ಹೈ ಬಿಪಿ ಯನ್ನು ನಿಯಂತ್ರಣದಲ್ಲಿಡುತ್ತದೆ ಈ ಮೂರು ಹಣ್ಣುಗಳು
Foods For High BP Patient: ರಕ್ತದೊತ್ತಡ ಹೆಚ್ಚಾದಾಗ, ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಅದು ಅನೇಕ ಇತರ ಕಾಯಿಲೆಗಳ ಅಪಾಯವನ್ನು ಸೃಷ್ಟಿಸುತ್ತದೆ.
ಬೆಂಗಳೂರು : Foods For High BP Patient : ಪ್ರಸ್ತುತ ಯುಗದಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಮತ್ತು ಬದಲಾಗುತ್ತಿರುವ ಆಹಾರ ಪದ್ದತಿಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಹಾರ ಪದ್ದತಿಯಲ್ಲಿನ ಬದಲಾವಣೆ, ವ್ಯಾಯಾಮ ಮಾಡದೇ ಇರುವ ಕಾರಣ ಅನೇಕ ರೋಗಗಳು ಆವರಿಸಿಕೊಳ್ಳಬಹುದು. ಇದರಿಂದ ಕ್ಯಾನ್ಸರ್, ಮಧುಮೇಹದಂತಹ ಮಾರಣಾಂತಿಕ ಕಾಯಿಲೆಗಳ ಅಪಾಯ ಕೂಡಾ ಎದುರಾಗಬಹುದು.
ಈ ಹಣ್ಣುಗಳನ್ನು ತಿನ್ನುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಿ :
ಅಧಿಕ ರಕ್ತದೊತ್ತಡ ಎನ್ನುವುದು ಜೀವನದುದ್ದಕ್ಕೂ ಕಾಡುವ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಜೀವನಕ್ಕೆ ಕುತ್ತು ತರುತ್ತದೆ. ಇದು ನಿಯಂತ್ರಣಕ್ಕೆ ಬಾರದೇ ಹೋದರೆ ಮೆದುಳಿಗೆ ಅಪಾಯವಾಗುತ್ತದೆ. ರಕ್ತಸ್ರಾವ, ಪಾರ್ಶ್ವವಾಯು ಮುಂತಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ ಕೆಲವು ಹಣ್ಣುಗಳನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಇದನ್ನೂ ಓದಿ : Asafetida Test: ನಕಲಿ ಇಂಗು ನಿಮ್ಮ ಆರೋಗ್ಯಕ್ಕೆ ಮಾರಕ, ಅಸಲಿಯೋ-ನಕಲಿಯೋ? ಈ ರೀತಿ ಪರೀಕ್ಷಿಸಿ
1. ಬಾಳೆಹಣ್ಣು :
ಬಾಳೆಹಣ್ಣು ವರ್ಷ ಪೂರ್ತಿ ಸಿಗುವ ಹಣ್ಣು. ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕವಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಾಗಿಸುತ್ತದೆ. ಬಾಳೆಹಣ್ಣಿನಲ್ಲಿ ಕಂಡುಬರುವ ಪೋಷಕಾಂಶಗಳು ರಕ್ತದೊತ್ತಡದ ಸಮಸ್ಯೆಗೆ ರಾಮಬಾಣವಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಪಾರ್ಶ್ವವಾಯುದಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.
2. ಕಿವಿ :
ಕಿವಿ ತುಂಬಾ ಪೌಷ್ಟಿಕ ಅಂಶಗಳನ್ನು ಒಳಗೊಂಡಿರುವ ಹಣ್ಣು. ಇದು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ. ಯಾವುದೇ ಕಾಯಿಲೆಯ ವಿರುದ್ಧ ಹೋರಾಡುವ ಶಕ್ತಿಯನ್ನುಇದು ದೇಹಕ್ಕೆ ನೀಡುತ್ತದೆ.
ಇದನ್ನೂ ಓದಿ : Constipation Treatment: ಮಲಬದ್ಧತೆ ನಿವಾರಣೆಗೆ ಮನೆಮದ್ದು
3. ಮಾವು :
ಬೇಸಿಗೆ ಕಾಲದಲ್ಲಿ ಸಿಗುವ ಈ ಹಣ್ಣು ತನ್ನ ರುಚಿಕಾರವಾಗಿರುವುದು ಮಾತ್ರವಲ್ಲ, ಅನೇಕ ರೋಗಗಳನ್ನು ದೂರವಿಡುವ ಕೆಲಸ ಕೂಡಾ ಮಾಡುತ್ತದೆ. ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗೆ ಮಾವು ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ಫೈಬರ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ಎರಡು ಅಂಶಗಳು ಬಿಪಿ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.