White Hair Problem Solution : ಪ್ರಸ್ತುತ ಅನಾರೋಗ್ಯಕರ ಜೀವನಶೈಲಿ, ಮಾಲಿನ್ಯ ಮತ್ತು ಕೂದಲಿನ ಸಂಪೂರ್ಣ ಪೋಷಣೆಯ ಕೊರತೆಯಿಂದಾಗಿ,  ಕಿರಿ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ.  ಒಂದು ನಿರ್ದಿಷ್ಟ ವಯಸ್ಸಿಗಿಂತ ಮೊದಲು ಕೂದಲು ಬಿಳಿಯಾಗುವುದು ನಿಜಕ್ಕೂ ಉತ್ತಮ ಬೆಳವಣಿಗೆಯಂತೂ ಅಲ್ಲ. ಇತ್ತೀಚಿನ ದಿನಗಳಲ್ಲಿ ಯಾರನ್ನೂ ಕೇಳಿದರೂ ಕೂದಲಿನ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಗೋಳು ಅಲ್ಲಿ ಇರುತ್ತದೆ. ಬಿಳಿ ಕೂದಲಿನಿಂದಾಗಿ  ಅದೆಷ್ಟೋ ಕಡೆಗಳಲ್ಲಿ ಮುಜುಗರಪಟ್ಟುಕೊಳ್ಳುವ ಸ್ಥಿತಿ ಕೂಡಾ ಎದುರಾಗಬಹುದು.  


COMMERCIAL BREAK
SCROLL TO CONTINUE READING

ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗಲು ಕಾರಣ : 
ಮೆಲನಿನ್ ಕೊರತೆಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಮತ್ತೊಂದು ಕಾರಣವೆಂದರೆ ಸಮತೋಲಿತ ಆಹಾರದ ಕೊರತೆ. ಇದರಿಂದಾಗಿ ದೇಹ ಮತ್ತು ಕೂದಲಿಗೆ ಸಂಪೂರ್ಣ ಪೋಷಣೆ ಸಿಗುವುದಿಲ್ಲ. ನಮ್ಮ ದೇಹದಲ್ಲಿ ಇಂತಹ ಹಲವಾರು ಜೀವಕೋಶಗಳು ಒಟ್ಟಾಗಿ ಕೆಲಸ ಮಾಡಿ ಕೂದಲನ್ನು ಕಪ್ಪಾಗಿ ಇಡುವುದು ಸಾಧ್ಯವಾಗುತ್ತದೆ. ಆದಾಗ್ಯೂ, ಈ ಜೀವಕೋಶಗಳು ಸರಿಯಾದ ಪೋಷಣೆಯನ್ನು ಪಡೆಯದಿದ್ದರೆ, ಅವು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಇದರಿಂದಾಗಿ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ : Weight Loss Tips: ಈ ತರಕಾರಿ ಸೇವಿಸಿ ಒಂದೇ ವಾರದಲ್ಲಿ ತೂಕ ಕಡಿಮೆಯಾಗದಿದ್ದರೆ ಹೇಳಿ..!
 
ಔಷಧದಿಂದ ಅಡ್ಡ ಪರಿಣಾಮಗಳು :
ಈ ಬಿಳಿ ಕೂದಲಿಗೆ ಪರಿಹಾರವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಅಥವಾ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಸುಲಭವಾದ ಮಾರ್ಗ ಹೌದು. ಆದರೆ ಇದರಿಂದ ಅಡ್ಡಪರಿಣಾಮಗಳನ್ನು ಕೂಡಾ ಎದುರಿಸಬೇಕಾಗಿ ಬರಬಹುದು. ಇದಕ್ಕೆ ಬದಲಾಗಿ ಕೆಲವು ನೈಸರ್ಗಿಕ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಉತ್ತಮ. ಅಂದರೆ ಕೆಲವು ಆಯುರ್ವೇದ ಪರಿಹಾರಗಳನ್ನು ಆಶ್ರಯಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಈ ಆಯುರ್ವೇದ ಪರಿಹಾರಗಳಿಂದ ಬಿಳಿ ಕೂದಲು ಮಾತ್ರವಲ್ಲದೆ ಗಡ್ಡ- ಮೀಸೆಯ ಕೂದಲು ಕೂಡಾ ಕಪ್ಪಾಗುತ್ತದೆ.


ಇವುಗಳಿಂದ ದೂರವಿರಿ :
ಕೂದಲು ಬಿಳಿಯಾಗಲು ಮೊದಲ ಕಾರಣ ವಂಶಪಾರಂಪರ್ಯ, ಎರಡನೆಯದು ಟೆನ್ಷನ್, ಮೂರನೆಯದು ಅತಿಯಾಗಿ ಯೋಚಿಸುವುದು, ನಾಲ್ಕನೆಯದು ಅತಿಯಾದ ಮದ್ಯ ಸೇವನೆ ಇತ್ಯಾದಿ ಮತ್ತು ಐದನೆಯದು ಅತಿಯಾದ ಬಿಸಿ ಪದಾರ್ಥಗಳ ಸೇವನೆ. ಅಂತಹ ಪರಿಸ್ಥಿತಿಯಲ್ಲಿ, ಈ ಆಯುರ್ವೇದ ಪರಿಹಾರಗಳು ನಿಮಗೆ ಉತ್ತಮ ಸಹಾಯ ಮಾಡಬಹುದು.


