Chanakya Lessons: ಮನೆಯಲ್ಲಿ ಕನ್ಯೆಯರ ಸ್ಥಾನಮಾನ ಹೇಗಿರಬೇಕು ಗೊತ್ತಾ?
Chanakya Niti: ಚಾಣಕ್ಯ ನೀತಿಯ ಇಂದಿನ ಲೇಖನದಲ್ಲಿ ನಾವು ಜೀವನದಲ್ಲಿ ಯಾವ 7 ಸಂಗತಿಗಳನ್ನು ನಮ್ಮ ಪಾದದಿಂದ ಸ್ಪರ್ಶಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Chanakya Lessons: ದೇಶದ ವಿದ್ವಾಂಸರಲ್ಲಿ ಆಚಾರ್ಯ ಚಾಣಕ್ಯರೂ ಕೂಡ ಒಬ್ಬರು. ಜೀವನದ ಬಗ್ಗೆ ಅವರು ಬರೆದಿರುವ ನೀತಿಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ಅವರ ರಾಜಕೀಯ, ರಾಜತಾಂತ್ರಿಕ, ಅರ್ಥಶಾಸ್ತ್ರದ ಪ್ರವೀಣರಾಗಿದ್ದರು. ಯಾವುದೇ ಓರ್ವ ವ್ಯಕ್ತಿ ಚಾಣಕ್ಯ ನೀತಿಗಳನ್ನು ಸರಿಯಾಗಿ ಓದಿ, ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ವ್ಯಕ್ತಿಯ ಜೀವನದ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ. ಚಾಣಕ್ಯರು ತನ್ನ ನೀತಿಗಳಲ್ಲಿ ಕೇವಲ ರಾಜಕೀಯ ಅಥವಾ ರಾಜತಾಂತ್ರಿಕತೆಯ ಕುರಿತು ಮಾತ್ರ ಹೇಳದೆ, ಹಣ ಉಳಿತಾಯ, ಗೌರವ ಘನತೆಯಿಂದ ಉಳಿಸಿಕೊಳ್ಳುವುದು ಇತ್ಯಾದಿಗಳ ಕುರಿತು ಕೂಡ ಉಲ್ಲೇಖಿಸಿದ್ದಾರೆ. ಹಾಗಾದರೆ, ಇಂದಿನ ಈ ಲೇಖನದಲ್ಲಿ ಯಾವ ಏಳು ಸಂತತಿಗಳನ್ನು ಕಾಲಿನಿಂದ ಸ್ಪರ್ಶಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಪಾದಾಭ್ಯಾಂ ನ ಸ್ಪರ್ಶೋದಗ್ನಿ ಗುರು ಬ್ರಾಹ್ಮಣಮೆವಚ !! ನೈವ ಗಾಂ ಕುಮಾರಿಂ ಚ ವೃದ್ಧಂ ನ ಶಿಶುಂ ತಥಾ !!
ಆಚಾರ್ಯ ಚಾಣಕ್ಯರು ಬರೆದಿರುವ ಈ ಶ್ಲೋಕದ ಅರ್ಥ ಅಗ್ನಿ, ಗುರು, ಬ್ರಾಹ್ಮಣ, ಹಸು, ಕುಮಾರಿ ಕನ್ಯೆ, ವೃದ್ಧ ಹಾಗೂ ಶಿಶು ಈ ಏಳು ಜನರಿಗೆ ಪಾದಸ್ಪರ್ಶ ಮಾಡಬಾರದು ಎಂದು ಹೇಳಲಾಗಿದೆ.
