Chanakya Niti:ಈ ಐದು ಗುಣಗಳನ್ನು ಹೊಂದಿರುವ ಮಹಿಳೆಯರು ವ್ಯಕ್ತಿಯೊಬ್ಬನ ಭಾಗ್ಯವನ್ನೇ ಬದಲಾಯಿಸುತ್ತಾರೆ
Chanakya Niti: ಕೆಲವು ಮಹಿಳೆಯರು ಯಾವುದೇ ವ್ಯಕ್ತಿಯನ್ನು ಅದೃಷ್ಟವಂತರನ್ನಾಗಿ ಮಾಡಬಹುದು. 5 ವಿಶೇಷ ಗುಣಗಳನ್ನು ಹೊಂದಿರುವ ಮಹಿಳೆಯರು (Woman With Extra Ordinary Characters) ಯಾವುದೇ ವ್ಯಕ್ತಿಯ ಅದೃಷ್ಟವನ್ನು ಬದಲಾಯಿಸುವ ಶಕ್ತಿ ಹೊಂದಿರುತ್ತಾರೆ.
Chanakya Niti Thoughts: ಆಚಾರ್ಯ ಚಾಣಕ್ಯ (Acharya Chanakya) ಭಾರತದ ವಿದ್ವಾಂಸರಲ್ಲಿ ಒಬ್ಬರು. ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡುವಲ್ಲಿ ಅವರ ದೊಡ್ಡ ಪಾತ್ರವಿದೆ. ಅವರು ಬರೆದ ನೀತಿಗಳು ಇಂದಿನ ಯುಗದಲ್ಲೂ ಪ್ರಸ್ತುತವಾಗಿವೆ. ಇಂದಿನ ಯುಗದಲ್ಲೂ ಚಾಣಕ್ಯ ಬರೆದ ನೀತಿಗಳು ಸತ್ಯವೆಂದು ಸಾಬೀತುಪಡಿಸುತ್ತವೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ಅವನು ಚಾಣಕ್ಯ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಚಾಣಕ್ಯ ಮಹಿಳೆಯ ಬಗ್ಗೆ ವಿವರವಾಗಿ ತನ್ನ ನೀತಿಯಲ್ಲಿ ಹೇಳಿದ್ದಾರೆ. ಕೆಲವು ಮಹಿಳೆಯರು ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸಬಹುದು ಎಂದು ಚಾಣಕ್ಯ ಹೇಳಿದ್ದಾರೆ. 5 ವಿಶೇಷ ಗುಣಗಳನ್ನು (Special Characters) ಹೊಂದಿರುವ ಮಹಿಳೆ, ಯಾವುದೇ ವ್ಯಕ್ತಿಯನ್ನು ಅದೃಷ್ಟವಂತನನ್ನಾಗಿ ಮಾಡಬಹುದು. ಈ ಮಹಿಳೆ (Woman With Extra Ordinary Characters) ಒಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿ, ಸಹೋದರಿ, ಸ್ನೇಹಿತ, ಹೆಂಡತಿ ಅಥವಾ ಗೆಳತಿ ಹೀಗೆ ಯಾವುದೇ ರೂಪದಲ್ಲಿರಬಹುದು.
ಧಾರ್ಮಿಕ ಮಹಿಳೆ
ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಧಾರ್ಮಿಕ ಮಹಿಳೆಯನ್ನು ಹೊಂದಿದ್ದರೆ, ಅವನ ಭವಿಷ್ಯವು ಬದಲಾಗಬಹುದು. ಈ ಮಹಿಳೆಯರು ಪ್ರತಿದಿನ ಪೂಜೆ ಮಾಡುತ್ತಾರೆ. ಪ್ರತಿನಿತ್ಯ ಪೂಜೆ ಮಾಡುವ ಮನೆಗಳಲ್ಲಿ ದೇವರ ವಾಸ ಇರುತ್ತದೆ. ಹೀಗಿರುವಾಗ ಅಂತಹ ಮಹಿಳೆ ಯಾರ ಮನೆಯಲ್ಲಿ ಇರುತ್ತಾರೆ, ಅವರು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುವುದಿಲ್ಲ.
