7 ದಿನದಲ್ಲಿ 7 ಕೆಜಿ ತೂಕ ಇಳಿಸುವ ಸವಾಲಿಗೆ ಸಿದ್ದರಿದ್ದ್ದೀರಾ? ಹಾಗಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

ಮಿತಿಮೀರಿದ ಕ್ಯಾಲೋರಿ ನಿರ್ಬಂಧ ಮತ್ತು ವಿಪರೀತ ಡಯಟ್ ಆರೋಗ್ಯಕ್ಕೆ ಎಂದಿಗೂ ಮಾರಕ. ಇದು ತೂಕ ನಷ್ಟಕ್ಕೆ ಸಹಾಯ ಮಾಡಬಹುದಾದರೂ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪಪರಿಣಾಮ ಬೀರಲಿದೆ.

Written by - Ranjitha R K | Last Updated : Sep 14, 2023, 11:44 AM IST
  • ಸಮತೋಲಿತ ಆಹಾರವನ್ನು ಸೇವಿಸಿ
  • ಹೆಚ್ಚು ನೀರು ಕುಡಿಯಬೇಕು
  • ದಿನವೂ ವ್ಯಾಯಾಮ ಮಾಡುವುದು
7 ದಿನದಲ್ಲಿ 7 ಕೆಜಿ ತೂಕ ಇಳಿಸುವ ಸವಾಲಿಗೆ ಸಿದ್ದರಿದ್ದ್ದೀರಾ? ಹಾಗಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ   title=

ಬೆಂಗಳೂರು : ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಾಧ್ಯವಾದರೂ, ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳುವುದು ಬಹಳ  ಮುಖ್ಯ. ಮಿತಿಮೀರಿದ ಕ್ಯಾಲೋರಿ ನಿರ್ಬಂಧ ಮತ್ತು ವಿಪರೀತ ಡಯಟ್ ಆರೋಗ್ಯಕ್ಕೆ ಮಾರಕ. ಇದು ತೂಕ ನಷ್ಟಕ್ಕೆ ಸಹಾಯ ಮಾಡಬಹುದಾದರೂ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪಪರಿಣಾಮ ಬೀರಲಿದೆ. ಅಥವಾ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುವುದಕ್ಕೂ ಕಾರಣವಾಗಬಹುದು. ಆರೋಗ್ಯಕರ ರೀತಿಯಲ್ಲಿ ವಾರದಲ್ಲಿ 7 ಕೆಜಿ ಕಳೆದುಕೊಳ್ಳಲು ನೀವು ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ. 

ಸಮತೋಲಿತ ಆಹಾರವನ್ನು ಸೇವಿಸಿ : 
ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ನೆನಪಿಟ್ಟುಕೊಳ್ಳಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ಆಹಾರಕ್ರಮ. 7 ದಿನಗಳಲ್ಲಿ 7 ಕಿಲೋಗಳನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ನಿಮ್ಮ ಆಹಾರದಲ್ಲಿ ಏನಿರಬೇಕು ಏನಿರಬಾರದು ಎನ್ನುವುದು ನಿಮಗೆ ತಿಳಿದಿರಬೇಕು. ಹೌದು ತೂಕ ಇಳಿಸುವ ಪ್ರಕ್ರಿಯೆಗೆ ಮುಂದಾದಾಗ ಆಹಾರದಲ್ಲಿ ಕಾಲೋಚಿತ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ತುಂಬಿರಬೇಕು.  ಇದರ ಬದಲು ಸಂಸ್ಕರಿಸಿದ ಆಹಾರಗಳು, ಸಕ್ಕರೆ ಪಾನೀಯಗಳು ಮತ್ತು ಅನಾರೋಗ್ಯಕರ ಕೊಬ್ಬನ್ನು ಸಂಪೂರ್ಣವಾಗಿ  ಕೈ ಬಿಡಬೇಕು. 