ಇದನ್ನೂ ಓದಿ : ಮೆಹಂದಿಗೆ ಈ ವಸ್ತುಗಳನ್ನು ಬೆರೆಸಿ ಹಚ್ಚಿದರೆ ಹೆಚ್ಚುವುದು ಕೂದಲಿನ ಹೊಳಪು ಮತ್ತು ಕಾಂತಿ


ನೆಲ್ಲಿಕಾಯಿ ಜ್ಯೂಸ್  : 
ಕೂದಲನ್ನು ಕಪ್ಪಾಗಿಸುವಲ್ಲಿ ನೆಲ್ಲಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಿತ್ಯ  ನೆಲ್ಲಿಕಾಯಿ ಜ್ಯೂಸ್ ಕುಡಿಯುತ್ತಿದ್ದರೆ, ಅದು ನಿಮ್ಮ ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಒಂದು ತಿಂಗಳು ನಿರಂತರವಾಗಿ ಆಮ್ಲಾ ಜ್ಯೂಸ್ ಕುಡಿಯುತ್ತಿದ್ದರೆ, ಅದರ ಪರಿಣಾಮ ಕೂದಲಿನಲ್ಲಿ ಕಂಡು ಬರುತ್ತದೆ.  


ಕರಿಬೇವಿನ ರಸ : 
ಕೂದಲು ಕಪ್ಪಾಗಲು ಕರಿಬೇವಿನ ಎಲೆಗಳನ್ನು ಬಳಸುವುದು ಕೂಡಾ  ಪ್ರಯೋಜನಕಾರಿ. ಪ್ರತಿದಿನ ಕರಿಬೇವಿನ ಸೊಪ್ಪಿನ ರಸವನ್ನು ಕುಡಿಯುವುದರಿಂದ ದೇಹ ಮತ್ತು ಕೂದಲಿಗೆ ಪೋಷಣೆ ಸಿಗುತ್ತದೆ. ಇದರ  ಫಲಿತಾಂಶವು ಕೂದಲಿನ ಮೇಲೆ ಶೀಘ್ರದಲ್ಲೇ ಕಂಡುಬರುತ್ತದೆ. ಇದರ ಜ್ಯೂಸ್ ನಿಯಮಿತವಾಗಿ ಸೇವಿಸಿದಾಗ ಮಾತ್ರ ಅದರ ಪರಿಣಾಮ ಕಾಣಿಸುತ್ತದೆ.  ಕರಿಬೇವಿನ ರಸವನ್ನು ತಯಾರಿಸಲು, ಸುಮಾರು 100 ಮಿಲಿ ನೀರಿನಲ್ಲಿ ಹತ್ತರಿಂದ ಹದಿನೈದು ಕರಿಬೇವಿನ ಎಲೆಗಳನ್ನು ಹಾಕಿ ಮತ್ತು ನೀರು ಅರ್ಧಕ್ಕೆ ಕಡಿಮೆಯಾಗುವವರೆಗೆ ಕುದಿಸಿ. ನೀರು ಅರ್ಧದಷ್ಟಾದಾಗ   ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.


ಇದನ್ನೂ ಓದಿ : ಕೇವಲ ಒಂದು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳಲು ಈ ಬೀಜವನ್ನು ಸೇವಿಸಿ
 
ಕರಿಬೇವಿನ ಎಲೆಗಳನ್ನು ತೆಂಗಿನೆಣ್ಣೆಯೊಂದಿಗೆ ಹಚ್ಚಿ : 
ಕರಿಬೇವಿನ ಸೊಪ್ಪನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗುವುದು. ಕರಿಬೇವಿನ ಎಲೆ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ ಮಾತ್ರವಲ್ಲ ಹೊಳಪು ಕೂಡಾ ಪಡೆಯುತ್ತದೆ. ಇದಕ್ಕಾಗಿ ತೆಂಗಿನ ಎಣ್ಣೆಯಲ್ಲಿ ಬಹಳಷ್ಟು ಕರಿಬೇವಿನ ಎಲೆಗಳನ್ನು ಕುದಿಸಿ. ಈ ಎಣ್ಣೆ ತಣ್ಣಗಾದ ಮೇಲೆ ಅದನ್ನು ಕೂದಲು ಮತ್ತು ಗಡ್ಡಕ್ಕೆ ಹಚ್ಚಿ. 


ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿ ಪುಡಿಯ ಮಿಶ್ರಣ :
ನೆಲ್ಲಿಕಾಯಿ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ಕೂದಲು ಮತ್ತು ಗಡ್ಡಕ್ಕೆ ಮಸಾಜ್ ಮಾಡುವುದು ತುಂಬಾ ಪ್ರಯೋಜನಕಾರಿ. ಇದಕ್ಕಾಗಿ, ಆಮ್ಲಾ ಪುಡಿಯ ಪ್ರಮಾಣವು ತೆಂಗಿನ ಎಣ್ಣೆಗಿಂತ ಸುಮಾರು 25% ಹೆಚ್ಚು ಇರಬೇಕು. ಈಗ ಆಮ್ಲಾ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಸುಮಾರು ಒಂದರಿಂದ ಎರಡು ನಿಮಿಷಗಳ ಕಾಲ ಕುದಿಸಿ. ಈ ಎಣ್ಣೆಯು ಸ್ವಲ್ಪ ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡಿ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.