Chanakya Niti: ಯಾವುದೇ ಪರಿಸ್ಥಿತಿ ಇರಲಿ, ಈ ಜನರಿಗೆ ಯಶಸ್ಸು ಸಿಕ್ಕೆ ಸಿಗುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ
Chanakya Niti For Success - ಆಚಾರ್ಯ ಚಾಣಕ್ಯ (Acharya Chanakya) ಒಬ್ಬ ಮಹಾನ್ ರಾಜತಾಂತ್ರಿಕ, ರಾಜಕಾರಣಿ ಮತ್ತು ಶಿಕ್ಷಣ ತಜ್ಞರಾಗಿದ್ದರು. ಚಾಣಕ್ಯ ಜೀವನದ ಅನೇಕ ಅಂಶಗಳಿಗೆ ಸಂಬಂಧಿಸಿದ ನೀತಿಗಳನ್ನು (Chanakya Niti) ತನ್ನ ನೀತಿ ಶಾಸ್ತ್ರದಲ್ಲಿ (Acharya Chanakya Niti Shastra) ವಿವರಿಸಿದ್ದಾರೆ.
Chanakya Niti For Success - ಆಚಾರ್ಯ ಚಾಣಕ್ಯ (Acharya Chanakya) ಒಬ್ಬ ಮಹಾನ್ ರಾಜತಾಂತ್ರಿಕ, ರಾಜಕಾರಣಿ ಮತ್ತು ಶಿಕ್ಷಣ ತಜ್ಞರಾಗಿದ್ದರು. ಚಾಣಕ್ಯ ಜೀವನದ ಅನೇಕ ಅಂಶಗಳಿಗೆ ಸಂಬಂಧಿಸಿದ ನೀತಿಗಳನ್ನು (Chanakya Niti) ತನ್ನ ನೀತಿ ಶಾಸ್ತ್ರದಲ್ಲಿ (Acharya Chanakya Niti Shastra) ವಿವರಿಸಿದ್ದಾರೆ. ಚಾಣಕ್ಯ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರು ತಮ್ಮ ಜೀವನವನ್ನು ಸರಳ ಮತ್ತು ಸುಲಭವಾಗಿಸುತ್ತಾರೆ. ಚಾಣಕ್ಯರ ನೀತಿಗಳು ಇಂದಿಗೂ ಪ್ರಾಸಂಗಿಕ ಮತ್ತು ಪ್ರಸ್ತುತವಾಗಿವೆ.
Chanakya Niti For Relationship - ಚಾಣಕ್ಯರ ನೀತಿಗಳು ಕೇಳಲು ಕಠಿಣ ಎನಿಸಿದರೂ ಕೂಡ ಒಬ್ಬ ವ್ಯಕ್ತಿಯು ಆ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂತೋಷ ಜೀವನವನ್ನು ನಡೆಸಬಲ್ಲ. ತನ್ನ ಜೀವನದಲ್ಲಿ ಯಸಸ್ಸು ಸಂಪಾದಿಸುವ ಅಂತಹ ವ್ಯಕ್ತಿಗಳ ಕುರಿತು ಚಾಣಕ್ಯ ತನ್ನ ಒಂದು ನೀತಿಯಲ್ಲಿ ಉಲ್ಲೇಖಿಸಿದ್ದಾರೆ. ಎಂತಹ ಸನ್ನಿವೇಶ ಇದ್ದರೂ ಕೂಡ ಈ ವ್ಯಕ್ತಿಗಳು ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸುತ್ತಾರೆ. ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ತಮ್ಮ ಗುರಿಗಳನ್ನು ಇವರು ಸಾಧಿಸಿಯೇ ತೀರುತ್ತಾರೆ. ಯಾರು ಆ ವ್ಯಕ್ತಿ ತಿಳಿದುಕೊಳ್ಳೋಣ ಬನ್ನಿ.
