Weekly Horoscope: ಈ ಎರಡು ರಾಶಿಯವರಿಗೆ ಆಗಲಿದೆ ಭಾರಿ ಧನ ಲಾಭ, ತಿಳಿಯಿರಿ ಹೇಗಿರಲಿದೆ ನಿಮ್ಮ ವಾರ ಭವಿಷ್ಯ

ನವೆಂಬರ್ 22  2021 ರಿಂದ ನವೆಂಬರ್ 28 ರವರೆಗೆ  ದ್ವಾದಶ ರಾಶಿಗಳ ರಾಶಿಫಲ ಹೇಗಿರಲಿದೆ ನೋಡೋಣ.

Written by - Zee Kannada News Desk | Last Updated : Nov 21, 2021, 02:31 PM IST
  • ಹೇಗಿರಲಿದೆ ಈ ವಾರದ ಭವಿಷ್ಯ
  • ಯಾರಿಗೆ ಶುಭ ಯಾರಿಗೆ ಅಶುಭ?
  • ಎರಡು ರಾಶಿಯವರಿಗೆ ಆಗಲಿದೆ ಧನಲಾಭ
Weekly Horoscope: ಈ ಎರಡು ರಾಶಿಯವರಿಗೆ ಆಗಲಿದೆ ಭಾರಿ ಧನ ಲಾಭ, ತಿಳಿಯಿರಿ ಹೇಗಿರಲಿದೆ ನಿಮ್ಮ ವಾರ ಭವಿಷ್ಯ title=
weekly horoscope(file photo)

ನವದೆಹಲಿ : ನವೆಂಬರ್ ಕೊನೆಯ ವಾರದಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಭಾರೀ ಧನಲಾಭವಾಗಲಿದೆ. ಈ ಸಮಯದಲ್ಲಿ ಅವರು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು.  ನವೆಂಬರ್ 22  2021 ರಿಂದ ನವೆಂಬರ್ 28 ರವರೆಗೆ  ದ್ವಾದಶ ರಾಶಿಗಳ ರಾಶಿಫಲ ಹೇಗಿರಲಿದೆ ನೋಡೋಣ.. 

ಮೇಷ (Aries): ಮೇಷ ರಾಶಿಯವರಿಗೆ ಆರಂಭಿಕ ದಿನಗಳಲ್ಲಿ ಕೆಲವು ಆರೋಗ್ಯ ಸಂಬಂಧಿ ತೊಂದರೆಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಿ. ಈ ವಾರ ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಸೋಮಾರಿತನದಿಂದಾಗಿ, ಈ ವಾರ ನಿಮ್ಮ ಕೆಲವು ಕೆಲಸಗಳನ್ನು ಅಪೂರ್ಣವಾಗಿ ಉಳಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಸಾಮರಸ್ಯದಿಂದ ನಡೆದುಕೊಳ್ಳುವುದರಿಂದ ಪ್ರಯೋಜನವಾಗಬಹುದು. 

ವೃಷಭ (Taurus): ವೃಷಭ ರಾಶಿಯವರಿಗೆ ಧನ ಲಾಭವಾಗಬಹುದು. ವಾರದ ಮಧ್ಯದಲ್ಲಿ, ವ್ಯಾಪಾರ ಸಂಬಂಧಿತ ಕೆಲಸಗಳಲ್ಲಿ ಲಾಭ ಮತ್ತು ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು.

ಇದನ್ನೂ ಓದಿ : Budhaditya Yoga: ಬುಧ- ಸೂರ್ಯನ ಸಂಯೋಗದಿಂದ ಈ 5 ರಾಶಿಯವರಿಗೆ ಸಿಗಲಿದೆ ಶುಭಫಲ..!

ಮಿಥುನ  (Gemini): ಮಿಥುನ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ . ಅಧಿಕಾರಿಗಳ ಜೊತೆಗಿನ ನಿಮ್ಮ ಬಾಂಧವ್ಯ ಉತ್ತಮವಾಗಿರುತ್ತದೆ.  . ಈ ವಾರ ನಿಮ್ಮ ಸೌಕರ್ಯಗಳು ಹೆಚ್ಚಾಗಬಹುದು. ಸಹೋದರರು ಮತ್ತು ಸ್ನೇಹಿತರ ಸಹಕಾರ ಸಿಗುತ್ತದೆ. ಕುಟುಂಬ ಮತ್ತು ವೈವಾಹಿಕ ಜೀವನವು ಈ ವಾರ ಉತ್ತಮವಾಗಿರುತ್ತದೆ.
 

ಕರ್ಕಾಟಕ (Cancer​) : ಕರ್ಕಾಟಕ ರಾಶಿಯವರಿಗೆ ಸ್ವಾಭಿಮಾನ ಹೆಚ್ಚಾಗಬಹುದು.  ನೀವು ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯವು ಉತ್ತಮವಾಗಿರುತ್ತದೆ. ವಾರದ ಮಧ್ಯದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

ಸಿಂಹ (Leo): ಸಿಂಹ ರಾಶಿಯವರು ಭಾರೀ ಲಾಭವನ್ನು ಪಡೆಯಬಹುದು.  ಈ ವಾರ ನಿಮಗೆ ಉಡುಗೊರೆಗಳು ಮತ್ತು ಗೌರವ ಸಿಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಈ ವಾರ ಶುಭಕರವಾಗಿರುತ್ತದೆ. ವಾರದ ಮಧ್ಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಬಹುದು.

