ಬೆಂಗಳೂರು : ಯಾವುದೇ ಸೀಸನ್ ಆಗಿರಲಿ, ತ್ವಚೆಯ ಬಗ್ಗೆ ಕಾಳಜಿ ವಹಿಸಲೇ ಬೇಕು. ಕಾಳಜಿ ಅಂದ ಕೂಡಲೇ ದುಬಾರಿ ಕ್ರೀಂ, ಲೋಶನ್ ಬಳಸುವುದು ಅಥವಾ ಸಲೂನ್, ಪಾರ್ಲರ್ ಗೆ ಖರ್ಚು ಮಾಡುವುದು ಎಂದಲ್ಲ. ಅನೇಕ  ಮಂದಿ ಕಾಳಜಿಯ ಹೆಸರಿನಲ್ಲಿ ಮುಖದ ಮೇಲೆ ರಾಸಾಯನಿಕ ಉತ್ಪನ್ನಗಳನ್ನು  ಹಚ್ಚುತ್ತಾರೆ. ಇದು ಪ್ರಯೋಜನದ ಬದಲಿಗೆ ಹಾನಿಯನ್ನುಂಟುಮಾಡುತ್ತದೆ. ಅನೇಕ ಬಾರಿ ಮುಖದ ಮೇಲೆ ದದ್ದುಗಳು, ಕಪ್ಪು ಕಲೆಗಳು ಅಥವಾ ಅಲರ್ಜಿ ಮುಂತಾದ ಸಮಸ್ಯೆಗಳು ತಲೆದೋರಿ ಬಿಡುತ್ತದೆ. ನೈಸರ್ಗಿಕ ಪೋಷಣೆ ಯಾವಾಗಲೂ ತ್ವಚೆಗೆ ಉತ್ತಮವಾಗಿರುತ್ತದೆ. 


COMMERCIAL BREAK
SCROLL TO CONTINUE READING

ನಮ್ಮ ಅಡುಗೆ ಮನೆ ಒಂದು ರೀತಿಯಲ್ಲಿ ಮಾಯಾನಗರಿ ಇದ್ದಂತೆ. ಇಲ್ಲಿ ನಮ್ಮ ಪ್ರತಿ ಸಮಸ್ಯೆಗೂ ಪರಿಹಾರ ಅಡಗಿರುತ್ತದೆ. ಆದರೆ, ಯಾವ ವಸ್ತುವನ್ನು ಯಾವುದಕ್ಕೆ ಮತ್ತು ಹೇಗೆ ಬಳಕೆ ಮಾಡುವುದು ಎನ್ನುವ ಅರಿವು ನಮಗೆ ಇರಬೇಕು ಅಷ್ಟೇ. ತ್ವಚೆಯ ಸಮಸ್ಯೆಗೂ ಅಷ್ಟೇ ಮಾರುಕಟ್ಟೆಯತ್ತ ಹೆಜ್ಜೆ ಹಾಕುವ ಬದಲು ಒಮ್ಮೆ ಅಡುಗೆ ಮನೆಯಲ್ಲಿ ಕಣ್ಣು ಹಾಯಿಸಿದರೆ ಸಾಕು ಪರಿಹಾರ ಸಿಗುತ್ತದೆ. 


ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ 2 ಖರ್ಜೂರವನ್ನು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಲಾಭ ಸಿಗುತ್ತೆ ಗೊತ್ತಾ..?


ತ್ವಚೆಯ ಆರೋಗ್ಯಕ್ಕೆ ಚಕ್ಕೆ : 
ಚಕ್ಕೆ ಒಂದು ಮಸಾಲೆ. ಇದರಲ್ಲಿ ಸಿನ್ನಮಾಲ್ಡಿಹೈಡ್ ಕಂಡುಬರುತ್ತದೆ. ಇದು  ಚಕ್ಕೆಯ ಬಣ್ಣ ಮತ್ತು ಅದರ ಪರಿಮಳವನ್ನು ನಿರ್ಧರಿಸುತ್ತದೆ. ಸಿನ್ನಮಾಲ್ಡಿಹೈಡ್ ತ್ವಚೆಗೆ ಅತ್ಯುತ್ತಮವಾದ ಆಯುರ್ವೇದ ಔಷಧವಾಗಿದ್ದು ತ್ವಚೆಗೆ ಹೊಳಪನ್ನು ತರುತ್ತದೆ. ಹಾಗಿದ್ದರೆ ಈ ಮಸಾಲೆಯನ್ನು ಬಳಸುವುದು ಹೇಗೆ ತಿಳಿಯೋಣ.


