ಮೀನ ರಾಶಿಯಲ್ಲಿ ಬೃಹಸ್ಪತಿ ಉದಯ, ಹಂಸ ರಾಜಯೋಗದಿಂದ 3 ರಾಶಿಗಳ ಜನರಿಗೆ ಅಪಾರ ಆರ್ಥಿಕ ಲಾಭ

Jupiter Rise 2023: ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಉದಯ ನೆರವೇರಲಿದೆ. ಇದರಿಂದ ಹಂಸ ಹೆಸರಿನ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ 3 ರಾಶಿಗಳ ಜಾತಕದವರ ಪಾಲಿಗೆ ಅತ್ಯಂತ ಶುಭಕರ ಸಾಬೀತಾಗಲಿದೆ.  

Written by - Nitin Tabib | Last Updated : Jan 29, 2023, 01:33 PM IST
  • ಗ್ರಹಗಳು ಉದಯಿಸಿ ಅನೇಕ ಶುಭ ಕಾಕತಾಳೀಯಗಳನ್ನು ಸೃಷ್ಟಿಸುತ್ತವೆ.
  • ಗುರುಗ್ರಹವು ಏಪ್ರಿಲ್‌ನ ಆರಂಭದಲ್ಲಿ ಉದಯಿಸಲಿದೆ.
  • ಇದರಿಂದ ಹಂಸ ಹೆಸರಿನ ರಾಜಯೋಗ ರೂಪುಗೊಳ್ಳುತ್ತಿದೆ.
ಮೀನ ರಾಶಿಯಲ್ಲಿ ಬೃಹಸ್ಪತಿ ಉದಯ, ಹಂಸ ರಾಜಯೋಗದಿಂದ 3 ರಾಶಿಗಳ ಜನರಿಗೆ ಅಪಾರ ಆರ್ಥಿಕ ಲಾಭ title=
ಗುರು ಉದಯ 2023

Guru Uday 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹವು ಉದಯಿಸಿದಾಗ ಅಥವಾ ಅಸ್ತಮಿಸಿದಾಗ. ಅದು ಮಾನವ ಜೀವನ ಮತ್ತು ದೇಶ ಮತ್ತು ಪ್ರಪಂಚದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದಲ್ಲದೆ ಗ್ರಹಗಳು ಉದಯಿಸಿ ಅನೇಕ ಶುಭ ಕಾಕತಾಳೀಯಗಳನ್ನು ಸೃಷ್ಟಿಸುತ್ತವೆ. ಗುರುಗ್ರಹವು ಏಪ್ರಿಲ್‌ನ ಆರಂಭದಲ್ಲಿ ಉದಯಿಸಲಿದೆ. ಇದರಿಂದ ಹಂಸ ಹೆಸರಿನ ರಾಜಯೋಗ ರೂಪುಗೊಳ್ಳುತ್ತಿದೆ. ಇದರ ಪ್ರಭಾವ ಎಲ್ಲಾ ರಾಶಿಗಳ ಜನರ ಮೇಲೆ ಕಂಡುಬರುತ್ತದೆ. ಆದರೆ 3 ರಾಶಿಗಳಿಗೆ, ಈ ಕಾರಣದಿಂದಾಗಿ ಉತ್ತಮ ಆರ್ಥಿಕ ಲಾಭ ಮತ್ತು ಅಭಿವೃದ್ಧಿ ಸಿಗಲಿದೆ. ಆ  ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಮೀನ ರಾಶಿ
ಹಂಸ ರಾಜಯೋಗವು ಮೀನ ರಾಶಿಯ ಜನರಿಗೆ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ಗುರುವು ನಿಮ್ಮ ಲಗ್ನ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗಾಲಿದೆ. ಅಲ್ಲದೆ, ಈ ಅವಧಿಯಲ್ಲಿ, ನಿಮ್ಮ ಸಂಗಾತಿಯ ಸಹಾಯದಿಂದ ನೀವು ಅಪಾರ ಹಣವನ್ನು ಪಡೆಯಬಹುದು ಮತ್ತು ಅವರ ನಿರ್ಧಾರವು ನಿಮಗೆ ಪ್ರಯೋಜನಕಾರಿ ಎಂದು ಸಾಈತಾಗಲಿದೆ. ಇದರೊಂದಿಗೆ ಈ ಗುರುಗ್ರಹದ ಉದಯದಿಂದಾಗಿ ಉದ್ಯಮಿಗಳಿಗೆ ಉತ್ತಮ ಆರ್ಥಿಕ ಲಾಭ ಸಿಗಲಿದೆ. ಆದರೆ ಜನವರಿ 17 ರಿಂದ ನಿಮ್ಮ ಮೇಲೆ ಶನಿಯ ಶನಿಯ ಸಾಡೇಸಾತಿ ನಡೆಯುತ್ತಿದೆ. ಹೀಗಾಗಿ ನೀವು ಕೆಲ ಆರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು. ಇನ್ನೊಂದೆಡೆ ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ಮಾನಸಿಕ ಉದ್ವೇಗ ಉಂಟಾಗಬಹುದು.