ಸನಾತನ ಧರ್ಮದಲ್ಲಿ ಅಗ್ನಿಗೆ ದೇವರ ಸ್ಥಾನವಿದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನಾವು ಬೆಂಕಿ ಹಚ್ಚಿದ ನಂತರವೇ ಎಲ್ಲಾ ಶುಭ ಕಾರ್ಯಗಳನ್ನು ಪ್ರಾರಂಭಿಸುತ್ತೇವೆ ಮತ್ತು ಅದನ್ನು ಸಾಕ್ಷಿಯಾಗಿ ತೆಗೆದುಕೊಂಡ ನಂತರ ನಾವು ವಚನವನ್ನು ಕೂಡ ನೀಡುತ್ತೇವೆ. ಒಬ್ಬ ವ್ಯಕ್ತಿಯು ಅಗ್ನಿಯನ್ನು ಅವಮಾನಿಸಿದರೆ, ದೇವತೆಗಳು ಅವನ ಮೇಲೆ ಮುನಿಸಿಕೊಳ್ಳುತ್ತಾರೆ. ಈ ಮೂಲಕ ಸಮಾಜದಲ್ಲಿ ಬ್ರಾಹ್ಮಣರು ಮತ್ತು ಗುರುಗಳನ್ನು ಎಂದಿಗೂ ಅವಹೇಳನ ಮಾಡಬಾರದು ಎಂದು ಆಚಾರ್ಯ ಶ್ರೀಗಳು ಹೇಳಿದ್ದಾರೆ. ಅವರಿಗೆ ಅಗೌರವಿಸುವ ಮೂಲಕ ವ್ಯಕ್ತಿಯ ಜೀವನವೇ ಹಾಳಾಗುತ್ತದೆ.
ಚಾಣಕ್ಯ ನೀತಿಯ ಈ ಶ್ಲೋಕದಲ್ಲಿ, ಕುಮಾರಿ ಕನ್ಯೆಗೆ ದೇವಿಗೆ ಸಮಾನ ಎಂದು ಹೇಳಲಾಗಿದೆ. ಹೀಗಾಗಿ ಯಾವುದೇ ಕನ್ಯೆಗೆ ಪಾದದಿಂದ ಸ್ಪರ್ಶಿಸಬಾರದು ಎಂದು ಹೇಳಲಾಗಿದೆ. ಇದಕ್ಕೆ ವಿರುದ್ಧವಾಗಿ, ನೀವು ಅವರ ಆಶೀರ್ವಾದವನ್ನು ಪಡೆಯಬಹುದು. ಮನೆಯ ಹಿರಿಯರನ್ನು ಯಾವಾಗಲೂ ಗೌರವಿಸಬೇಕು, ಅವರನ್ನು ನಿಂದಿಸುವುದರಿಂದ ಎಲ್ಲಾ ಗ್ರಹಗಳು ಕೆಟ್ಟ ದೆಸೆ ಆರಂಭವಾಗುತ್ತವೆ ಮತ್ತು ವ್ಯಕ್ತಿಯ ಜೀವನದಲ್ಲಿ ತೊಂದರೆಗಳ ಪ್ರವಾಹವೇ ಹರಿದುಬರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಇದನ್ನೂ ಓದಿ- Adani Hindenburg Case: SEBI ಗೆ ಹೆಚ್ಚಿನ ಅಧಿಕಾರ ನೀಡುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದ ಸುಪ್ರೀಂ
ಹಿಂದೂ ಧರ್ಮದಲ್ಲಿ ಹಸುವಿಗೆ ತಾಯಿಯ ಸ್ಥಾನಮಾನ ನೀಡಲಾಗಿದೆ. ಹಸು ಮುಕ್ಕೋಟಿ ದೇವ-ದೇವತೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಅದಕ್ಕೆ ತಂದರೆ ನೀಡುವುದು ಅಥವಾ ಅದಕ್ಕೆ ಪಾದಸ್ಪರ್ಶ ಮಾಡುವುದು ನಿಮಗೆ ಉಂಟುಮಾಡಬಹುದು. ಅದೇ ರೀತಿ ಪುಟ್ಟ ಮಗುವನ್ನು ಕೂಡ ದೇವರ ರೂಪವೆಂದು ಪರಿಗಣಿಸಲಾಗುತ್ತದೆ. ಅವುಗಳಿಗೆ ಎಂದೂ ಕೂಡ ತೊಂದರೆ ನೀಡಬಾರದು ಅಥವಾ ಅವಮಾನಿಸಬಾರದು. ಅವರನ್ನು ಅವಮಾನಿಸುವ ಮೂಲಕ ದೇವರನ್ನು ಅವಮಾನಿಸಿದಂತಾಗುತ್ತದೆ ಎಂಬುದು ನಂಬಿಕೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