ಇದನ್ನೂ ಓದಿ : ಎಳ ನೀರಿನಲ್ಲಿ ಈ ವಸ್ತುವನ್ನು ಹಾಕಿ ನಿತ್ಯ ಸೇವಿಸಿ ! ಒಂದೇ ವಾರದಲ್ಲಿ ಇಳಿಕೆಯಾಗುವುದು ತೂಕ

ಹೆಚ್ಚು ನೀರು ಕುಡಿಯಬೇಕು : 
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ,  ದೇಹದಲ್ಲಿ ನೀರಿನ ಪ್ರಮಾಣ  ಅಗತ್ಯ. ನೀರು ಚಯಾಪಚಯವನ್ನು ವೇಗಗೊಳಿಸುತ್ತದೆ. ಅಲ್ಲದೆ, ನೀವು ಬಿಸಿನೀರನ್ನು ಸೇವಿಸಿದರೆ, ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಬಿಸಿ ನೀರು ಚಯಾಪಚಯವನ್ನು ಮತ್ತಷ್ಟು ವೇಗಗೊಳಿಸುತ್ತದೆ.

ದಿನವೂ ವ್ಯಾಯಾಮ ಮಾಡುವುದು : 
ತೂಕ ಇಳಿಸಿಕೊಳ್ಳಲು ಬಯಸಿದರೆ ವ್ಯಾಯಾಮ ಅತ್ಯಗತ್ಯ. ನಿಯಮಿತ ವ್ಯಾಯಾಮವು ಆಹಾರದಷ್ಟೇ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ನಿತ್ಯ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡುವುದು ಅಗತ್ಯವಾಗಿರುತ್ತದೆ. 

ಇದನ್ನೂ ಓದಿ : ತೂಕ ಇಳಿಕೆ : 5 ರೂಪಾಯಿಯ ಈ ಚಹಾ ಶಾಶ್ವತವಾಗಿ ಬೊಜನ್ನು ಕಡಿಮೆ ಮಾಡುತ್ತೆ

ಸಾಕಷ್ಟು ನಿದ್ರೆ ಮಾಡುವುದು : 
ತೂಕವನ್ನು ಕಳೆದುಕೊಳ್ಳುವ ಮುಂದಿನ ಪ್ರಮುಖ ಹಂತವೆಂದರೆ ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡುವುದು. ಸಾಕಷ್ಟು ನೀರು ಕುಡಿಯುವುದು ಮತ್ತು ವ್ಯಾಯಾಮದ ನಂತರ ದೇಹಕ್ಕೆ ವಿಶ್ರಾಂತಿ ಮಾಡಲು ಅವಕಾಶ ಮಾಡಿಕೊಡುವುದು. ನಿದ್ರೆಯ ಕೊರತೆಯಿಂದ ದೇಹವು ಗ್ರೆಲಿನ್ ಎಂಬ ಹಾರ್ಮೋನ್ ಅನ್ನು ಹೆಚ್ಚು ಉತ್ಪಾದಿಸಲು ಕಾರಣವಾಗುತ್ತದೆ. ಇದು ನಿಮಗೆ ಹಸಿವನ್ನುಂಟು ಮಾಡುತ್ತದೆ. ಪರಿಣಾಮವಾಗಿ, ಹೆಚ್ಚು ತಿನ್ನುತ್ತೀರಿ ಮತ್ತು ತೂಕಹೆಚ್ಚಾಗಬಹುದು. ಹಾಗಾಗಿ ಪ್ರತಿ ರಾತ್ರಿ 7-8 ಗಂಟೆಗಳ ಕಾಲ ನಿದ್ದೆ ಮಾಡಿ. 

ಒತ್ತಡದಿಂದ ದೂರವಿರಿ : 
ಒಂದು ವಾರದಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಒತ್ತಡದಿಂದ ದೂರವಿರಬೇಕು. ಒತ್ತಡವು ಅತಿಯಾಗಿ ತಿನ್ನುವಂತೆ ಮಾಡುತ್ತದೆ. ವುದು ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಯೋಗ, ಧ್ಯಾನ ಅಥವಾ ದೈಹಿಕ ಚಟುವಟಿಕೆಯಂತಹ ಆರೋಗ್ಯಕರ ಒತ್ತಡ- ನಿಯಂತ್ರಣ  ತಂತ್ರಗಳನ್ನು  ಅನುಸರಿಸಿ. 

ಇದನ್ನೂ ಓದಿ : ಬೊಕ್ಕ ತಲೆ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆ? ಈ ಉಪಾಯ ಮಾಡಿ ತಲೆಯಲ್ಲಿ ಮತ್ತೆ ಕೂದಲುಗಳು ಕಾಣಿಸಿಕೊಳ್ಳುತ್ತವೆ!

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
 

Trending News