Chanakya Niti:ಜೀವನದಲ್ಲಿ ಈ ಜನರ ಜೊತೆಗೆ ಎಂದಿಗೂ ಪಂಗಾಗಿಳಿಯಬೇಡಿ, ಸೋಲು ಕಟ್ಟಿಟ್ಟ ಬುತ್ತಿ
Chanakya Niti: ಆಚಾರ್ಯ ಚಾಣಕ್ಯ ಹೇಳುವಂತೆ ಕೆಲವರೊಂದಿಗೆ ದ್ವೇಷ ಸಾಧಿಸದಿರುವುದು ಉತ್ತಮ. ಇಲ್ಲದಿದ್ದರೆ, ಈ ಜನರು ಹಗೆತನದ ಅನ್ವೇಷಣೆಯಲ್ಲಿ ನಿಮಗೆ ದೊಡ್ಡ ಹಾನಿ ಮಾಡಬಹುದು.
ಚಾಣಕ್ಯ ನೀತಿ: Chanakya Niti - ಆಚಾರ್ಯ ಚಾಣಕ್ಯ (Acharya Chanakya) ರಾಜತಾಂತ್ರಿಕತೆ ಮತ್ತು ಅರ್ಥಶಾಸ್ತ್ರದ ವಿದ್ವಾಂಸರಾಗಿದ್ದರು. ಇದಲ್ಲದೇ ಕೌಟುಂಬಿಕ ಸಂಬಂಧಗಳು, ಸೌಹಾರ್ದ-ಹಗೆತನ (Chankya Niti About Enemy) ಲಾಭ-ನಷ್ಟ ಇತ್ಯಾದಿ ಸಮಾಜದ ಹಲವು ಅಂಶಗಳ ಕುರಿತು ಮಹತ್ವದ ವಿಷಯಗಳನ್ನು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ಚಾಣಕ್ಯ ನೀತಿಯ ಈ ವಿಷಯಗಳನ್ನು ಅಳವಡಿಸಿಕೊಂಡರೆ, ಅವನು ಅನೇಕ ತೊಂದರೆಗಳು ಮತ್ತು ನಷ್ಟಗಳನ್ನು ತಪ್ಪಿಸಬಹುದು. ಅಂತಹ ಒಂದು ವಿಷಯವೆಂದರೆ ಅದು ದ್ವೇಷ. ಆಚಾರ್ಯ ಚಾಣಕ್ಯರು ಅಪ್ಪಿತಪ್ಪಿಯೂ ಕೂಡ ಕೆಲ ವ್ಯಕ್ತಿಗಳ ಜೊತೆಗೆ ಹಗೆತನ ಮಾಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಈ ವ್ಯಕ್ತಿಗಳು ಒಂದು ವೇಳೆ ವೈರತ್ವ ಸಾಧಿಸಲು ಮುಂದಾದರೆ ನಮಗೆ ಅತಿ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಜನರೊಂದಿಗೆ ದ್ವೇಷ ಸಾಧಿಸಬೇಡಿ
ಆಯುಧಗಳನ್ನು ಹೊಂದಿರುವ ವ್ಯಕ್ತಿ: ಆಯುಧಗಳನ್ನು ಹೊಂದಿರುವವರೊಂದಿಗೆ ಎಂದಿಗೂ ದ್ವೇಷ ಸಾಧಿಸಬಾರದು. ಇಲ್ಲದಿದ್ದರೆ, ನೀವು ಒಂದು ವೇಳೆ ಮಿತಿ ಮೀರಿ ಅವರ ಮೇಲೆ ದಾಳಿ ನಡೆಸಿದರೆ, ಅವರು ನಿಮ್ಮ ಮೇಲೆ ಮಾರಣಾಂತಿಕವಾಗಿ ಆಕ್ರಮಣ ಮಾಡಬಹುದು.
ನಿಮ್ಮ ರಹಸ್ಯಗಳನ್ನು ತಿಳಿದಿರುವ ವ್ಯಕ್ತಿ: ನಿಮ್ಮ ಎಲ್ಲಾ ರಹಸ್ಯಗಳನ್ನು ತಿಳಿದಿರುವ ವ್ಯಕ್ತಿಯ ಜೊತೆಗೆ ಅಪ್ಪಿ-ತಪ್ಪಿಯೂ ಕೂಡ ಹಗೆತನ ಸದಿಸಬೇಡಿ. ಅಂತಹ ಜನರು ಶತ್ರುಗಳಾಗಿದ್ದರೆ, ನಿಮ್ಮ ರಹಸ್ಯಗಳನ್ನು ಬಹಿರಂಗಪಡಿಸುವ ಮೂಲಕ, ಅವರು ನಿಮ್ಮ ಇಮೇಜ್ಗೆ ದೊಡ್ಡ ಹಾನಿಯನ್ನು ಉಂಟುಮಾಡಬಹುದು.
ಶ್ರೀಮಂತ ವ್ಯಕ್ತಿ: ಆರ್ಥಿಕ ಸ್ಥಿತಿಯಲ್ಲಿ ನಿಮಗಿಂತ ಹೆಚ್ಚು ಬಲಶಾಲಿಯಾಗಿರುವ ವ್ಯಕ್ತಿಯೊಂದಿಗೆ ಹಗೆತನ ಸಾಧಿಸಬಾರದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಹಣದ ಬಲದಿಂದ ಅವನು ನಿಮಗೆ ದೊಡ್ಡ ಹಾನಿ ಮಾಡಬಹುದು.
