Vastu Tips: ಮನೆಯಲ್ಲಿನ ಋಣಾತ್ಮಕ ಶಕ್ತಿ ತೊಲಗಿ, ಧನಾತ್ಮಕ ಶಕ್ತಿ ತುಂಬಲು ಈ ಕೆಲಸ ಮಾಡಲು ಮರೆಯದಿರಿ

Vastu Tips - ಮನೆಯಲ್ಲಿ ಯಾವುದೇ ರೀತಿಯ ಋಣಾತ್ಮಕ ಶಕ್ತಿ ಇರಬಾರದು. ನಕಾರಾತ್ಮಕ ಶಕ್ತಿ ನಿಮ್ಮ ಜೀವನ ಹಾಗೂ ಎಲ್ಲಾ ಚಟುವಟಿಕೆಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.

Written by - Nitin Tabib | Last Updated : Sep 5, 2021, 07:38 PM IST
  • ಮನೆಯಲ್ಲಿ ಯಾವುದೇ ರೀತಿಯ ಋಣಾತ್ಮಕ ಶಕ್ತಿ ಇರಬಾರದು.
  • ನಕಾರಾತ್ಮಕ ಶಕ್ತಿ ನಿಮ್ಮ ಜೀವನ ಹಾಗೂ ಎಲ್ಲಾ ಚಟುವಟಿಕೆಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ.
  • ಈ ಐದುವಸ್ತುಗಳು ನಕಾರಾತ್ಮ್ಕಕ ಶಕ್ತಿಗೆ ಜನ್ಮ ನೀಡುತ್ತವೆ.
Vastu Tips: ಮನೆಯಲ್ಲಿನ ಋಣಾತ್ಮಕ ಶಕ್ತಿ ತೊಲಗಿ, ಧನಾತ್ಮಕ ಶಕ್ತಿ ತುಂಬಲು ಈ ಕೆಲಸ ಮಾಡಲು ಮರೆಯದಿರಿ title=
Vastu Shastra Tips(File Photo)

ನವದೆಹಲಿ : Vastu Tips - ಪ್ರತಿಯೊಂದು ವಸ್ತುವಿನಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿ ಅಡಗಿರುತ್ತದೆ. ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಧನಾತ್ಮಕ (Positive Energy) ಹಾಗೂ ಋಣಾತ್ಮಕ ಎರಡೂ ಶಕ್ತಿಗಳು ಪರ್ತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ.

ನಕಾರಾತ್ಮಕ ಶಕ್ತಿ ನಮ್ಮ ಜೀವನ ಹಾಗೂ ಜೀವನದ ಚಟುವಟಿಕೆಗಳಿಗೆ ಹಾನಿ ತಲುಪಿಸುತ್ತವೆ. ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮ್ಕಕ ಶಕ್ತಿ (Negative Energy) ಇರಬಾರದು. ಮನೆಯಲ್ಲಿರುವ ಈ ಐದುವಸ್ತುಗಳು ನಕಾರಾತ್ಮ್ಕಕ ಶಕ್ತಿಗೆ ಜನ್ಮ ನೀಡುತ್ತವೆ. ಅವುಗಳನ್ನು ಕೂಡಲೇ ಮನೆಯಿಂದ ಹೊರಹಾಕುವುದು ಯಾವತ್ತೂ ಉತ್ತಮ. 

- ಮನೆಯಲ್ಲಿ ಯಾವುದೇ ಗಾಜು ಒದದಿರಬಾರದು. ಒಂದು ಗ್ಲಾಸ್ ಬಿರುಕು ಬಿಟ್ಟಿದ್ದರೆ ಅಥವಾ ಕಿಟಕಿಯ ಗಾಜು ಒಡೆದಿದ್ದರೆ, ಅದನ್ನು ತಕ್ಷಣ ಬದಲಾಯಿಸಬೇಕು.

- ಮನೆಯ ದೇವರ ಕೊಠಡಿ ಅಥವಾ ಇತರ ಯಾವುದೇ ಸ್ಥಳಗಳಲ್ಲಿ ಒಡೆದು ಹೋದ ಅಥವಾ ಬಿರುಕು ಬಿಟ್ಟ ದೇವರ ಮೂರ್ತಿ ಇರಬಾರದು. ಇದೆ ರೀತಿ ಹಾನಿಗೊಳಗಾದ ದೇವರ ಫೋಟೋ ಕೂಡ ಇರಬಾರದು. ಇದ್ದರೆ ಅಂದನ್ನು ಕೂಡಲೇ ನದಿಯಲ್ಲಿ ವಿಸರ್ಜಿಸಿ.

- ದೇವರ ಕೊಠಡಿಯಲ್ಲಿ ದೇವಿ ಹಾಗೂ ದೇವರ ಭಾವಚಿತ್ರ ಅಥವಾ ಮೂರ್ತಿ ಪರಸ್ಪರ ಎದುರಿಗೆ ಇಡಬೇಡಿ. ಖರ್ಚು ಅಧಿಕವಾಗಲಿದೆ.

ಇದನ್ನೂ ಓದಿ-Y-Break App ಡೌನ್ ಲೋಡ್ ಮಾಡಿ ಹಾಗೂ 5 ನಿಮಿಷ ಯೋಗ ಮಾಡಿ, ಸರ್ಕಾರಿ ನೌಕರರಿಗೆ ಆದೇಶ

- ಮನೆಯಲ್ಲಿ ಮುಳ್ಳಿನ ಗಿಡ ಇದ್ದರೆ, ತಕ್ಷಣ ಅದನ್ನು ಹೊರಹಾಕಿ. ಆರ್ಥಿಕ ಹಾನಿಗೆ ಸಮಸ್ಯೆಗಳಿಗೆ ಇದು ಕಾರಣ. 

ಇದನ್ನೂ ಓದಿ-Shani Pradosh Vrat 2021 : ಶನಿ ದೋಷವನ್ನು ನಿವಾರಿಸಲು ಇಂದು ಅತ್ಯುತ್ತಮ ದಿನ : ಶನಿ ಪ್ರದೋಷದಂದು ಶಿವ-ಪಾರ್ವತಿಯ ಪೂಜೆ ಮಾಡಿ

- ಮನೆಯಲ್ಲಿ ಯಾವುದೇ ಗಡಿಯಾರ, ವಾಹನ ಅಥವಾ ಇಲೆಕ್ಟ್ರಿಕ್ ಸಾಮಾನುಗಳು ದೀರ್ಘಾವಧಿಯಿಂದ ಹಾಳಾಗಿ ಬಿದ್ದಿದ್ದರೆ ಅವುಗಳನ್ನು ತಕ್ಷಣ ಹೊರಹಾಕಿ ಏಕೆಂದರೆ ಅವು ನಕಾರಾತ್ಮಕ ಶಕ್ತಿಯನ್ನು ಉತ್ತೆಜಿಸುತ್ತವೆ.

ಇದನ್ನೂ ಓದಿ-Ganesh Chaturthi 2021 : ಈ ದಿನದಿಂದ ಆರಂಭವಾಗಲಿದೆ ಗಣೇಶ ಉತ್ಸವ, ಈ ಶುಭ ಮುಹೂರ್ತದಲ್ಲಿ ಮನೆಗೆ ಬರಲಿ ಗಣಪ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News