Foods For Hair Growth: ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲೂ ಪ್ರತಿಯೊಬ್ಬರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಇದಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟರೂ, ಏನೇ ಪ್ರಯತ್ನ ಪಟ್ಟರೂ ಏನೂ ಪ್ರಯೋಜನವಾಗುವುದಿಲ್ಲ. ಕೆಲವರು ಮಾರುಕಟ್ಟೆಯಲ್ಲಿ ಸಿಗವ ನಾನಾ ರೀತಿಯ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ರಾಸಾಯನಿಕ ಪದಾರ್ಥಗಳ ಅಂಶ ಬಹಳವಾಗಿರುತ್ತದೆ. ಇದು ಕೂದಲಿನ  ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಒದಗಿಸಬಹುದು. ಆದರೆ, ದೀರ್ಘ ಅವಧಿಯಲ್ಲಿ ಕೂದಲಿನ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಕೂದಲು ಉದುರುವುದು ಅಥವಾ ಕೂದಲು ಸರಿಯಾಗಿ ಬೆಳೆಯುವುದಿಲ್ಲ ಎಂದಾದರೆ ಅದಕ್ಕೆ ಕ್ರೀಂ, ಶಾಂಪೂ, ಕಂಡೀಶನರ್, ಎಣ್ಣೆ ಹಚ್ಚುವುದು ಮಾತ್ರವಲ್ಲ ನಾವು ಸೇವಿಸುವ ಆಹಾರ ಕ್ರಮದಲ್ಲಿಯೂ ಬದಲಾವಣೆ ತಂದು ಕೊಳ್ಳಬೇಕು. 


COMMERCIAL BREAK
SCROLL TO CONTINUE READING

ಕೂದಲಿನ ಬೆಳವಣಿಗೆಗೆ ಈ ಆಹಾರಗಳನ್ನು ಸೇವಿಸಿ : 
1.ಮೊಟ್ಟೆ : 

ಮೊಟ್ಟೆಗಳಲ್ಲಿ ಪ್ರೋಟೀನ್, ಬಯೋಟಿನ್ ಮತ್ತು ಅಗತ್ಯವಾದ ಅಮೈನೋ ಆಮ್ಲಗಳು ಹೇರಳವಾಗಿ ಇರುತ್ತವೆ. ಪ್ರೋಟೀನ್ ಕೂದಲಿನ ಬ್ಲೀಡಿಂಗ್ ಅನ್ನು ಬ್ಲಾಕ್ ಮಾಡುತ್ತದೆ.  ಬಯೋಟಿನ್ ಕೂದಲಿನ ಇಲಾಸ್ಟಿಸಿಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಕೂದಲಿನ ಆರೋಗ್ಯ ಕೆಡುತ್ತಿದ್ದರೆ ಮೊಟ್ಟೆಯನ್ನು ಸೇವಿಸಬೇಕು. ಮೊಟ್ಟೆಗಳನ್ನು ಬೇಯಿಸಿ, ಕುದಿಸಿ ಅಥವಾ ಆಮ್ಲೆಟ್ ಮಾಡುವ ಮೂಲಕ  ತಿನ್ನಬಹುದು. 


ಇದನ್ನೂ ಓದಿ : Noodles Recipe: ಎಗ್ ನೂಡಲ್ಸ್ ಮಾಡುವ ವಿಧಾನ.. ರೆಸ್ಟೋರೆಂಟ್ ಶೈಲಿಯಲ್ಲಿ ಕೇವಲ 10 ನಿಮಿಷದಲ್ಲಿ ರೆಡಿ!


2.ಪಾಲಕ್ ಸೊಪ್ಪು : 
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ, ವಿಟಮಿನ್ ಎ, ಸಿ ಮತ್ತು ಫೋಲೇಟ್ ಸಮೃದ್ಧವಾಗಿದೆ. ಕಬ್ಬಿಣವು ಕೂದಲಿನ ಕಿರುಚೀಲಗಳಿಗೆ ಆಮ್ಲಜನಕವನ್ನು ತಲುಪಿಸಲು ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪಾಲಕ್ ಸೊಪ್ಪನ್ನು ಸಲಾಡ್ ರೂಪದಲ್ಲಿ ಸೇವಿಸಬಹುದು. ಪಲ್ಯ, ಸಾಂಬಾರ್ ಗಳಲ್ಲಿ ಬಳಸಬಹುದು. ಇದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಆರೋಗ್ಯಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ. 


3.ಸಾಲ್ಮನ್ ಮೀನು :
ಸಾಲ್ಮನ್ ಮೀನನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು  ಕರೆಯಲಾಗುತ್ತದೆ. ಇದು ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್, ವಿಟಮಿನ್ ಡಿ ಮತ್ತು ಆಂಟಿ-ಆಕ್ಸಿಡೆಂಟ್ ಗಳಲ್ಲಿ ಸಮೃದ್ದವಾಗಿದೆ. ಒಮೆಗಾ -3 ಕೊಬ್ಬಿನಾಮ್ಲಗಳು ಕೂದಲು ಕಿರುಚೀಲಗಳನ್ನು ಪೋಷಿಸಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಇದನ್ನೂ ಓದಿ IRCTC: ಹೈದರಾಬಾದ್ ಟು ಕೇರಳ ಪ್ರವಾಸ.. ಕಡಿಮೆ ಬಜೆಟ್ ನಲ್ಲಿ ಸೂಪರ್ ಪ್ಯಾಕೇಜ್..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.