ಬೆಂಗಳೂರು : ಕಿಡ್ನಿ ಸಮಸ್ಯೆಯಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯೂ ಒಂದು . ಕಿಡ್ನಿ ಸ್ಟೋನ್ (Kidney Stone) ಸಮಸ್ಯೆ ಎದುರಾದರೆ ವ್ಯಕ್ತಿಯು ಭಯಂಕರ ನೋವನ್ನು ಅನುಭವಿಸಬೇಕಾಗುತ್ತದೆ. ಹೀಗಿರುವಾಗ ವ್ಯಕ್ತಿಯು ತನ್ನ ಆಹಾರಕ್ರಮದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಕಿಡ್ನಿ ಸಮಸ್ಯೆ ಇದ್ದರೆ ಇಲ್ಲಿ ನೀಡಿರುವ ಕೆಲವು ಜ್ಯೂಸ್‌ಗಳ ಸಹಾಯದಿಂದ ನೀವು ಈ ಸಮಸ್ಯೆಯನ್ನು ಹೋಗಲಾಡಿಸಬಹುದು. 


COMMERCIAL BREAK
SCROLL TO CONTINUE READING

Kidney Stone ಸಮಸ್ಯೆಯ ಪರಿಹಾರಕ್ಕೆ ಜ್ಯೂಸ್ : 
ನೀವು ಕಿಡ್ನಿ ಸ್ಟೋನ್ (Kidney Stone) ಸಮಸ್ಯೆಗೆ ಒಳಗಾಗಿದ್ದರೆ, ಆಹಾರದಲ್ಲಿ ಮೂರು ವಿಧದ ಜ್ಯೂಸ್ ಅನ್ನು ಸೇರಿಸಬಹುದು (Juice for Kidney stone). ಈ ಮೂಲಕ ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು.


ಇದನ್ನೂ ಓದಿ : Sleeping Tips: ಕೇವಲ 4 ಗಂಟೆಗಳಲ್ಲಿ 8 ಗಂಟೆಗಳ ಸಂಪೂರ್ಣ ಮತ್ತು ಫ್ರೆಶ್ ನಿದ್ರೆ ಪಡೆಯಲು ದಿಗ್ಗಜರು ಬಳಸುವ ಟೆಕ್ನಿಕ್ ಇದು


3. ಟೊಮೆಟೊ ರಸ :
ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಟೊಮೆಟೊ (Tomato) ರಸವು ತುಂಬಾ ಉಪಯುಕ್ತವಾಗಿದೆ. ಎರಡು ಟೊಮೆಟೊಗಳನ್ನು ಚೆನ್ನಾಗಿ ತೊಳೆದು ಅದನ್ನು ಪೇಸ್ಟ್ ಮಾಡಿ. ಹೀಗೆ ಮಾಡುವಾಗ ಬೀಜಗಳನ್ನು ತೆಗೆಯಲು ಮರೆಯಬೇಡಿ. ನಂತರ ಈ ಪೇಸ್ಟ್ ಗೆ ಉಪ್ಪು ಮತ್ತು ಕರಿಮೆಣಸಿನ (Pepper) ಪುಡಿಯನ್ನು ಬೆರೆಸಿ ಸೇವಿಸಬೇಕು. ತಯಾರಿಸಿದ ಮಿಶ್ರಣವನ್ನು ಫ್ರಿಜ್‌ನಲ್ಲಿ ಇರಿಸಿ ಅದನ್ನು ಜ್ಯೂಸ್ ರೂಪದಲ್ಲಿ ಸೇವಿಸಬಹುದು.


2. ನಿಂಬೆ ರಸ :
ನಿಂಬೆಯೊಳಗೆ (Lemon) ಸಿಟ್ರಿಕ್ ಆಮ್ಲವಿದೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇದ್ದಾಗ, ನಿಂಬೆ ರಸವನ್ನು ಸೇವಿಸಿದರೆ, ಈ ಸಮಸ್ಯೆಯನ್ನು ನಿವಾರಿಸಬಹುದು. ಒಂದು ಬಟ್ಟಲಿನಲ್ಲಿ ಮೊಸರನ್ನು (curd)ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ಈಗ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಅದನ್ನು ಸೇವಿಸಿ.  ಈ ರೀತಿ ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.


ಇದನ್ನೂ ಓದಿ : Healthy Heart: Heart Attack ಗೂ ಮುನ್ನ ಕಾಣಿಸಿಕೊಳ್ಳುವ ಈ 6 ಸಂಕೇತಗಳು ನಿಮಗೂ ತಿಳಿದಿರಲಿ, ಇಗ್ನೋರ್ ಮಾಡ್ಬೇಡಿ


3. ತುಳಸಿ ರಸ :
ತುಳಸಿಯಿಂದ (Tulsi) ತಯಾರಿಸಿದ ಜ್ಯೂಸ್ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ತುಳಸಿ ಎಲೆಗಳ ರಸವನ್ನು ತೆಗೆದು, ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ. ಬೆಳಿಗ್ಗೆ ಮತ್ತು ಸಂಜೆ ಈ ಮಿಶ್ರಣವನ್ನು ಸೇವಿಸಿ. ಹೀಗೆ ಮಾಡುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.