ಬೆಂಗಳೂರು : ಜ್ಯೋತಿಷ್ಯದಲ್ಲಿ, ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವವನ್ನು ಮೂಲಾಂಕದ ಆಧಾರದ ಮೇಲೆ ತಿಳಿಯುವುದು ಸಾಧ್ಯವಾಗುತ್ತದೆ.  ಮೂಲಾಂಕ ಎನ್ನುವುದು ವ್ಯಕ್ತಿಯ ಹುಟ್ಟಿದ ದಿನಾಂಕಗಳನ್ನೂ ಕೂಡಿಸಿದರೆ ಸಿಗುವ ಮೊತ್ತ. ಉದಾಹರಣೆಗೆ, ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದ ವ್ಯಕ್ತಿಯ ಮೂಲಾಂಕ 1. ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 1ರ ಮಕ್ಕಳು ಬಹಳ ಪ್ರತಿಭಾವಂತರು. ಈ ಮಕ್ಕಳು ಬಾಲ್ಯದಿಂದಲೂ ತಮ್ಮ ಶಿಕ್ಷಣ ಮತ್ತು ವೃತ್ತಿಯ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಇದರಿಂದಾಗಿ ಈ ಮಕ್ಕಳು ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ಯಶಸ್ಸು ಗಳಿಸುತ್ತಾರೆ. 


COMMERCIAL BREAK
SCROLL TO CONTINUE READING

ಮೂಲಾಂಕ ಒಂದರ ಮಕ್ಕಳ ಮೇಲಿರುತ್ತದೆ ಸೂರ್ಯನ ಪ್ರಭಾವ :


ಮೂಲಾಂಕ 1 ರ ಮಕ್ಕಳು ಮತ್ತು ಜನರ ಮೇಲೆ ಸೂರ್ಯನ ಪ್ರಭಾವ ಹೆಚ್ಚು ಇರುತ್ತದೆ. ಮೂಲಾಂಕ 1ರ ಅಧಿಪತಿ ಸೂರ್ಯ ಗ್ರಹ. ಸೂರ್ಯನ ಪ್ರಭಾವದಿಂದಾಗಿ, ಈ ಮಕ್ಕಳು ಪ್ರಕಾಶಮಾನವಾದ ಭವಿಷ್ಯವನ್ನು ಕಂಡುಕೊಳ್ಳುತ್ತಾರೆ. ಇವರು ತೀಕ್ಷ್ಣ ಬುದ್ದಿಯವರಾಗಿದ್ದು, ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಮೂಲಾಂಕ ಒಂದರ ಮಕ್ಕಳು ಓದು ಬರಹದಲ್ಲಿಯೂ ಮುಂದಿರುತ್ತಾರೆ. 


ಇದನ್ನೂ ಓದಿ : ನವಾಂಶ ಜಾತಕದ ಉಚ್ಛ ಭಾವದಲ್ಲಿ ಶನಿಯ ಸಂಚಾರ, 4 ರಾಶಿಗಳ ಜಾತಕದವರಿಗೆ ಭಾರಿ ಧನಲಾಭ


ಮೂಲಾಂಕ ಒಂದರ  ಮಕ್ಕಳಿಗೆ ಭಯ ಎನ್ನುವುದೇ ಇರುವುದಿಲ್ಲ : 
ಮೂಲಾಂಕ ಒಂದು ಹೊಂದಿರುವ ಮಕ್ಕಳಿಗೆ ಭಯ ಎನ್ನುವುದು ಇರುವುದಿಲ್ಲ. ಅವರು ಬಾಲ್ಯದಿಂದಲೂ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ. ಇವರಿಗೆ ಸಹಜ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಈ ಮಕ್ಕಳು ಶ್ರಮಜೀವಿಗಳು. ಇವರು ಯಾವುದೇ ಕೆಲಸ ಮಾಡಬೇಕು ಎಂದು ನಿರ್ಧಾರ ಮಾಡಿದರೆ, ಆ ಕೆಲಸವನ್ನು ಮುಗಿಸಿದ ಮೇಲೆಯೇ ನಿಟ್ಟುಸಿರು ಬಿಡುತ್ತಾರೆ. ಯಾವ ಕ್ಷೇತ್ರಕ್ಕೆ ಹೋದರೂ  ಯಶಸ್ಸು ಕಟ್ಟಿಟ್ಟ ಬುತ್ತಿ. 


ಮೂಲಾಂಕ ಒಂದರ ಮಕ್ಕಳ ಭವಿಷ್ಯವು ಉಜ್ವಲವಾಗಿರುತ್ತದೆ. ಸೂರ್ಯನ ಸಂಪೂರ್ಣ ಕೃಪೆ ಇವರ ಮೇಲೆ ಇರುತ್ತದೆ. ಈ ಮಕ್ಕಳಿಗೆ ಬಾಲ್ಯದಿಂದಲೇ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಮಾಡಿಕೊಂಡರೆ ತಮ್ಮ ಜೀವನದಲ್ಲಿ ತ್ವರಿತ ಯಶಸ್ಸನ್ನು ಪಡೆಯುತ್ತಾರೆ. ಅಲ್ಲದೆ ಸಾಕಷ್ಟು ಗೌರವ ಮತ್ತು ಜನಪ್ರಿಯತೆಯನ್ನು ಪಡೆಯುತ್ತಾರೆ. 


ಇದನ್ನೂ ಓದಿ : Moles on Body : ದೇಹದ ಈ ಭಾಗಗಳಲ್ಲಿ ಮಚ್ಚೆ ಇದ್ರೆ ಪಕ್ಕಾ Love Marriage


ಈ ಪರಿಹಾರವನ್ನು ಮಾಡಿಕೊಳ್ಳಿ : 
- ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. 
- ಆಹಾರದಲ್ಲಿ ಬೆಲ್ಲವನ್ನು ಸೇವಿಸಿ. 
- ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಹೆಚ್ಚು ಬಳಸಿ. 
- ಮನೆಯ ಪೂರ್ವ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿಡಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.