ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಮಹಿಳೆಯರು ಹೂವು ಮೂಡಿದ್ರೆ ಏನಾಗುತ್ತೆ!! ಶುಭನಾ? ಅಶುಭನಾ?
Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.
ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವ ಭಕ್ತರು ಹೂವನ್ನು ಮುಡಿಯುತ್ತಾರೆ ಮತ್ತು ಮಹಿಳೆಯರು ಸೀರೆ ಕುಂಕುಮ ತಲೆ ತುಂಬಾ ಹೂವು ಮುಡಿದುಕೊಂಡು ದೇವಸ್ಥಾನಕ್ಕೆ ಹೋಗುವುದು ಸಾಮಾನ್ಯ ವಿಷಯ ಆದರೆ ತಿರುಪತಿಗೆ ಹೋಗಬೇಕಾದರೆ ಹೂ ಮುಡಿದು ಹೋಗುವುದಕ್ಕೆ ಅವಕಾಶವಿಲ್ಲ
ಇದನ್ನು ಓದಿ : ಐ ಹ್ಯಾಮ್ ಕಮಿಂಗ್ ಎಂದ 'ಕರುನಾಡ ಕಿಂಗ್'...ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್
ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಹೋಗುತ್ತಾರೆ ಆ ಸಮಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪ್ರತಿದಿನ ವಿಶೇಷ ಪೂಜೆ ಅರ್ಚನೆಗಳು ನಡೆಯುತ್ತಲೇ ಇರುತ್ತವೆ. ವಿವಿಧ ಅಲಂಕಾರಗಳಿಂದ ತಿಮ್ಮಪ್ಪನನ್ನು ಅಲಂಕರಿಸಿರುತ್ತಾರೆ. ವಿಷ್ಣು ವನ್ನು ಅಲಂಕಾರಗಳ ಪ್ರೇಮಿ ಎಂದು ಕರೆಯುತ್ತಾರೆ ಮತ್ತು ಶ್ರೀಹರಿಯನ್ನು ಹೂಗಳ ಪ್ರೇಮಿ ಎಂದು ಕರೆಯುತ್ತಾರೆ
ಪುರಾಣಗಳ ಪ್ರಕಾರ ತಿರುಮಲ ಸ್ವಾಮಿಯನ್ನು ಹೂವಿನಿಂದ ಅಲಂಕರಿಸುತ್ತಾರೆ ಮತ್ತು ಮಂಟಪವು ಕೂಡ ಹೂವಿನ ಮಂಟಪವಾಗಿದೆ. ಈ ಕಾರಣದಿಂದ ವೆಂಕಟೇಶ್ವರ ಸ್ವಾಮಿ ಹೂಗಳ ಪ್ರೇಮಿ ಆಗಿರುವುದರಿಂದ ಪ್ರತಿದಿನ ಟನ್ ಗಟ್ಟಲೆ ದೇವರಿಗೆ ಅಲಂಕರಿಸುತ್ತಾರೆ.
ಇದನ್ನು ಓದಿ : ಕಲ್ಕಿ ಚಿತ್ರದ ಮೂಲಕ 55 ವರ್ಷಗಳಲ್ಲಿ ಕಾಣದ ಸಾಧನೆ ಮಾಡಿದ ಬಿಗ್ ಬಿ!! ಏನದು ?
ತಿರುಮಲದಲ್ಲಿ ಅರಳುವ ಪ್ರತಿಯೊಂದು ಹೂ ವಿಷ್ಣುವಿನ ಸಲುವಾಗಿ ಮತ್ತು ವಿಷ್ಣುವಿನ ಅಲಂಕಾರಕ್ಕಾಗಿ ಅರಳುತ್ತವೆ ಎಂದು ಜನರು ನಂಬಿದ್ದಾರೆ. ತಿರುಪತಿಯ ಏಳು ಬೆಟ್ಟಗಳಲ್ಲಿ ಎಲ್ಲೇ ಹೂಗಳಾದರೂ ಅದು ತಿರುಪತಿ ತಿಮ್ಮಪ್ಪನಿಗೆ ಸಲ್ಲಬೇಕೆಂದು ಜನರ ನಂಬಿಕೆ. ಈ ಕಾರಣದಿಂದ ಅಲ್ಲಿಗೆ ಹೋಗುವ ಭಕ್ತರು ಯಾರು ಹೂವನ್ನು ಮುಡಿಯುವುದಿಲ್ಲ ಮತ್ತು ದೇವಸ್ಥಾನಕ್ಕೆ ದರ್ಶನಕ್ಕೆ ಬರುವ ಭಕ್ತರು ಹೂಗಳನ್ನು ಮುಡಿಯಬಾರದು ಎಂಬ ನಿಯಮವು ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟ್ ನಿಯಮವನ್ನು ಮಾಡಿದ್ದಾರೆ ಮತ್ತು ದರ್ಶನಕ್ಕೆ ನಿಂತಿರುವವರನ್ನು ಸಾಲಿನಿಂದ ಹೊರಗೆ ಹಾಕುತ್ತಾರೆ ಮತ್ತು ದರ್ಶನಕ್ಕೆ ಅವಕಾಶ ನೀಡುವುದಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.