Asafetida Test: ನಕಲಿ ಇಂಗು ನಿಮ್ಮ ಆರೋಗ್ಯಕ್ಕೆ ಮಾರಕ, ಅಸಲಿಯೋ-ನಕಲಿಯೋ? ಈ ರೀತಿ ಪರೀಕ್ಷಿಸಿ

Kitchen Hacks: ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಹಲವು ಪದಾರ್ಥಗಳ ಮೇಲೆ ಕಣ್ಣು ಮುಚ್ಚಿ ನಂಬಿಕೆ ಇಡುವುದು ಸರಿಯಲ್ಲ. ಇದಕ್ಕಾಗಿ ನೀವು ಮನೆಯಲ್ಲಿಯೇ ಅವುಗಳ ಅಸಲಿಯತ್ತಿನ ಕುರಿತು ಪರೀಕ್ಷೆ ನಡೆಸಬಹುದು.  

Written by - Nitin Tabib | Last Updated : Jun 20, 2022, 01:45 PM IST
  • ಉತ್ತಮ ಗುಣಮಟ್ಟದ ಮತ್ತು ರುಚಿಕರವಾದ ಆಹಾರ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.
  • ಆದರೆ, ಆಹಾರಕ್ಕೆ ಈ ರುಚಿ ಎಲ್ಲಿಂದ ಬರುತ್ತದೆ ನಿಮಗೆ ಗೊತ್ತಾ?
  • ಅದರ ಪ್ರಮುಖ ಕಾರಣಗಳಲ್ಲಿ ಇಂಗು ಕೂಡ ಒಂದು. ಈ
Asafetida Test: ನಕಲಿ ಇಂಗು ನಿಮ್ಮ ಆರೋಗ್ಯಕ್ಕೆ ಮಾರಕ, ಅಸಲಿಯೋ-ನಕಲಿಯೋ? ಈ ರೀತಿ ಪರೀಕ್ಷಿಸಿ  title=
Real vs Fake Asafetida

Real vs Fake Asafetida:ಉತ್ತಮ ಗುಣಮಟ್ಟದ ಮತ್ತು ರುಚಿಕರವಾದ ಆಹಾರ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದರೆ, ಆಹಾರಕ್ಕೆ ಈ ರುಚಿ ಎಲ್ಲಿಂದ ಬರುತ್ತದೆ ನಿಮಗೆ ಗೊತ್ತಾ? ಅದರ ಪ್ರಮುಖ ಕಾರಣಗಳಲ್ಲಿ ಇಂಗು ಕೂಡ ಒಂದು. ಈ ಸಾಂಬಾರ ಪದಾರ್ಥದಿಂದ ನಾವು ಸೇವಿಸುವ ಆಹಾರ ಪದಾರ್ಥಗಳ ಸ್ವಾದ ಉತ್ತಮಗೊಳ್ಳುತ್ತದೆ. ಈ ಸಾಂಬಾರ ಪಧಾರ್ಥವನ್ನು ಸಿಕ್ರೆಟ್ ರೆಸಿಪಿ ಎಂದೂ ಕೂಡ ಕರೆಯಲಾಗುತ್ತದೆ. ಆಹಾರ ಪದಾರ್ಥಗಳ ಸ್ವಾದವನ್ನು ಹೀಚಿಸುವ ಈ ಇಂಗು ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದು ನಮ್ಮ ಶರೀರವನ್ನು ಹಲವು ಕಾಯಿಲೆಗಳಿಂದ ರಕ್ಷಿಸುತ್ತದೆ. ಆದರೆ, ನಕಲಿ ಇಂಗು ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಭಾರಿ ಹಾನಿಯುಂಟಾಗಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ?  ಹಾಗಾದರೆ, ಅಸಲಿ ಮತ್ತು ನಕಲಿ ಇಂಗುಗಳನ್ನು ಹೇಗೆ ಕರೀಕ್ಷಿಸಬೇಕು ತಿಳಿದುಕೊಳ್ಳೋಣ ಬನ್ನಿ,

