Shani Effect: ಹಿಂದೂ ಧರ್ಮದ ಪ್ರಕಾರ ಶನಿ ದೇವರನ್ನು ನ್ಯಾಯದ ಅಧಿಪತಿ ಎಂದು ಪರಿಗಣಿಸಲಾಗಿದೆ. ಶನಿ ಗ್ರಹವು ಅಕ್ಟೋಬರ್ 23 ರಿಂದ ಮಕರ ರಾಶಿಯಲ್ಲಿ ನೇರ ಚಲನೆ ಆರಂಭಿಸಲಿದ್ದಾರೆ. ಇಲ್ಲಿಂದ ಜನವರಿ 17 2023 ರವರೆಗೆ ನೇರ ಚಲನೆಯಲ್ಲಿಯೇ ಸಾಗಲಿದ್ದಾರೆ. ಈ ಸಂದರ್ಭದಲ್ಲಿ ಕೆಲ ರಾಶಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ್ದರೂ ಸಹ, ಇನ್ನೂ ಅನೇಕ ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಶನಿಗ್ರಹದ ಪಥ ಬದಲಾವಣೆ  ಬಳಿಕ ಯಾವೆಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಂಥ ಗುಣಗಳಿರುವ ಹುಡುಗರನ್ನೇ ಮೆಚ್ಚುವುದು ಹುಡುಗಿಯರು.! ಸಂಗಾತಿಯಾಗಿ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ


ಜೋತಿಷ್ಯ ಶಾಸ್ತ್ರದಲ್ಲಿ ಶನಿಗ್ರಹಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಶನಿಯು ಕರ್ಮದಾತ ಎನ್ನಲಾಗಿದೆ. ಇನ್ನು ಅಕ್ಟೋಬರ್ 23 ರ ಬಳಿಕ ಧಂತೇಸರದಲ್ಲಿ ಶನಿಯ ಸಂಚಾರ ಬದಲಾವಣೆಯಾಗಲಿದೆ. ಹಿಮ್ಮುಖ ಚಲನೆಯಲ್ಲಿರುವ ಶನಿಯು ಮುನ್ನೆಡೆಯಲಿದ್ದು, ಈ ಸಂದರ್ಭದಲ್ಲಿ ಕೆಲ ರಾಶಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ.  


ವೃಷಭ ರಾಶಿ: ಅಕ್ಟೋಬರ್ 23 ರ ಬಳಿಕ ಧಂತೇಸರದಲ್ಲಿ ಶನಿಯ ಸಂಚಾರ ಬದಲಾವಣೆಯಾಗಲಿದೆ. ಯಾವಾಗ ಶನಿಯ ಸಂಚಾರ ಬದಲಾವಣೆಯಾಗುತ್ತದೆಯೋ ಅಂದಿನಿಂದ ವೃಷಭ ರಾಶಿಯವರಿಗೆ ಅನೇಕ ಅನಿರೀಕ್ಷಿತ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಅಷ್ಟೇ ಅಲ್ಲದೆ, ಈ ರಾಶಿಯವರು  ಮಾಡುವ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಆರ್ಥಿಕ ಸಮಸ್ಯೆಗಳು ಕೂಡ ಎದುರಾಗುವ ಸಾಧ್ಯತೆಯಿದೆ.


ಕರ್ಕಾಟಕ: ಶನಿಯು ಪಥ ಬದಲಾವಣೆ ಮಾಡಿದ ಬಳಿಕ ಈ ರಾಶಿಯವರು ಹಲವು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ವ್ಯಾಪಾರದಲ್ಲೂ ಸಮಸ್ಯೆ ಎದುರಿಸಲಿದ್ದು, ಆರ್ಥಿಕ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇದರ ಜೊತೆಗೆ ದಾಂಪತ್ಯದಲ್ಲೂ ವಿರಸ, ಮನಸ್ತಾಪಗಳು ಕಂಡುಬರುವ ಸಾಧ್ಯತೆಯಿದೆ.


ಕನ್ಯಾ: ಇನ್ನು ಕನ್ಯಾ ರಾಶಿಯವರು ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ನೀವು ಈಗಾಗಲೆ ರೂಪಿಸಿರುವ ಯೋಜನೆಗಳು ಮುನ್ನಡೆ ಸಾಧಿಸುವಲ್ಲಿ ವಿಫಲವಾಗಲಿದೆ. ಆಪ್ತರ ಜೊತೆಯೂ ಮನಸ್ತಾಪಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕಯಿಂದ ಇರುವುದು ಸೂಕ್ತ.


ಮಕರ: ಈ ರಾಶಿಯವರಿಗೆ ಅನಾವಶ್ಯಕ ಖರ್ಚು ವೆಚ್ಚಗಳು ಉಂಟಾಗುತ್ತದೆ. ಹೀಗಾಗಿ, ಚಿಂತೆಗಳು ಅಧಿಕವಾಗಲಿದೆ. ಒಡಹುಟ್ಟಿದವರ ಆರೋಗ್ಯದಲ್ಲೂ ಏರುಪೇರಾಗಲಿದೆ. ಹೀಗಾಗಿ ಎಚ್ಚರಿಕೆ ವಹಿಸಿ. ಕೌಟುಂಬಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.


ಕುಂಭ: ಈ ರಾಶಿಯವರೂ ಸಹ ಊಹಿಸಿರದಂತಹ ಸಂಕಷ್ಟ ಎದುರಿಸುತ್ತೀರಿ. ಅಧಿಕ ಖರ್ಚು-ವೆಚ್ಚ, ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳಿವೆ.


 ಇದನ್ನೂ ಓದಿ: Dhanatrayodashi 2022: ರಾಶಿಗಳಿಗೆ ಅನುಗುಣವಾಗಿ ಏನನ್ನು ಖರೀದಿಸಬೇಕು/ಖರೀದಿಸಬಾರದು?


(ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.