Conch Amazing Uses: ಶಂಖದ ಈ ಲಾಭಗಳ ಕುರಿತು ನಿಮಗೆ ತಿಳಿದಿದೆಯಾ? ಈ ರೀತಿ ಮನೆಯಲ್ಲಿಟ್ಟರೆ ಚಮತ್ಕಾರ ನಡೆಯಲಿದೆ
Benefits Of Conch - ಮನೆಯಲ್ಲಿ ಶಂಖ ಇಡುವುದರ ಹಲವಾರು ಪ್ರಯೋಜನಗಳಿವೆ. ಇದರಿಂದ ವಾಸ್ತುದೋಷ ನಿವಾರಣೆಯಾಗುವುದರ ಜೊತೆಗೆ ಹಲವು ರೋಗಗಳಿಂದಲೋ ಕೂಡ ಮುಕ್ತು ಸಿಗುತ್ತದೆ.
Benefits Of Conch - ಹಿಂದೂ ಧರ್ಮದಲ್ಲಿ, ಪೂಜೆಯ ವೇಳೆ ಶಂಖದ (Conch) ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅನೇಕ ಮನೆಗಳಲ್ಲಿ ಪೂಜೆಯ ನಂತರ ಪ್ರತಿದಿನ ಶಂಖವನ್ನು ಊದಲಾಗುತ್ತದೆ. ಶಂಖವನ್ನು ಊದುವುದು ಇಡೀ ಪರಿಸರದಲ್ಲಿ ಸಕಾರಾತ್ಮಕತೆಯನ್ನು (Positivity) ತರುತ್ತದೆ. ಆದರೆ ಶಂಖದ ಇತರ ಅನೇಕ ಪ್ರಯೋಜನಗಳಿವೆ (Benefits of Conch)ಎಂದು ಕೆಲವರು ಹೇಳುತ್ತಾರೆ. ಇದು ಕೇವಲ ಪೂಜೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯ ಮತ್ತು ಸಂಪತ್ತಿಗೆ ಸಂಬಂಧಿಸಿದೆ ಎಂದು ಹಲವರ ಅಭಿಮತ. ಸಾಗರ ಮಂಥನದಿಂದ ಹೊರ ಬಂದ ಶಂಖವನ್ನು ಮನೆಯಲ್ಲಿ ಇಟ್ಟುಕೊಂಡರೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ತುಂಬಾ ಲಾಭಕಾರಿಯಾಗಿದೆ ಶಂಖ
>> ಶಂಖ ಎಂದರೆ ವಿಷ್ಣು (Lord Vishnu) ಮತ್ತು ದೇವಿ ಲಕ್ಷ್ಮಿ (Goddess Laxmi) ಇಬ್ಬರಿಗೂ ಇಷ್ಟದ ವಸ್ತು. ಶಂಖವಿರುವ ಮನೆಯಲ್ಲಿ ಶ್ರೀವಿಷ್ಣು ಹಾಗೂ ಲಕ್ಷ್ಮಿಯ ಕೃಪೆ ಇರುತ್ತದೆ ಎನ್ನಲಾಗುತ್ತದೆ.
>> ಶ್ರೀಮಂತರಾಗಲು (Rich), ಶಂಖವು ತುಂಬಾ ಉಪಯುಕ್ತವಾಗಿದೆ ಏಕೆಂದರೆ ಶಂಖವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ, ಶುಕ್ರವಾರದಂದು ಲಕ್ಷ್ಮಿಯನ್ನು ಪೂಜಿಸುವುದು ಮತ್ತು ಶಂಖವನ್ನು ಊದುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಇದನ್ನೂ ಓದಿ-Astrology: ಈ ರಾಶಿಯವರು ಬಹಳ ಕಷ್ಟಪಟ್ಟು ನಿಜವಾದ ಪ್ರೀತಿ ಗಳಿಸುತ್ತಾರೆ
>> ಶಂಖದಲ್ಲಿ ನೀರನ್ನು ತುಂಬಿಸಿ ಲಕ್ಷ್ಮಿ ಮತ್ತು ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಅವರು ಪ್ರಸನ್ನರಾಗುತ್ತಾರೆ ಮತ್ತು ತನ್ನ ಭಕ್ತ್ರರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾರೆ.
>> ಮನೆಯ ಋಣಾತ್ಮಕತೆಯನ್ನು ಹೋಗಲಾಡಿಸಲು, ಶಂಖವನ್ನು ನೀರಿನಿಂದ ತುಂಬಿಸಿ ಮತ್ತು ಮನೆಯಾದ್ಯಂತ ಸಿಂಪಡಿಸಿ.
>> ಶಂಖವನ್ನು ಊದುವುದರಿಂದ ಶ್ವಾಸಕೋಶಕ್ಕೆ ಬಲ ಸಿಗುತ್ತದೆ. ಅಸ್ತಮಾ ರೋಗಿಗಳು ಪ್ರತಿನಿತ್ಯ ಶಂಖವನ್ನು ಊದಿದರೆ ಹೆಚ್ಚಿನ ಲಾಭ ಸಿಗುತ್ತದೆ.
>> ಮೂಳೆ ಸಂಬಂಧಿ ಸಮಸ್ಯೆ ಇರುವವರು ಶಂಖದಲ್ಲಿಟ್ಟ ನೀರನ್ನು ಕುಡಿಯಬೇಕು. ಇದು ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಈ ನೀರಿನಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್ ಮತ್ತು ಸಲ್ಫರ್ ಇದ್ದು ಇದರಿಂದ ಮೂಳೆಗಳು ಬಲಿಷ್ಠವಾಗುತ್ತವೆ.
>> ವಾಸ್ತು ದೋಷಗಳಿರುವ ಮನೆಗಳಲ್ಲಿ ಪ್ರತಿನಿತ್ಯ ಶಂಖವನ್ನು ಊದುವುದರಿಂದ ವಾಸ್ತು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ವಾಸಿಸುವವರ ಸಂತಸ ಹೆಚ್ಚುತ್ತದೆ.
ಇದನ್ನೂ ಓದಿ-Dhanteras 2021: ಧನತ್ರಯೋದಶಿಯಲ್ಲಿ ಶಾಪಿಂಗ್ ಮಾಡಲು ಯೋಜಿಸುತ್ತಿರುವಿರಾ? ಇಲ್ಲಿದೆ ಶುಭ ಮುಹೂರ್ತ
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಯಾವುದೇ ಸಲಹೆ ಅನುಸರಿಸುವುದಕ್ಕು ಮುನ್ನ ನುರಿತ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Venus Transit October 2021: ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