ಇಂಗು ಅಸಲಿಯಾಗಿದೆಯೋ? ಅಥವಾ ನಕಲಿಯಾಗಿದೆಯೋ ಹೇಗೆ ತಿಳಿಯಬೇಕು?
1. ಇಂಗನ್ನು ಸುಟ್ಟು ನೋಡಿ

ನಿಜವಾದ ಇಂಗನ್ನು ಗುರುತಿಸುವುದು ಬಹಳ ಮುಖ್ಯ, ಏಕೆಂದರೆ ಅದು ನಮ್ಮ ಆರೋಗ್ಯಕ್ಕೆ ಸಂಬಂಧಿಸಿದೆ, ಆದ್ದರಿಂದ ನೀವೂ ಕೂಡ ಅಸಲಿ ಇಂಗನ್ನು ಗುರುತಿಸಲು ಬಯಸುತ್ತಿದ್ದರೆ, ಅದನ್ನು ಸುಟ್ಟು ನೋಡಿ ಮತ್ತು ಅದು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಕಂಡು ಹಿಡಿಯಿರಿ. ಅದು ಅಸಲಿ ಇಂಗು ಆಗಿದ್ದರೆ, ಸುಟ್ಟಾಗ ಅದರ ಜ್ವಾಲೆಯು ಪ್ರಕಾಶಮಾನವಾಗಿರುತ್ತದೆ. ಒಂದು ವೇಳೆ ಅದು ನಕಲಿಯಾಗಿದ್ದರೆ ಇಂಗು ಸುಲಭವಾಗಿ ಸುಡುವುದಿಲ್ಲ.

2. ಬಣ್ಣದಿಂದ ಇಂಗನ್ನು ಗುರುತಿಸಿ
ನೀವು ಇಂಗನ್ನು ಅದರ ಬಣ್ಣದಿಂದ ಕೂಡ ಗುರುತಿಸಬಹುದು, ಇಂಗಿನ ಮೂಲ ಬಣ್ಣವು ತಿಳಿ ಕಂದು ಬಣ್ಣ, ಹಾಗೆಯೇ ಅದಕ್ಕೆ ತುಪ್ಪದ ವಗ್ಗರಣೆ ಹಾಕಿದಾಗ ಅದು ಊದಿಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ನಂತರ ಅದರ ಬಣ್ಣವು ಕೆಂಪು ಬಣ್ಣಕ್ಕೆ ಬದಲಾಗುತ್ತದೆ. ಈ ರೀತಿ ಆಗದೆ ಹೋದರೆ ನೀವು ನಿಮ್ಮ ಇಂಗನ್ನು ತಕ್ಷಣವೇ ಬದಲಾಯಿಸಬೇಕು ಏಕೆಂದರೆ ಅದು ನಿಜವಾದ ಇಂಗು ಅಲ್ಲ. ಅಲ್ಲದೆ, ನೀರಿನೊಂದಿಗೆ ಬೆರೆಸಿದಾಗ, ನಿಜವಾದ ಅಸಾಫೆಟಿಡಾವು ನೀರಿನಂತೆ ಬಿಳಿಯಾಗುತ್ತದೆ, ಆದರೆ ಅದೇ ನಕಲಿ ಇಂಗು ಯಾವುದೇ ಬದಲಾವಣೆಯನ್ನು ತೋರುವುದಿಲ್ಲ.

ಇದನ್ನೂ ಓದಿ-Mens Health: ವಿವಾಹಿತ ಪುರುಷರಿಗೆ ತುಂಬಾ ಪ್ರಯೋಜನಕಾರಿ ಶುಂಠಿ - ಈರುಳ್ಳಿ

3. ವಾಸನೆಯಿಂದ ಗುರುತಿಸಿ
ನಿಜವಾದ ಇಂಗಿನ ವಾಸನೆಯು ಬೇಗನೆ ಹೋಗುವುದಿಲ್ಲ. ಸಾಬೂನಿನಿಂದ ಕೈತೊಳೆದರೂ ಕೂಡ ನಿಜವಾದ ಇಂಗಿನ ವಾಸನೆ  ಬೇಗ ಮಾಯುವುದಿಲ್ಲ, ಒಂದು ವೇಳೆ ಇಂಗು ನಕಲಿಯಾಗಿದ್ದರೆ, ಅದರ ವಾಸನೆ ತಕ್ಷಣವೇ ಹೊರಟುಹೋಗುತ್ತದೆ, ಇದರಿಂದ ನೀವೇ ವ್ಯತ್ಯಾಸವನ್ನು ತಿಳಿದುಕೊಳ್ಳಬಹುದು. 

ಇದನ್ನೂ ಓದಿ-ಈ ಐದು ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ತೂಕ ಹೆಚ್ಚಳವಾಗುವ ಚಿಂತೆಯೇ ಇರುವುದಿಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ)

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
     

Trending News