ಇದನ್ನೂ ಓದಿ : Remedies To Get Rid Of Poverty: ನೀವೂ ಕೂಡ ನಿಮ್ಮ ಮನೆಗಳಲ್ಲಿ ಈ ಕೆಲಸ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ, ದೇವಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ

ಕನ್ಯಾ ರಾಶಿ (Virgo) : ಕನ್ಯಾ ರಾಶಿಯವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ.  ಈ ವಾರ ನೀವು ಕೆಲವು ಉತ್ತಮ ವ್ಯಾಪಾರ ಲಾಭವನ್ನು ಪಡೆಯಬಹುದು. ವಾರದ ಮಧ್ಯದಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಹೊಂದಬಹುದು. 

ತುಲಾ (Libra): ತುಲಾ ರಾಶಿಯವರ ಆರ್ಥಿಕ ಸ್ಥಿತಿ ಸದೃಢವಾಗಲಿದೆ. ಈ ವಾರ ನೀವು ಕುಟುಂಬ ಸದಸ್ಯರಿಂದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ. ಈ ವಾರ ಕೆಲಸದ ಬಗ್ಗೆ ಸ್ವಲ್ಪ ಆಲಸ್ಯ ಇರಬಹುದು. ದುಡಿಯುವ ವರ್ಗದವರಿಗೆ ಈ ವಾರ ಉತ್ತಮ ಲಾಭ ದೊರೆಯುವ ಲಕ್ಷಣಗಳಿವೆ. 

 ವೃಶ್ಚಿಕ  (Scorpio): ವೃಶ್ಚಿಕ ರಾಶಿಯವರಿಗೆ ಗೃಹೋಪಯೋಗಿ ವಸ್ತುಗಳಿಗೆ ಹಣ ಖರ್ಚಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರ ವರ್ಗದವರಿಗೆ ಈ ವಾರ ಲಾಭದಾಯಕವಾಗಿರುತ್ತದೆ. ಹಳೆಯ ಹೂಡಿಕೆಗಳು ಈ ವಾರ ನಿಮಗೆ ಲಾಭವನ್ನು ನೀಡಬಹುದು.

ಇದನ್ನೂ ಓದಿ : Surya Grahan 2021: ಈ ದಿನ ಸಂಭವಿಸಲಿದೆ ವರ್ಷದ ಕೊನೆಯ ಸೂರ್ಯಗ್ರಹಣ, ತಿಳಿಯಿರಿ ಯಾರ ಮೇಲೆ ಯಾವ ಪರಿಣಾಮ ?

ಧನು ರಾಶಿ (Sagittarius): ಧನು ರಾಶಿಯವರಿಗೆ ಉತ್ತಮ ಲಾಭ ದೊರೆಯುತ್ತದೆ.  ಈ ವಾರ ಕೌಟುಂಬಿಕ ವಿಚಾರಗಳಲ್ಲಿ ಸ್ವಲ್ಪ ಜಾಗ್ರತೆಯಿಂದ ನಡೆದುಕೊಳ್ಳುವುದು ಒಳ್ಳೆಯದು.  ಈ ವಾರ ನಿಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಿರಬಹುದು.

ಮಕರ (Capricorn) : ಮಕರ ರಾಶಿಯವರಿಗೆ ಉತ್ತಮ ಧನ ಲಾಭ ದೊರೆಯಲಿದೆ.  ಈ ವಾರ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ವಾರ ನೀವು ಪ್ರೇಮ ಸಂಬಂಧದ ವಿಷಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಈ ವಾರ ಯಶಸ್ವಿಯಾಗಲಿದೆ. 

 ಕುಂಭ (Aquarius): ಕುಂಭ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ.  ಈ ವಾರ ನಿಮ್ಮ ಗೌರವ ಹೆಚ್ಚಾಗಬಹುದು. ವಾರದ ಮಧ್ಯದಲ್ಲಿ ಕೆಲವು ಚಿಂತೆ ನಿಮ್ಮನ್ನು ಕಾಡಬಹುದು. ಕೆಲಸದ ವಿಷಯದಲ್ಲಿ ವಾರವು ಉತ್ತಮವಾಗಿರುತ್ತದೆ.

ಮೀನ (Pisces): ಮೀನ ರಾಶಿಯವರಿಗೆ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ತೊಂದರೆಯಾಗಬಹುದು. ಕುಟುಂಬ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.  ಈ ವಾರ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗಬಹುದು. ಅನುಪಯುಕ್ತ ಚಟುವಟಿಕೆಗಳಿಂದ ದೂರವಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News