ಕಾಂತಿಯುತ ತ್ವಚೆಗಾಗಿ ಚಕ್ಕೆಯನ್ನು ಈ ರೀತಿ ಬಳಸಿ : 
1. ಚಕ್ಕೆ ಮತ್ತು ಆಲಿವ್ ಎಣ್ಣೆ:
ಮುಖದ ಸೌಂದರ್ಯವನ್ನು ಹೆಚ್ಚಿಸಲು, ದಾಲ್ಚಿನ್ನಿ ಪುಡಿ ಮತ್ತು ಆಲಿವ್ ಎಣ್ಣೆಯನ್ನು ಒಂದು ಬಟ್ಟಲಿನಲ್ಲಿ ಬೆರೆಸಿ ನಂತರ ಅದನ್ನು ಮುಖಕ್ಕೆ ಹಚ್ಚಿ. ಹಗುರವಾದ ಕೈಗಳಿಂದ ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ ಚರ್ಮವು ತೇವಾಂಶವನ್ನು ಪಡೆಯುತ್ತದೆ ಮತ್ತು ರಕ್ತದ ಹರಿವು ಹೆಚ್ಚಾಗುತ್ತದೆ. ನಿಮ್ಮ ತ್ವಚೆಯು ಶುಷ್ಕವಾಗಿದ್ದರೆ ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : ಶರೀರವನ್ನು ನಿರ್ವಿಷಗೊಳಿಸುವ ಕಾಲ ಸನ್ನಿಹಿತವಾಗಿದೆ ಎನ್ನುತ್ತವೆ ಈ ಸಂಕೇತಗಳು! ನಿರ್ಲಕ್ಷಿಸಬೇಡಿ


2. ಚಕ್ಕೆ ಮತ್ತು ಜೇನುತುಪ್ಪ:
ಚಕ್ಕೆ ಆಂಟಿಫಂಗಲ್, ಆಂಟಿಆಕ್ಸಿಡೆಂಟ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು ಅದು ಮುಖದ ಚರ್ಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ಇದು ಚರ್ಮದ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ಒಂದು ಬಟ್ಟಲಿನಲ್ಲಿ 1 ಚಮಚ ದಾಲ್ಚಿನ್ನಿ ಪುಡಿ ಮತ್ತು 2 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ವೃತ್ತಾಕಾರವಾಗಿ ಮುಖಕ್ಕೆ ಹಚ್ಚಿ  ಅರ್ಧ ಗಂಟೆಯವರೆಗೆ ಬಿಡಿ. ಕೊನೆಗೆ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ ಮತ್ತು ಮಾಯಿಶ್ಚರೈಸರ್ ಹಚ್ಚಿ. ಇದು ಮುಖದ ಮೇಲಿನ  ಕಲೆಗಳನ್ನು ತೆರವುಗೊಳಿಸುತ್ತದೆ.


3. ಚಕ್ಕೆ ಮತ್ತು ತೆಂಗಿನ ಎಣ್ಣೆ:
ಚಕ್ಕೆ ಮತ್ತು ತೆಂಗಿನ ಎಣ್ಣೆಯ ಫೇಸ್ ಪ್ಯಾಕ್ ಚರ್ಮದ ತುರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಪೋಷಿಸುತ್ತದೆ ಮತ್ತು ಶುಷ್ಕತೆಯನ್ನು ಹೋಗಲಾಡಿಸುತ್ತದೆ. ದಾಲ್ಚಿನ್ನಿ ಪುಡಿಯಲ್ಲಿ ಕೆಲವು ಹನಿ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.


ಇದನ್ನೂ ಓದಿ : Hair Colour ಬೇಕಿಲ್ಲ, ಈ 5 ಉಪಾಯಗಳಿಂದ ಪರ್ಮನೆಂಟ್ ಆಗಿ ನಿಮ್ಮ ಕೂದಲನ್ನು ಕಪ್ಪಾಗಿಸಿ!


4.ಚಕ್ಕೆ ಮತ್ತು ಮೊಸರು: 
ದಾಲ್ಚಿನ್ನಿಯಂತೆ, ಮೊಸರು ಸಹ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಒಂದು ಚಮಚ ದಾಲ್ಚಿನ್ನಿ ಪುಡಿ ಮತ್ತು ಸಮಾನ ಪ್ರಮಾಣದ ಮೊಸರು ಮಿಶ್ರಣ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ವಿಧಾನವು ನಿಮ್ಮ ಚರ್ಮದ ಟೋನ್ ಅನ್ನು ಸರಿದೂಗಿಸುತ್ತದೆ.


5. ಚಕ್ಕೆ ಮತ್ತು ಬಾಳೆಹಣ್ಣು:
ಮುಖದ ಸೌಂದರ್ಯಕ್ಕಾಗಿ ಚಕ್ಕೆ ಮತ್ತು ಬಾಳೆಹಣ್ಣಿನ ಫೇಸ್ ಪ್ಯಾಕ್  ಬಳಸಬಹುದು. ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ನಂತರ ಅದಕ್ಕೆ ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಸುಮಾರು 5 ನಿಮಿಷಗಳ ಕಾಲ ಮಸಾಜ್ ಮಾಡಿ. ಸ್ವಲ್ಪ ಸಮಯ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಮುಖಕ್ಕೆ ಅದ್ಭುತವಾದ ಹೊಳಪನ್ನು ತರುತ್ತದೆ


ಇದನ್ನೂ ಓದಿ : ಈ ತರಕಾರಿ ಜ್ಯೂಸ್ ಕುಡಿಯುವುದರಿಂದ ಒಂದೇ ವಾರದಲ್ಲಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್



( ಸೂಚನೆ :  ಪ್ರಿಯ ಓದುಗರೇ, ನಮ್ಮ ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ನಾವು ಇದನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನೀವು ಇದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.)