Best vegetable juice to lower high blood sugar : ದೇಹದಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಅವುಗಳನ್ನು ಸೇವಿಸುವುದರಿಂದ ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವೈದ್ಯರು ಯಾವಾಗಲೂ ಜ್ಯೂಸ್ ಬದಲಿಗೆ ಹಣ್ಣುಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಏಕೆಂದರೆ ಜ್ಯೂಸ್ ನಲ್ಲಿರುವ ಸಕ್ಕರೆಯು ತ್ವರಿತವಾಗಿ ಹೀರಲ್ಪಡುತ್ತದೆ. ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಆದರೆ, ನೀವು ಜ್ಯೂಸ್ ಕುಡಿಯಲು ಬಯಸುವುದಾದರೆ ಹಣ್ಣಿನ ಜ್ಯೂಸ್ ಬದಲು ತರಕಾರಿ ಜ್ಯೂಸ್ ಸೇವಿಸಬಹುದು. ಕೆಲವು ತರಕಾರಿಗಳ ರಸವು   ನಾಲಗೆಗೆ ರುಚಿ ನೀಡುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

1. ಟೊಮೆಟೊ ಜ್ಯೂಸ್ :
ರುಚಿಕರವಾದ ಜ್ಯೂಸ್‌ ಕುಡಿಯಲು ನಿಮಗೂ ಮನಸ್ಸಿದ್ದರೆ ಹಣ್ಣುಗಳ ಬದಲು ಟೊಮೆಟೊ ಜ್ಯೂಸ್‌ ಕುಡಿಯಬಹುದು. ವಿಶೇಷವೆಂದರೆ ಇದು ಜ್ಯೂಸ್ ಕುಡಿಯಬೇಕು ಎನ್ನುವ ನಿಮ್ಮ ಕಡುಬಯಕೆಯನ್ನು ಪೂರೈಸುವುದು ಮಾತ್ರವಲ್ಲದೆ ದೇಹದಲ್ಲಿನ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.  


ಇದನ್ನೂ ಓದಿ : ಎಳ ನೀರಿನಲ್ಲಿ ಈ ವಸ್ತುವನ್ನು ಹಾಕಿ ನಿತ್ಯ ಸೇವಿಸಿ ! ಒಂದೇ ವಾರದಲ್ಲಿ ಇಳಿಕೆಯಾಗುವುದು ತೂಕ


2. ಅಧಿಕ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಎಲೆಕೋಸು ರಸ : 
ಮಧುಮೇಹ ಅಥವಾ ಅಧಿಕ ರಕ್ತದ ಸಕ್ಕರೆಯಿಂದ ಬಳಲುತ್ತಿರುವವರು ಪ್ರತಿದಿನ ಒಂದು ಲೋಟ ಎಲೆಕೋಸು ರಸವನ್ನು ಕುಡಿಯಬೇಕು. ಎಲೆಕೋಸು ರಸವನ್ನು ನಿಂಬೆ ಮತ್ತು  ಸ್ವಲ್ಪ ಉಪ್ಪನ್ನು ಬೆರೆಸಿ ಕುಡಿಯಬಹುದು. ಇದು ರುಚಿಕರವಾಗಿರುವುದಲ್ಲದೆ ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


3. ಅಧಿಕ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಬೀಟ್ರೂಟ್ ಜ್ಯೂಸ್ :
ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ಬೀಟ್ರೂಟ್ ರಸವನ್ನು ಕುಡಿಯುವುದು ಸಹಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ವಿವಿಧ ಪೋಷಕಾಂಶಗಳ ಹೊರತಾಗಿ, ಬೀಟ್ರೂಟ್ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಮಧುಮೇಹಿಗಳು ಪ್ರತಿದಿನ ಒಂದು ಲೋಟ ಬೀಟ್ರೂಟ್ ರಸವನ್ನು ಕುಡಿಯಬೇಕು.  


ಇದನ್ನೂ ಓದಿ :ತೂಕ ಇಳಿಕೆ : 5 ರೂಪಾಯಿಯ ಈ ಚಹಾ ಶಾಶ್ವತವಾಗಿ ಬೊಜನ್ನು ಕಡಿಮೆ ಮಾಡುತ್ತೆ


4. ಅಧಿಕ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಪಾಲಕ್ ರಸ :
ಪಾಲಕ್ ಸೊಪ್ಪಿನಂತಹ ಹಸಿರು ತರಕಾರಿಗಳ ರಸವನ್ನು ಕು ಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಮಧುಮೇಹ ರೋಗಿಗಳಿಗೆ ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಪ್ರತಿದಿನ ನಿಯಮಿತವಾಗಿ ಒಂದು ಲೋಟ ಪಾಲಕ್ ರಸವನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಔಷಧಿ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.


5. ಅಧಿಕ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಸೌತೆಕಾಯಿ ರಸ : 
ಬೇಸಿಗೆಯಲ್ಲಿ ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ತಂಪಾಗಿರುತ್ತದೆ ಮತ್ತು ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತದೆ. ಆದರೆ ಇದೆಲ್ಲದರ ಹೊರತಾಗಿ, ಸೌತೆಕಾಯಿಯನ್ನು ಸೇವಿಸುವುದರಿಂದ ದೇಹದಲ್ಲಿ ವೇಗವಾಗಿ ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  


ಇದನ್ನೂ ಓದಿ  :ಬೊಕ್ಕ ತಲೆ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆ? ಈ ಉಪಾಯ ಮಾಡಿ ತಲೆಯಲ್ಲಿ ಮತ್ತೆ ಕೂದಲುಗಳು ಕಾಣಿಸಿಕೊಳ್ಳುತ್ತವೆ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