ಬೆಂಗಳೂರು: Castor Oil- ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ ಮತ್ತು ಒತ್ತಡವು ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ (Dark Circles) ಸಮಸ್ಯೆಗೆ ಕಾರಣವಾಗಬಹುದು. ಈ ಕಾರಣದಿಂದಾಗಿ ಕಣ್ಣುಗಳು ಯಾವಾಗಲೂ ದಣಿದಂತೆ ಕಾಣುತ್ತವೆ. ಹಲವು ಬಾರಿ ಕಣ್ಣಿನ ಆರೈಕೆ ಉತ್ಪನ್ನಗಳನ್ನು ಬಳಸಿದ ನಂತರವೂ ಕಣ್ಣುಗಳ ಕೆಳಗಿರುವ ಕಪ್ಪು ವರ್ತುಲಗಳು ಹೋಗುವುದಿಲ್ಲ. ಆದರೆ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು. ಇದಕ್ಕೆ ನಾವಿಂದು ಸುಲಭ ಮಾರ್ಗವೊಂದನ್ನು ತಿಳಿಸಲಿದ್ದೇವೆ. ಇದಕ್ಕಾಗಿ ನೀವು ಕ್ಯಾಸ್ಟರ್ ಆಯಿಲ್ (Castor Oil) ಅಂದರೆ ಹರಳೆಣ್ಣೆ ಅನ್ನು ಬಳಸಬಹುದು.
ಚರ್ಮವನ್ನು ಪೋಷಿಸಿ:
ಕ್ಯಾಸ್ಟರ್ ಆಯಿಲ್ ಅಂದರೆ ಹರಳೆಣ್ಣೆ ಉತ್ತಮ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ಹೈಡ್ರೇಟ್ ಮಾಡುತ್ತದೆ. ಕ್ಯಾಸ್ಟರ್ ಆಯಿಲ್ನಲ್ಲಿರುವ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತವೆ.
ಇದನ್ನೂ ಓದಿ- Cracked Heels Home Remedy: ಒಡೆದ ಹಿಮ್ಮಡಿಗಳನ್ನು ಬೇಗನೆ ಗುಣಪಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಕ್ಯಾಸ್ಟರ್ ಆಯಿಲ್ನ (Castor Oil) ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಬೆಚ್ಚಗಾಗುವಂತೆ ಮಾಡಲು ನಿಮ್ಮ ಬೆರಳುಗಳ ಮೇಲೆ ಉಜ್ಜಿಕೊಳ್ಳಿ. ಬಳಿಕ ಅದನ್ನು ಕಣ್ಣುಗಳ ಕೆಳಗೆ ಹಚ್ಚಿ. ಒಂದೆರಡು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ ಮತ್ತು ನಂತರ ರಾತ್ರಿಯಿಡೀ ಕಣ್ಣಿನ ಮೇಲೆ ಎಣ್ಣೆಯನ್ನು ಬಿಡಿ.
ಕ್ಯಾಸ್ಟರ್ ಮತ್ತು ಬಾದಾಮಿ ಎಣ್ಣೆ:
ಅದೇ ಪ್ರಮಾಣದ ಬಾದಾಮಿ ಎಣ್ಣೆಯಲ್ಲಿ 3-4 ಹನಿ ಕ್ಯಾಸ್ಟರ್ ಆಯಿಲ್ ಮಿಶ್ರಣ ಮಾಡಿ. ಅದರಿಂದ ಬೆರಳುಗಳಿಂದ ಕಣ್ಣುಗಳನ್ನು ಲಘುವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಅದನ್ನು ಕಣ್ಣುಗಳ ಮೇಲೆ ಬಿಡಿ. ಪ್ರತಿ ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ. ಕೆಲವೇ ದಿನಗಳಲ್ಲಿ ನಿಮಗೆ ಡಾರ್ಕ್ ಸರ್ಕಲ್ ಸಮಸ್ಯೆ ಮಾಯವಾಗಲು ಆರಂಭವಾಗುತ್ತದೆ.
ಕ್ಯಾಸ್ಟರ್ ಮತ್ತು ತೆಂಗಿನ ಎಣ್ಣೆ:
ಸಮಾನ ಪ್ರಮಾಣದಲ್ಲಿ ಕ್ಯಾಸ್ಟರ್ ಆಯಿಲ್ ಮತ್ತು ತೆಂಗಿನ ಎಣ್ಣೆಯನ್ನು (Coconut Oil) ಮಿಶ್ರಣ ಮಾಡಿ. ಇದನ್ನು ಡಾರ್ಕ್ ಸರ್ಕಲ್ ಮತ್ತು ಮೇಲಿನ ರೆಪ್ಪೆಗಳಿಗೆ ಹಚ್ಚಿ. ಒಂದು ಅಥವಾ ಎರಡು ನಿಮಿಷ ಮಸಾಜ್ ಮಾಡಿ ಮತ್ತು ರಾತ್ರಿಯಿಡಿ ಬಿಡಿ. ತೆಂಗಿನ ಎಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಕೊಬ್ಬಿನಾಮ್ಲಗಳೂ ಇವೆ. ಇದು ಕಣ್ಣಿನ ಕೋಶಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕಪ್ಪು ವರ್ತುಲಗಳನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ- Oils For Digestion: ಮಳೆಗಾಲದಲ್ಲಿ ಅಡುಗೆಗೆ ಯಾವ ಎಣ್ಣೆ ಬಳಸುವುದು ಸೂಕ್ತ ?
ಕ್ಯಾಸ್ಟರ್ ಆಯಿಲ್ ಮತ್ತು ಹಾಲು:
1 ಟೀ ಚಮಚ ಕ್ಯಾಸ್ಟರ್ ಆಯಿಲ್ ತೆಗೆದುಕೊಂಡು ಅದನ್ನು ಸುಮಾರು 1 ಟೀಚಮಚ ಹಾಲಿನಲ್ಲಿ ಮಿಶ್ರಣ ಮಾಡಿ. ಬಳಿಕ ಅದನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ ಮತ್ತು ಸುಮಾರು ಒಂದು ಗಂಟೆ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ನಿಮ್ಮ ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ಚರ್ಮದಿಂದ ಡೆಡ್ ಸೆಲ್ಸ್ ಗಳನ್ನು ಹೊರಹಾಕುತ್ತದೆ.
(ಹಕ್ಕುತ್ಯಾಗ: ಇಲ್ಲಿ ನೀಡಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಪುಷ್ಟೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