ಧನು ರಾಶಿ
ನಿಮಗೆ, ಹಂಸ ರಾಜಯೋಗ ನಿರ್ಮಾಣ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಗುರುವು ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಉದಯಿಸುತ್ತಾನೆ. ಇದರಿಂದ ನಿಮಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ಮತ್ತೊಂದೆಡೆ, ಉದ್ಯಮಿಗಳು ತಾವು ಸಾಲದ ಹಣವನ್ನು ಮರಳಿ ಪಡೆಯಬಹುದು. ಈ ಅವಧಿಯಲ್ಲಿ, ನೀವು ಹಣವನ್ನು ಉಳಿಸುವಲ್ಲಿ ಮತ್ತು ಹಣವನ್ನು ಹೂಡಿಕೆ ಮಾಡುವಲ್ಲಿ ಯಶಸ್ಸನ್ನು ಪಡೆಯುವಿರಿ. ಇದರೊಂದಿಗೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಇದೇ ವೇಳೆಗೆ ಜನವರಿ 17 ರಿಂದ ಶನಿಗ್ರಹದ ಸಾಡೆಸಾತಿ ಪ್ರಭಾವವೂ ನಿಮ್ಮ ಮೇಲಿಂದ ತೊಲಗಿದೆ. ಆದ್ದರಿಂದ, ಈ ಅವಧಿಯಲ್ಲಿ ನೀವು ಆಸ್ತಿ ಅಥವಾ ವಾಹನವನ್ನು ಸಹ ಖರೀದಿಸಬಹುದು.

ಇದನ್ನೂ ಓದಿ-ಚಿನ್ನದ ಚರಣದಲ್ಲಿ ಶನಿಯ ನಡೆ, 3 ರಾಶಿಗಳ ಜನರಿಗೆ ಅಪಾರ ಧನಲಾಭ

ಕರ್ಕ ರಾಶಿ
ಹಂಸ ರಾಜಯೋಗದಿಂದ, ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಏಕೆಂದರೆ ಗುರುವು ನಿಮ್ಮ ರಾಶಿಯ ನವಮ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ನೀವು ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ಪಡೆಯಬಹುದು, ಹಾಗೆಯೇ ಈ ಸಮಯವು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಉದ್ಯೋಗ ವೃತ್ತಿಯ ಜನರು ಉತ್ತಮ ಉದ್ಯೋಗಾವಕಾಶವನ್ನು ಪಡೆಯಬಹುದು. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಈ ಸಮಯ ತುಂಬಾ ಒಳ್ಳೆಯದಾಗಿದೆ.

ಇದನ್ನೂ ಓದಿ-Todays Horoscope 29 January 2023: ಮೇಷ ರಾಶಿಯವರಿಗೆ ಚಂದ್ರ ಬಲ, ಇತರ ರಾಶಿಗಳ ಜನರ ಪಾಲಿಗೆ ಹೇಗಿದೆ ದಿನ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News