Astrology: ಈ ರಾಶಿಯವರು ಬಹಳ ಕಷ್ಟಪಟ್ಟು ನಿಜವಾದ ಪ್ರೀತಿ ಗಳಿಸುತ್ತಾರೆ

Astrology: ನಿಜವಾದ ಪ್ರೀತಿಯನ್ನು ಪಡೆಯಲು ಕೆಲವರು ಕಷ್ಟಪಡಬೇಕಾಗುತ್ತದೆ. ಅನೇಕ ಕಷ್ಟಗಳನ್ನು ಎದುರಿಸಿದ ನಂತರ, ಅವರು ಉತ್ತಮ ಸಂಗಾತಿಯನ್ನು ಪಡೆಯುತ್ತಾರೆ.  

Written by - Yashaswini V | Last Updated : Oct 29, 2021, 10:56 AM IST
  • ಈ ರಾಶಿಚಕ್ರದ ಜನರು ನಿಜವಾದ ಪ್ರೀತಿಯನ್ನು ಪಡೆಯುವುದು ಅಷ್ಟು ಸುಲಭವಲ್ಲ
  • ನಿಜವಾದ ಪ್ರೀತಿಯನ್ನು ಹುಡುಕುವಲ್ಲಿ ಇವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ
  • ಅನೇಕ ಕಷ್ಟಗಳನ್ನು ಎದುರಿಸಿದ ನಂತರ, ಅವರು ಉತ್ತಮ ಸಂಗಾತಿಯನ್ನು ಪಡೆಯುತ್ತಾರೆ
Astrology: ಈ ರಾಶಿಯವರು ಬಹಳ ಕಷ್ಟಪಟ್ಟು ನಿಜವಾದ ಪ್ರೀತಿ ಗಳಿಸುತ್ತಾರೆ title=
Unlucky in Love-Zodiac Sign

Astrology: ಪ್ರತಿಯೊಬ್ಬರೂ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಪಡೆಯಲು ಬಯಸುತ್ತಾರೆ. ಆದರೆ ಎಲ್ಲರಿಗೂ ನಿಜವಾದ ಪ್ರೀತಿ ಸಿಗುವುದಿಲ್ಲ. ಕೆಲವು ಜನರು ತುಂಬಾ ಅದೃಷ್ಟವಂತರು, ಅವರಿಗೆ ಬಹಳ ಸುಲಭವಾಗಿ ನಿಜವಾದ ಪ್ರೀತಿ ಪ್ರಾಪ್ತಿಯಾಗುತ್ತದೆ. ಅದೇ ಸಮಯದಲ್ಲಿ, ಅನೇಕ ಜನರ ಇಡೀ ಜೀವನವು ನಿಜವಾದ ಪ್ರೀತಿಯ ಹುಡುಕಾಟದಲ್ಲಿಯೇ ಕಳೆಯುತ್ತದೆ. 

ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು ನಿಜವಾದ ಪ್ರೀತಿಯನ್ನು ಹುಡುಕುವಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರ ಹಿಂದೆ, ಅವರ ಅದೃಷ್ಟದ ಹೊರತಾಗಿ, ಕೆಲವು ಅರ್ಹತೆ ಮತ್ತು ನ್ಯೂನತೆಗಳು ಸಹ ಕಾರಣವಾಗಿವೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ.

ಇದನ್ನೂ ಓದಿ- Astrology: ಪತಿಯನ್ನು ಕಣ್ಸನ್ನೆಯಲ್ಲಿಯೇ ಕುಣಿಸುತ್ತಾರಂತೆ ಈ 4 ರಾಶಿಯ ಹುಡುಗಿಯರು

