ಎಳ್ಳೆಣ್ಣೆಯಲ್ಲಿ ಈ ಒಂದು ವಸ್ತುವನ್ನು ಬೆರೆಸಿ ಕೂದಲಿಗೆ ಹಚ್ಚಿ: ಒಂದೇ ಗಂಟೆಯಲ್ಲಿ ಬಿಳಿಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತೆ!

White hair home remedies: ನಮ್ಮಲ್ಲಿ ಹಲವರು ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಲು ಇಷ್ಟಪಡುತ್ತಾರೆ. ಆದರೆ ಎಳ್ಳೆಣ್ಣೆಯನ್ನು ಬಳಸುವುದರಿಂದ ಕೂದಲನ್ನು ಕಪ್ಪಾಗಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು ಎಳ್ಳಿನ ಎಣ್ಣೆಯು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.

Written by - Bhavishya Shetty | Last Updated : Oct 18, 2023, 09:21 PM IST
    • ಒಂದು ಬೆಸ್ಟ್ ಮನೆಮದ್ದಿನ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ
    • ಎಳ್ಳಿನ ಎಣ್ಣೆಯು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.
    • ನಮ್ಮಲ್ಲಿ ಹಲವರು ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಲು ಇಷ್ಟಪಡುತ್ತಾರೆ
ಎಳ್ಳೆಣ್ಣೆಯಲ್ಲಿ ಈ ಒಂದು ವಸ್ತುವನ್ನು ಬೆರೆಸಿ ಕೂದಲಿಗೆ ಹಚ್ಚಿ: ಒಂದೇ ಗಂಟೆಯಲ್ಲಿ ಬಿಳಿಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತೆ! title=
White Hair home remedies

White hair home remedies: ಆಧುನಿಕ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ನಾವು ಹಲವಾರು ರೀತಿಯ ಪರಿಹಾರಗಳನ್ನು ಪ್ರಯತ್ನಿಸುತ್ತೇವೆ. ಅದರಲ್ಲಿ ಒಂದು ಬೆಸ್ಟ್ ಮನೆಮದ್ದಿನ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಇದನ್ನೂ ಓದಿ:ಬಾಂಗ್ಲಾ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಪ್ರಕಟಿಸಿದ ಕೋಚ್- ಈ ಮೂವರು ಆಟಗಾರರಿಗಿಲ್ಲ ಅವಕಾಶ

ನಮ್ಮಲ್ಲಿ ಹಲವರು ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಲು ಇಷ್ಟಪಡುತ್ತಾರೆ. ಆದರೆ ಎಳ್ಳೆಣ್ಣೆಯನ್ನು ಬಳಸುವುದರಿಂದ ಕೂದಲನ್ನು ಕಪ್ಪಾಗಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು ಎಳ್ಳಿನ ಎಣ್ಣೆಯು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.

ಕೂದಲು ಕಪ್ಪಾಗಲು ಗೋರಂಟಿಗೆ ಎಳ್ಳೆಣ್ಣೆ ಬೆರೆಸಿ ಹಚ್ಚಿಕೊಳ್ಳಬಹುದು. ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಕೂದಲಿನ ಹೊಳಪನ್ನು ಸುಧಾರಿಸಿ, ನೆತ್ತಿಯ ಸೋಂಕನ್ನು ಸಹ ತಡೆಯುತ್ತದೆ.

1 ಕಪ್ ಎಳ್ಳೆಣ್ಣೆಯನ್ನು ತೆಗೆದುಕೊಂಡು, ಅದರಲ್ಲಿ 1 ಚಮಚ ಗೋರಂಟಿ ಪುಡಿ ಅಥವಾ ಗೋರಂಟಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಇದರ ನಂತರ, ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ವಾರಕ್ಕೆ ಎರಡು ಬಾರಿ ಹಚ್ಚಿ. ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ನಿಯಮಿತವಾಗಿ ಹಚ್ಚಿದರೆ ಕೂದಲು ಕ್ರಮೇಣ ಕಪ್ಪಾಗುತ್ತಾ ಬರುತ್ತದೆ.

ಇನ್ನೊಂದು ಪರಿಹಾರವೆಂದರೆ, ಕೂದಲು ಕಪ್ಪಾಗಲು ಕರಿಬೇವಿನ ಎಲೆಯನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಚ್ಚಬಹುದು. ಕರಿಬೇವಿನ ಎಲೆಗಳ ಸಹಾಯದಿಂದ ಕೂದಲು ಉದುರುವಿಕೆಯನ್ನು ಸಹ ತಡೆಯಬಹುದು. ಇದು ಕೂದಲನ್ನು ಬಲಪಡಿಸುತ್ತದೆ.

ಮೊದಲು 1 ಕಪ್ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಸುಮಾರು ಅರ್ಧ ಕಪ್ ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಈ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ನಿಯಮಿತವಾಗಿ ಹಚ್ಚಿದರೆ, ಕೂದಲಿನ ಬಣ್ಣ ವೇಗವಾಗಿ ಕಪ್ಪಾಗುತ್ತದೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಈ ಭಾಗಗಳಲ್ಲಿ 2 ದಿನ ಗುಡುಗು-ಮಿಂಚು ಸಹಿತ ಕುಂಭದ್ರೋಣ ಮಳೆ ಭೀತಿ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News