿಳೆಯರ ವಿವಾಹ ಸಾಮಾನ್ಯ ಕುಟುಂಬದಲ್ಲಿ ನೆರವೇರಿದರೂ ಕೂಡ, ಪತಿ ಶೀಘ್ರದಲ್ಲೇ ಶ್ರೀಮಂತನಾಗುತ್ತಾನೆ.  

4 /5

ಉದ್ದನೆಯ ಕುತ್ತಿಗೆ: ಇಂತಹ ಮಹಿಳೆಯರಿಗೆ ತಮ್ಮ ತಾಯಿಯ ಮನೆಯಲ್ಲಿ ಅಷ್ಟೇ ಅಲ್ಲ, ಅವರ ಅತ್ತೆಯ ಮನೆಯಲ್ಲೂ ಕೂಡ ಭಾರಿ ಘನತೆ ಮತ್ತು ಗೌರವ ಪ್ರಾಪ್ತಿಯಾಗುತ್ತದೆ.  

5 /5

ಅಂಗೈ: ಯಾವ ಯುವತಿಯರ ಅಂಗೈ ಹೊಳೆಯುವ, ಮೃದುವಾದ ಮತ್ತು ಕೆಂಪು ಬಣ್ಣದ್ದಾಗಿರುತ್ತದೆಯೋ, ಅಂತಹ ಮಹಿಳೆ ಅಥವಾ ಹುಡುಗಿಯರು ತುಂಬಾ ಅದೃಷ್ಟವಂತರಾಗಿರುತ್ತಾರೆ.ಇವರು  ತಮ್ಮ ಕುಟುಂಬದ ಗೌರವಕ್ಕೆ ಸಹ ಕಾರಣವಾಗುತ್ತಾರೆ. ಇಂತಹ ಮಹಿಳೆಯರು ಅಪಾರ ಸಂಪತ್ತನ್ನು ಹೊಂದಿರುತ್ತಾರೆ. ಇವರು ಸಾಕಷ್ಟು ಖ್ಯಾತಿಯನ್ನು ಸಹ ಪಡೆಯುತ್ತಾರೆ.