ಈ ರಾಶಿಯವರಿಗೆ ನಿಜವಾದ ಪ್ರೀತಿಯ ಹಾದಿ ಅಷ್ಟು ಸುಲಭವಲ್ಲ:
ವೃಷಭ ರಾಶಿ (Taurus) :
ಈ ರಾಶಿಯವರು ತುಂಬಾ ಬುದ್ಧಿವಂತರು ಮತ್ತು ಶ್ರಮಜೀವಿಗಳು. ಅದೇ ಸಮಯದಲ್ಲಿ, ಅವರು ಪ್ರೀತಿಯ ವಿಷಯದಲ್ಲಿ ಬಹಳ ಸೂಕ್ಷ್ಮವಾಗಿರುತ್ತಾರೆ ಮತ್ತು ನಿಜವಾದ ಸಂಗಾತಿಯನ್ನು ಪಡೆಯಲು ಅನೇಕ ಜನರನ್ನು ಪರೀಕ್ಷಿಸುತ್ತಲೇ ಇರುತ್ತಾರೆ. ಈ ರಾಶಿಯವರಿಗೆ ಅನೇಕ ಬಾರಿ ಅವರು ನಿಜವಾದ ಪ್ರೀತಿಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. 

ಸಿಂಹ ರಾಶಿ  (Leo): ಸಿಂಹ ರಾಶಿಯ ಜನರು ಧೈರ್ಯಶಾಲಿಗಳು. ಅವರು ಯಾವಾಗಲೂ ಇಚ್ಛೆಯಂತೆ ಬದುಕಲು ಇಷ್ಟಪಡುತ್ತಾರೆ. ಅವರು ಬಂಧನದಲ್ಲಿ ಬದುಕಲು ಇಷ್ಟಪಡುವುದಿಲ್ಲ, ಆದ್ದರಿಂದ ಅವರು ಪ್ರೀತಿಸಿ ಮದುವೆಯಾಗುವುದನ್ನು ತಪ್ಪಿಸುತ್ತಾರೆ. ಈ ಕಾರಣದಿಂದಾಗಿ, ಅವರು ಪ್ರೀತಿಯ ಜೀವನದಲ್ಲಿ (Love Life) ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದಾಗ್ಯೂ, ಅವರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ ಮತ್ತು ನಿಜವಾದ ಪ್ರೀತಿಯನ್ನು ಕಂಡುಕೊಂಡ ನಂತರವೇ ನಿಟ್ಟುಸಿರು ಬಿಡುತ್ತಾರೆ.

ಇದನ್ನೂ ಓದಿ- Venus Transit October 2021: ದೀಪಾವಳಿಗೂ ಮೊದಲು ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು

ವೃಶ್ಚಿಕ ರಾಶಿ  (Scorpio): ವೃಶ್ಚಿಕ ರಾಶಿಯ ಜನರು ಪ್ರೀತಿಯಲ್ಲಿ ಬೀಳಲು ಇಷ್ಟಪಡುತ್ತಾರೆ. ಅವರು ತಮ್ಮ ಸಂಗಾತಿಯಿಂದಲೂ ಅಂತಹ ನಿಜವಾದ ಪ್ರೀತಿಯನ್ನು ನಿರೀಕ್ಷಿಸುತ್ತಾರೆ. ಆದರೆ ಅನೇಕ ಬಾರಿ ಅವರು ಪ್ರೀತಿಯನ್ನು ವ್ಯಕ್ತಪಡಿಸಲು ವಿಫಲರಾಗುತ್ತಾರೆ ಮತ್ತು ಇದರಿಂದಾಗಿ ಅವರು ಪ್ರೀತಿಯ ಜೀವನದಲ್ಲಿ ಅರ್ಹವಾದ ಎಲ್ಲವನ್ನೂ ಪಡೆಯುವುದಿಲ್ಲ. ಈ ರಾಶಿಯವರು ಜೀವನದಲ್ಲಿ ಪೀತಿಯಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚು.

ಮಕರ ರಾಶಿ (Capricorn): ಮಕರ ರಾಶಿಯವರು ತಪ್ಪು ವಿಷಯಗಳನ್ನು ಸಹಿಸಲಾರರು ಮತ್ತು ಅಂತಹ ಸಂದರ್ಭದಲ್ಲಿ ಅನಿಯಂತ್ರಿತರಾಗುತ್ತಾರೆ. ಈ ರಾಶಿಯ ಜನರು ಹೆಚ್ಚಾಗಿ ಕೇವಲ ತಮ್ಮ ಬಗ್ಗೆಅಷ್ಟೇ ಯೋಚಿಸುತ್ತಾರೆ. ಅದಕ್ಕಾಗಿಯೇ ಈ ಜನರು ಕೆಲವೊಮ್ಮೆ ನಿಜವಾದ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ.  

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News