Tulsi Water Benefits: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಸೇವಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ
Tulsi Water Benefits: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ನೀವು ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ.
Tulsi Water Benefits: ಭಾರತದಲ್ಲಿ ತುಳಸಿಯನ್ನು ಪೂಜ್ಯ ಸಸ್ಯವೆಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ ತುಳಸಿ ಗಿಡಕ್ಕೆ ತನ್ನದೇ ಆದ ಧಾರ್ಮಿಕ ಮತ್ತು ಆಯುರ್ವೇದದ ಪ್ರಾಮುಖ್ಯತೆ ಇದೆ. ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ಮಹತ್ವವನ್ನು ನೀಡಲಾಗುತ್ತದೆ.
ತುಳಸಿಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಮನೆಯಲ್ಲಿ ತುಳಸಿ ಗಿಡ ಇಡುವುದು ತುಂಬಾ ಮಂಗಳಕರ ಎನ್ನಲಾಗಿದೆ. ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ ತುಳಸಿಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (Tulsi Health Benefits) ಎಂದು ಸಾಬೀತಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳು ದೊರೆಯುತ್ತವೆ.
ಇದನ್ನೂ ಓದಿ- Weight Loss Tips: ರಾತ್ರಿ ಮಲಗುವ ಮುನ್ನ ಈ 3 ವಸ್ತುಗಳನ್ನು ಸೇವಿಸಿ, ತೂಕ ಇಳಿಸಿ
ಪ್ರತಿದಿನ ನಾವು ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ ಎಂದು ತಿಳಿಯೋಣ...
>> ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದು ಶೀತ ಮತ್ತು ಗಂಟಲು ನೋವಿನ ಸಮಸ್ಯೆಯಿಂದ ಪರಿಹಾರ ಸಿಗಲಿದೆ.
>> ಡಯಾಬಿಟಿಸ್ ರೋಗಿಗಳು ನಿತ್ಯ ಖಾಲಿ ಹೊಟ್ಟೆಯಲ್ಲಿ ತುಳಿಸಿ ನೀರನ್ನು ಸೇವಿಸುವುದುದರಿಂದ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
>> ಪ್ರತಿನಿತ್ಯ ತುಳಸಿ ನೀರನ್ನು ಕುಡಿಯುವುದರಿಂದ ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ- Bitter Gourd Juice: ರೋಗಗಳಿಂದ ದೂರವಿರಲು ನಿತ್ಯ ಸೇವಿಸಿ ಈ ಜ್ಯೂಸ್
>> ನಿತ್ಯ ತುಳಸಿ ನೀರಿನ ಸೇವನೆಯು (Tulsi Water) ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
>> ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಮಲಬದ್ಧತೆ ಮತ್ತು ಸಡಿಲ ಚಲನೆಯ ಸಮಸ್ಯೆ ಕೂಡ ಪರಿಹಾರವಾಗುತ್ತದೆ. ಇದಲ್ಲದೇ ಹೊಟ್ಟೆ ಕೂಡ ಚೆನ್ನಾಗಿರುತ್ತದೆ.
>> ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಕುಡಿಯುವುದರಿಂದ ಜ್ವರ ಕೂಡ ಗುಣವಾಗುತ್ತದೆ. ಇದರ ಹೊರತಾಗಿ ವೈರಲ್ ಸೋಂಕಿನ ಸಮಸ್ಯೆಗಳನ್ನು ತಪ್ಪಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