ಮೆಂತ್ಯೆ ಬೀಜಕ್ಕೆ ಈ ವಸ್ತು ಬೆರೆಸಿ ಹೆಚ್ಚಿದರೆ ಕೂದಲು ಕಪ್ಪಾಗುವುದು ಮಾತ್ರವಲ್ಲ ಕೂದಲು ಉದುರುವುದೂ ಇಲ್ಲ
Hair care tips in Kannada : ಕೂದಲಿಗೆ ಸರಿಯಾದ ಪೋಷಣೆಯನ್ನು ನೀಡಲು ಮೆಂತ್ಯೆ ಬೀಜಗಳು ತುಂಬಾ ಉಪಯುಕ್ತವಾಗಿವೆ. ಹಾಗಾದರೆ ಮೆಂತ್ಯೆ ಕಾಳುಗಳನ್ನು ಬಳಸುವುದು ಮತ್ತು ಅದರ ಪ್ರಯೋಜನಗಳನ್ನುಪಡೆಯುವುದು ಹೇಗೆ ನೋಡೋಣ.
ಬೆಂಗಳೂರು : ಸರಿಯಾದ ಪೋಷಣೆಯ ಕೊರತೆಯಿಂದ ಕೂದಲಿನ ಅಂದ ಕೆಡುತ್ತದೆ. ಮಾಲಿನ್ಯದ ಕಾರಣದಿಂದಲೂ ಕೂದಲು ಅನೇಕ ರೀತಿಯಲ್ಲಿ ಹಾನಿಗೊಳಗಾಗುತ್ತದೆ. ಕೂದಲು ಆರೋಗ್ಯಕರವಾಗಿರಲು ಸರಿಯಾದ ಪೋಷಣೆ ನೀಡುವುದು ಬಹಳ ಮುಖ್ಯ. ಇದಕ್ಕಾಗಿ ಮನೆಯಲ್ಲಿಯೇ ಇರುವ ನಿತ್ಯ ಬಳಕೆಯ ಈ ವಸ್ತುಗಳನ್ನು ಬಳಸಬಹುದು. ಹೌದು, ಕೂದಲಿಗೆ ಸರಿಯಾದ ಪೋಷಣೆಯನ್ನು ನೀಡಲು ಮೆಂತ್ಯೆ ಬೀಜಗಳು ತುಂಬಾ ಉಪಯುಕ್ತವಾಗಿವೆ. ಹಾಗಾದರೆ ಮೆಂತ್ಯೆ ಕಾಳುಗಳನ್ನು ಬಳಸುವುದು ಮತ್ತು ಅದರ ಪ್ರಯೋಜನಗಳನ್ನುಪಡೆಯುವುದು ಹೇಗೆ ನೋಡೋಣ.
ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಯಾವ ಉತ್ಪನ್ನಗಳನ್ನು ಬಳಸಬೇಕು? :
* ಮೆಂತ್ಯೆ ಬೀಜಗಳು
* ಅಲೋವೆರಾ ಜೆಲ್
* ತೆಂಗಿನ ಎಣ್ಣೆ
ಇದನ್ನೂ ಓದಿ : ತಿಂಗಳಿಗೆ 10 ಕೆಜಿ ತೂಕ ಇಳಿಸಬೇಕಾ... ನಿಮಗೆ ನಿರಾಸೆ ಮಾಡದ 'ಡಯಟ್ ಪ್ಲಾನ್' ಇಲ್ಲಿದೆ!
ಮೆಂತ್ಯೆ ಕಾಳುಗಳನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು? :
* ಮೆಂತ್ಯೆ ಬೀಜಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
* ಕೂದಲು ಉದುರುವುದನ್ನು ತಡೆದು ದಟ್ಟ ಕುಡು ಬೆಳೆಯಲು ಸಹಾಯ ಮಾಡುತ್ತದೆ
* ಕೂದಲಿಗೆ ಹೊಸ ಕಾಂತಿ ನೀಡುತ್ತದೆ.
ನಿಮ್ಮ ಕೂದಲಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಏನು ಪ್ರಯೋಜನ? :
* ಕೊಬ್ಬರಿ ಎಣ್ಣೆ ಕೂದಲಿಗೆ ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ.
* ಅಲ್ಲದೆ, ಒಣ ಕೂದಲಿನ ಸಮಸ್ಯೆಯ ಮೇಳ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಕೂದಲಿಗೆ ಅಲೋವೆರಾ ಜೆಲ್ ಪ್ರಯೋಜನ :
* ಅಲೋವೆರಾ ಜೆಲ್‌ನಲ್ಲಿ ವಿಟಮಿನ್-ಎ, ವಿಟಮಿನ್-ಸಿ ಮತ್ತು ವಿಟಮಿನ್-ಬಿ ಇದ್ದು ಇದು ಕೂದಲಿಗೆ ಹೇರಳವಾದ ಪೋಷಣೆ ನೀಡುತ್ತದೆ.
* ಅಲೋವೆರಾ ಜೆಲ್‌ನಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಗುಣಗಳು ಕೂದಲಿಗೆ ಮಾಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ.
* ಅಲೋವೆರಾ ಜೆಲ್‌ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕೂದಲನ್ನು ಎಲ್ಲಾ ರೀತಿಯ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಎಳ್ಳೆಣ್ಣೆಯಲ್ಲಿ ಈ ಒಂದು ವಸ್ತುವನ್ನು ಬೆರೆಸಿ ಕೂದಲಿಗೆ ಹಚ್ಚಿ: ಒಂದೇ ಗಂಟೆಯಲ್ಲಿ ಬಿಳಿಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತೆ!
ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಏನು ಮಾಡಬೇಕು? :
* ಹಾನಿಗೊಳಗಾದ ಕೂದಲನ್ನು ಸರಿಪಡಿಸಲು, ಮೊದಲು ಮೆಂತ್ಯೆಯನ್ನು ಪುಡಿಮಾಡಿ.
* ನಂತರ ಇದನ್ನು ಒಣಗಿಸಿ.
* ಒಣಗಿದ ನಂತರ, ಅದಕ್ಕೆ ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸಿ.
* ಇವೆಲ್ಲವನ್ನೂ ಮಿಕ್ಸ್ ಮಾಡಿ ನೆತ್ತಿಯಿಂದ ಕೂದಲಿಗೆ ಹಚ್ಚಿ.
* ಇದನ್ನು ಕೂದಲಿನ ಮೇಲೆ ಸುಮಾರು 1 ಗಂಟೆವರೆಗೆ ಬಿಡಿ.
* ಇದಾದ ನಂತರ ಕೂದಲನ್ನು ನೀರಿನ ಸಹಾಯದಿಂದ ತೊಳೆಯಿರಿ.
* ನಂತರ ಶಾಂಪೂ ಮತ್ತು ಕಂಡೀಷನರ್ ಮಾಡಿ.
* ನಿಯಮಿತವಾಗಿ ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಕೆಲವೇ ದಿನಗಳಲ್ಲಿ ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ.
ಇದನ್ನೂ ಓದಿ : ವೇಗವಾಗಿ ತೂಕ ಇಳಿಸಿಕೊಳ್ಳಲು ಒಂದು ಟೇಸ್ಟಿ ವಿಧಾನ: ಸೋಯಾ ಚಂಕ್ಸ್ ಅನ್ನು ಈ ರೀತಿ ಸೇವಿಸಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್