Chandra Grahan 2021: ಈ ದಿನ ಸಂಭವಿಸಲಿದೆ ಈ ವರ್ಷದ ಕೊನೆಯ ಚಂದ್ರಗ್ರಹಣ, ಈ ರಾಶಿಗಳ ಮೇಲೆ ಹೆಚ್ಚು ಪ್ರಭಾವ
Chandra Grahan 2021: ವರ್ಷದ ಕೊನೆಯ ಚಂದ್ರಗ್ರಹಣ (Last Moon Eclipse of 2021) ಒಂದು ರಾಶಿಯ (Zodiac Sign))ಜನರಿಗೆ ತುಂಬಾ ಅಶುಭಕರವಾಗಿರಲಿದೆ. ಈ ಸಮಯದಲ್ಲಿ ಅವರು ಜಾಗರೂಕರಾಗಿರಬೇಕು.
ನವದೆಹಲಿ: Chandra Grahan 2021 - 2021 ರಲ್ಲಿ ಒಟ್ಟು ನಾಲ್ಕು ಗ್ರಹಣಗಳು (Eclipse) ನಡೆಯಬೇಕಿದ್ದು, ಇದರಲ್ಲಿ 2 ಗ್ರಹಣಗಳು ನಡೆದಿವೆ ಮತ್ತು ಇನ್ನೂ 2 ಗ್ರಹಣಗಳು ಬಾಕಿ ಉಳಿದಿವೆ. 2021 ರಲ್ಲಿ, 1 ಸೂರ್ಯ ಗ್ರಹಣ (Surya Grahan) ಮತ್ತು 1 ಚಂದ್ರ ಗ್ರಹಣ(Chandra Grahan) ಸಂಭವಿಸಿದೆ. ಇದರಲ್ಲಿ, ವರ್ಷದ ಮೊದಲ ಚಂದ್ರಗ್ರಹಣವು ಬುಧವಾರ, 26 ಮೇ 2021 ರಂದು ನಡೆದಿತ್ತು ಮತ್ತು ವರ್ಷದ ಕೊನೆಯ ಚಂದ್ರಗ್ರಹಣವು (Moon Eclipse) 19 ನವೆಂಬರ್ 2021, ಶುಕ್ರವಾರದಂದು ಸಂಭವಿಸಲಿದೆ. ಇದರ ನಂತರ, ವರ್ಷದ ಕೊನೆಯ ಗ್ರಹಣವು ಡಿಸೆಂಬರ್ 4 ರಂದು ಸಂಭವಿಸಲಿದ್ದು, ಇದು ಸೂರ್ಯಗ್ರಹಣವಾಗಿರಲಿದೆ.
ಈ ರಾಶಿಯ ಜಾತಕದವರ ಪಾಲಿಗೆ ಅಶುಭ
ಮುಂದಿನ ತಿಂಗಳು ನವೆಂಬರ್ ನಲ್ಲಿ ನಡೆಯಲಿರುವ ಈ ಚಂದ್ರಗ್ರಹಣವು ನವೆಂಬರ್ 19ರ ಬೆಳಗ್ಗೆ11:34 ರಿಂದ ಆರಂಭವಾಗಿ ಸಂಜೆ 05:33 ಕ್ಕೆ ಕೊನೆಗೊಳ್ಳಲಿದೆ. ಇದು ಭಾಗಶಃ ಚಂದ್ರ ಗ್ರಹಣವಾಗಿದ್ದು, ಕೆಲವು ಕಾಲದವರೆಗೆ ಭಾರತದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಮಾತ್ರ ಗೋಚರಿಸಲಿದೆ. ಇದೆ ವೇಳೆ, ಈ ಚಂದ್ರಗ್ರಹಣವನ್ನು ಅಮೆರಿಕ, ಉತ್ತರ ಯುರೋಪ್, ಪೂರ್ವ ಏಷ್ಯಾ, ಆಸ್ಟ್ರೇಲಿಯಾ ಮತ್ತು ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಕಾಣಬಹುದು. ಜ್ಯೋತಿಷ್ಯದ (Astrology) ಪ್ರಕಾರ, ಈ ಚಂದ್ರ ಗ್ರಹಣವು ವೃಷಭ ಮತ್ತು ಕೃತಿಕಾ ನಕ್ಷತ್ರಗಳಲ್ಲಿ ನಡೆಯಲಿದೆ. ಆದ್ದರಿಂದ, ಇದು ವೃಷಭ ರಾಶಿಯ ಜನರಿಗೆ ಒಳ್ಳೆಯದಲ್ಲ. ಗ್ರಹಣದ ಅವಧಿಯಲ್ಲಿ ವ್ಯರ್ಥ ವಾದ ಹಾಗೂ ವ್ಯಥಾ ಖರ್ಚಿನಿಂದ ದೂರ ಉಳಿಯಿರಿ.
ಇದನ್ನೂ ಓದಿ-ಬುಧ-ಗುರು ಗ್ರಹಗಳ ಚಲನೆಯಲ್ಲಿ ಬದಲಾವಣೆ , ಈ ರಾಶಿಗಳ ಪಾಲಿಗೆ ಆಗಲಿದೆ ಬಹುದೊಡ್ಡ ವರದಾನ
ಚಂದ್ರಗ್ರಹಣದ ವೇಳೆ ಈ ಸಂಗತಿಗಳನ್ನು ನೆನಪಿನಲ್ಲಿಡಿ
>> ಗ್ರಹಣದ ಸೂತಕ ಕಾಲದಲ್ಲಿ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ ಮತ್ತು ಆದಷ್ಟು ದೇವರ ಆರಾಧನೆ ಮಾಡಿ.
>> ಬೇಯಿಸಿದ ಆಹಾರದಲ್ಲಿ ತುಳಸಿ ಎಲೆಗಳನ್ನು ಹಾಕಿ.
>> ಗ್ರಹಣದ ನಂತರ ಸ್ನಾನ ಮಾಡಿ.
>> ಮನೆಯಲ್ಲಿ ಗಂಗಾಜಲ ಸಿಂಪಡಿಸಿ.
>> ಗ್ರಹಣ ಕಾಲದಲ್ಲಿ ಗರ್ಭಿಣಿಯರು ಮನೆಯಿಂದ ಹೊರಬರಬಾರದು.
ಇದನ್ನೂ ಓದಿ-ದೀಪಾವಳಿಯಂದು ರೂಪುಗೊಳ್ಳಲಿದೆ ಗ್ರಹಗಳ ಅಪರೂಪದ ಸಂಯೋಗ ? ಯಾರಿಗೆ ಶುಭ ಯಾರಿಗೆ ಅಶುಭ ತಿಳಿಯಿರಿ
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