Chanakya Niti For Motivation - ಜೀವನದಲ್ಲಿ ಸೋತು ಹೋದ ವ್ಯಕ್ತಿಯ ಸಲಹೆ - ಜೀವನದಲ್ಲಿ ಯಶಸ್ಸು ಸಂಪಾದಿಸಲು ಜೀವನದಲ್ಲಿ ಸೋತು ಹೋದ ವ್ಯಕ್ತಿಯ ಸಲಹೆಯನ್ನು ಕೂಡ ಪಡೆಯಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ತಾವು ಮಾಡಿದ ತಪ್ಪು ಹಾಗೂ ತಾವು ಕಲಿತ ಪಾಠದ ಕುರಿತು ಹೇಳುತ್ತಾರೆ. ಇದರಿಂದ ಯಶಸ್ಸಿನ ದಾರಿ ಸುಗಮವಾಗುತ್ತದೆ.
ಇದನ್ನೂ ಓದಿ-Vastu Tips: ಮನೆಯಲ್ಲಿನ ಋಣಾತ್ಮಕ ಶಕ್ತಿ ತೊಲಗಿ, ಧನಾತ್ಮಕ ಶಕ್ತಿ ತುಂಬಲು ಈ ಕೆಲಸ ಮಾಡಲು ಮರೆಯದಿರಿ
Chanakya Niti For Successful People - ಯಶಸ್ವಿ ವ್ಯಕ್ತಿಯ ಸಲಹೆ - ಜೀವನದಲ್ಲಿ ಯಶಸ್ಸ್ಸು ಸಾಧಿಸಲು ಸೋತು ಹೋದ ವ್ಯಕ್ತಿಯ ಸಲಹೆಯ ಜೊತೆಗೆ ಯಶಸ್ಸು ಸಂಪಾದಿಸಿದ ವ್ಯಕ್ತಿಯ ಸಲಹೆಯೂ ಕೂಡ ಪಡೆಯಬೇಕು ಎನ್ನುತ್ತಾರೆ. ಯಶಸ್ಸು ಪಡೆದ ವ್ಯಕ್ತಿ ತನ್ನ ಜೀವನದ ಅನುಭವ ಹಾಗೂ ತಾವು ಪಟ್ಟ ಪರಿಶ್ರಮದ ಕಥೆಯನ್ನು ಹೇಳಿ ಹುರಿದುಂಬಿಸುತ್ತಾರೆ ಮತ್ತು ಜೀವನದಲ್ಲಿ ಗೆಲ್ಲಲು ಪ್ರೋತ್ಸಾಹಿಸುತ್ತಾರೆ.
ಇದನ್ನೂ ಓದಿ-Y-Break App ಡೌನ್ ಲೋಡ್ ಮಾಡಿ ಹಾಗೂ 5 ನಿಮಿಷ ಯೋಗ ಮಾಡಿ, ಸರ್ಕಾರಿ ನೌಕರರಿಗೆ ಆದೇಶ
ಸ್ವಂತ ತಿಳುವಳಿಕೆ - ಜೀವನದಲ್ಲಿ ಯಶಸ್ಸು ಸಂಪಾದಿಸಲು ವ್ಯಕ್ತಿಗೆ ತನ್ನ ಸ್ವಂತ ತಿಳುವಳಿಕೆಯ ಕುರಿತು ಅರಿವಿರಬೇಕು. ಯಾವ ವ್ಯಕ್ತಿ ಜೀವನದಲ್ಲಿ ತನ್ನ ತಿಳುವಳಿಕೆಯ ಆಧಾರದ ಮೇಲೆ ನಿರ್ಣಯಗಳನ್ನು ಕೈಗೊಳ್ಳುತ್ತಾನೋ ಅವನಿಗೆ ಯಶಸ್ಸು ಖಂಡಿತ ಸಿಕ್ಕೆ ಸಿಗುತ್ತದೆ. ಆತ ತನ್ನ ತಿಳುವಳಿಕೆಯ ಆಧಾರದ ಮೇಲೆ ಮಾತ್ರ ಎದುರಿಗೆ ಇರುವ ವ್ಯಕ್ತಿಯ ಸಲಹೆಗಳ ಸರಿಯಾದ ಅಥವಾ ತಪ್ಪಾದ ನಿರ್ಣಯಗಳ ಕುರಿತು ತಿಳಿಯಬಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.