ಸಂತೃಪ್ತ ಮಹಿಳೆ
ಸಂತೃಪ್ತಿ ಹೊಂದಿರುವ ಮಹಿಳೆ, ಯಾವುದೇ ಪರಿಸ್ಥಿತಿಯಲ್ಲಿ ತನ್ನ ಸಂಗಾತಿಯನ್ನು ಬೆಂಬಲಿಸುತ್ತಾಳೆ. ದೊಡ್ಡ ಕಷ್ಟದಲ್ಲೂ ತೃಪ್ತರಾಗಿರುವ ಮಹಿಳೆಯರು ತಮ್ಮ ಸಂಗಾತಿಗೆ ಬೆಂಬಲ ನೀಡುತ್ತಾರೆ.
ತಾಳ್ಮೆಯ ಮಹಿಳೆ
ತನ್ನ ಜೀವನದಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳುವ ವ್ಯಕ್ತಿಯು ಎಂದಿಗೂ ಯಾರ ಕೈಯಲ್ಲಿಯೂ ಸೋಲನ್ನು ಅನುಭವಿಸುವುದಿಲ್ಲ. ತನ್ನ ಜೀವನದಲ್ಲಿ ತಾಳ್ಮೆ ಹೊಂದಿರುವ ಮಹಿಳೆಯನ್ನು ಹೊಂದಿರುವ ವ್ಯಕ್ತಿಯ ಭವಿಷ್ಯವನ್ನು ಬದಲಾಗಲು ಸಮಯ ಬೇಕಾಗುವುದಿಲ್ಲ.
ಇದನ್ನೂ ಓದಿ-Success Mantra: ಯಶಸ್ವಿ ವ್ಯಕ್ತಿಗಳಲ್ಲಿ ಈ 5 ಸಂಗತಿಗಳು ಕಾಮನ್ ಆಗಿರುತ್ತವೆ, ನಿಮ್ಮಲ್ಲಿವೆಯಾ? ಪರಿಶೀಲಿಸಿ
ಜಾಸ್ತಿ ಕೋಪಿಸಿಕೊಳ್ಳದ ಮಹಿಳೆ
ಕೋಪವನ್ನು ಮನುಷ್ಯನ ಶತ್ರು ಎಂದು ಕರೆಯಲಾಗುತ್ತದೆ. ಕೋಪಗೊಳ್ಳದ ಮಹಿಳೆ ಇರುವ ಮನೆಯಲ್ಲಿ ಯಾವಾಗಲೂ ಶಾಂತಿ ಇರುತ್ತದೆ. ಶಾಂತಿ ಇರುವ ಮನೆಗಳಲ್ಲಿ ದೇವರೂ ನೆಲೆಸುತ್ತಾನೆ. ಅಂತಹ ಮನೆಗಳಲ್ಲಿ ದೊಡ್ಡ ಅಡೆತಡೆಗಳು ಎಂದಿಗೂ ಬರುವುದಿಲ್ಲ.
ಇದನ್ನೂ ಓದಿ-ನಿಮ್ಮ ವೃತ್ತಿ ಜೀವನವನ್ನೇ ಬುಡಮೇಲು ಮಾಡುವ ಒಂದು ವಾಸ್ತು ದೋಷ ಯಾವುದು ತಿಳಿಯಿರಿ
ಸುಮಧುರ ಮಾತನಾಡುವ ಮಹಿಳೆ
ಮಧುರವಾದ ಮಾತುಗಳನ್ನಾಡುವ ಮಹಿಳೆ ವ್ಯಕ್ತಿಯ ಜೀವನದಲ್ಲಿ ಇದ್ದರೆ, ಅವನ ಅದೃಷ್ಟವು ಬದಲಾಗಬಹುದು. ಈ ಮಹಿಳೆಯರು ಯಾವಾಗಲೂ ತಮ್ಮ ಮನೆಯ ವಾತಾವರಣವನ್ನು ಆಹ್ಲಾದಕರವಾಗಿರಿಸುತ್ತಾರೆ ಮತ್ತು ಎಲ್ಲರನ್ನು ಸಂತೋಷವಾಗಿರಿಸುತ್ತಾರೆ.
ಇದನ್ನೂ ಓದಿ-Weekly Horoscope: ಈ ಎರಡು ರಾಶಿಯವರಿಗೆ ಆಗಲಿದೆ ಭಾರಿ ಧನ ಲಾಭ, ತಿಳಿಯಿರಿ ಹೇಗಿರಲಿದೆ ನಿಮ್ಮ ವಾರ ಭವಿಷ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.