ಪ್ರಭಾವಿ ವ್ಯಕ್ತಿ: ರಾಜಕಾರಣಿಗಳು, ಪೊಲೀಸರು ಅಥವಾ ಇನ್ನಾವುದೇ ಪ್ರಭಾವಿ ವ್ಯಕ್ತಿಗಳೊಂದಿಗೆ ಹಗೆತನ ಸಾಧಿಸಿದರೆ, ನಿಮ್ಮ ತಪ್ಪಿಲ್ಲದಿದ್ದರೂ ಕೂಡ ನೀವು ದೊಡ್ಡ ಹಾನಿಗೆ ಗುರಿಯಾಗಬಹುದು. ಹಾಗಾಗಿ ಅವರಿಂದ ದೂರವಿರಿ.
ಮೂರ್ಖ ವ್ಯಕ್ತಿ: ಬುದ್ಧಿವಂತಿಕೆ ಇಲ್ಲದ ವ್ಯಕ್ತಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ತಿಳುವಳಿಕೆಯೂ ಇರುವುದಿಲ್ಲ. ಅಂತಹ ವ್ಯಕ್ತಿಯು ಕೋಪಗೊಂಡಾಗ, ಅವನು ಯೋಚಿಸದೆ ಏನು ಬೇಕಾದರೂ ಮಾಡಬಹುದು.
ಬಾಸ್ ಅಥವಾ ಮಾಲೀಕ: ಆಚಾರ್ಯ ಚಾಣಕ್ಯ ಅವರು ಬಾಸ್ ಅಥವಾ ಮಾಲೀಕರೊಂದಿಗೆ ಎಂದಿಗೂ ದ್ವೇಷ ಸಾಧಿಸಬಾರದು ಎಂದು ಹೇಳುತ್ತಾರೆ. ಅವರು ನಿಮಗೆ ಅನೇಕ ವಿಧಗಳಲ್ಲಿ ಹಾನಿ ಮಾಡಬಹುದು.
ವೈದ್ಯ: ಚಾಣಕ್ಯ ನೀತಿಯ ಪ್ರಕಾರ, ಒಬ್ಬನು ತನ್ನ ವೈದ್ಯನೊಂದಿಗೆ ಅಂದರೆ ವೈದ್ಯರೊಂದಿಗೆ ದ್ವೇಷ ಸಾಧಿಸಬಾರದು. ವೈದ್ಯರು ಅಗತ್ಯ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಅಥವಾ ತಪ್ಪಾಗಿ ಚಿಕಿತ್ಸೆ ನೀಡಿದರೆ, ನಿಮ್ಮ ಜೀವಕ್ಕೆ ಅಪಾಯವಿದೆ.
ಇದನ್ನೂ ಓದಿ-Vastu Tips:ಮನೆಯಲ್ಲಿ ತುಳಸಿ ಗಿಡ ನೆಡುವ ಸರಿಯಾದ ಜಾಗ ತಿಳಿದುಕೊಳ್ಳಿ, ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗುತ್ತದೆ
ಕವಿ ಅಥವಾ ಬರಹಗಾರ: ಕವಿಗಳು, ಬರಹಗಾರರು, ಪತ್ರಕರ್ತರು ತಮ್ಮ ಲೇಖನಿಯ ಮೂಲಕ ಮಾತ್ರ ಶಸ್ತ್ರಾಸ್ತ್ರಗಳಿಗಿಂತ ಹೆಚ್ಚಿನ ಹಾನಿ ಮಾಡಬಹುದು. ಆದ್ದರಿಂದ ಈ ಜನರೊಂದಿಗೆ ಎಂದಿಗೂ ಪಣಕ್ಕಿಳಿಯಬೇಡಿ, ಅವರು ನಿಮ್ಮ ಇಮೇಜ್ ಅನ್ನು ಹಾಳುಮಾಡಲು ವಿಳಂಬ ಮಾಡುವುದಿಲ್ಲ.
ಇದನ್ನೂ ಓದಿ-Guru Rashi Parivartan 2021: ಈ 4 ರಾಶಿಯವರು ಶೀಘ್ರವೇ ಶುಭ ಸುದ್ದಿ ಪಡೆಯುತ್ತಾರೆ, ಜೀವನವೇ ಬದಲಾಗಲಿದೆ
ಬಾಣಸಿಗ: ಬಾಣಸಿಗ ಅಥವಾ ಅಡುಗೆ ಮಾಡುವವರಿಂದ ದೂರವಿರುವುದು ಸರಿ. ದ್ವೇಷವನ್ನು ಪೂರೈಸಲು, ಅವನು ನಿಮಗೆ ಆಹಾರದಲ್ಲಿ ಏನನ್ನಾದರೂ ಬೆರೆಸುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ-Tulsi Vivah 2021 : ನಾಳೆ ತುಳಸಿ ವಿವಾಹ : ಶುಭ ಮುಹೂರ್ತ ಹಾಗೂ ಪೂಜಾ ವಿಧಾನದ ಬಗ್ಗೆ ತಿಳಿಯಿರಿ
(Disclaimer:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಬಿಕೆಗಳು ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.