Health Tips: ಮೊಸರಿನಲ್ಲಿ ಒಣದ್ರಾಕ್ಷಿ ಬೆರೆಸಿ ತಿನ್ನುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ
ಮೊಸರು ಮತ್ತು ಒಣದ್ರಾಕ್ಷಿ ನಿಮ್ಮ ಆರೋಗ್ಯಕ್ಕೆ ಒಂದು ವರದಾನಕ್ಕಿಂತ ಕಡಿಮೆಯಿಲ್ಲ. ಇದನ್ನು ತಯಾರಿಸುವುದು ಕೂಡ ಸುಲಭ. ಇಂತಹ ಪರಿಸ್ಥಿತಿಯಲ್ಲಿ, ಈ ಮೊಸರು ಮತ್ತು ಒಣದ್ರಾಕ್ಷಿಯನ್ನು ಒಟ್ಟಿಗೆ ಸೇವಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ...
ಬೆಂಗಳೂರು: Health Tips- ಜನರು ಮಧ್ಯಾಹ್ನದ ಭೋಜನದ ಬಳಿಕ ಹಸಿವಾದರೆ ಸಾಮಾನ್ಯವಾಗಿ ಕುರುಕಲು ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಹಲವರಿಗೆ ಸಂಜೆಯ ಚಹಾದ ಜೊತೆಗೆ ಸ್ನಾಕ್ಸ್ ತಿನ್ನುವುದು ಅವರ ದಿನಚರಿಯ ಭಾಗವಾಗಿರುತ್ತದೆ. ಕರಿದ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ನಾವು ಆರೋಗ್ಯದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದೇ ಇಲ್ಲ. ಬದಲಿಗೆ ಬಾಯಿ ರುಚಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಆದರೆ ನೀವು ಚಹಾದೊಂದಿಗೆ ಹೊಟ್ಟೆ ಮತ್ತು ಹೃದಯಕ್ಕೆ ಅನಾರೋಗ್ಯಕರವಾಗಿರುವ ಕರಿದ ತಿಂಡಿಗಳನ್ನು ಸೇವಿಸುವ ಬದಲಿಗೆ ಆರೋಗ್ಯಕರ ಆಹಾರಗಳನ್ನು ಸೇವಿಸಬಹುದು. ಅಂತಹ ಒಂದು ಆರೋಗ್ಯಕರ ವಿಷಯದ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಮೊಸರು ಮತ್ತು ಒಣದ್ರಾಕ್ಷಿ ನಿಮ್ಮ ಆರೋಗ್ಯಕ್ಕೆ ವರದಾನವಿದ್ದಂತೆ!
ಮೊಸರು ಮತ್ತು ಒಣದ್ರಾಕ್ಷಿ ನಿಮ್ಮ ಆರೋಗ್ಯಕ್ಕೆ (Curd Raisins Benefits) ಒಂದು ವರದಾನಕ್ಕಿಂತ ಕಡಿಮೆಯಿಲ್ಲ. ಇದನ್ನು ತಯಾರಿಸುವುದು ಕೂಡ ಸುಲಭ. ಇಂತಹ ಪರಿಸ್ಥಿತಿಯಲ್ಲಿ, ಈ ಮೊಸರು ಮತ್ತು ಒಣದ್ರಾಕ್ಷಿಯನ್ನು ಒಟ್ಟಿಗೆ ಸೇವಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ...
ಇದನ್ನೂ ಓದಿ- Curd Side Effects: ನಿಮಗೂ ಈ ಸಮಸ್ಯೆಗಳಿದ್ದರೆ ಅಪ್ಪಿತಪ್ಪಿಯೂ ಮೊಸರು ಸೇವಿಸಬೇಡಿ
ಮೊಸರು-ಒಣದ್ರಾಕ್ಷಿಗಳ ವಿಶೇಷತೆಗಳು:
ಮೊಸರನ್ನು (Curd) ಆಹಾರದೊಂದಿಗೆ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಜನರು ಮೊಸರನ್ನು ವಿವಿಧ ರೀತಿಯಲ್ಲಿ ಅಂದರೆ ರಾಯತ, ಮಜ್ಜಿಗೆ, ಮೊಸರು ಬಜ್ಜಿ ಹೀಗೆ ವಿವಿಧ ರೂಪದಲ್ಲಿ ಸೇವಿಸುತ್ತಾರೆ. ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಚರ್ಮದ ಹೊಳಪನ್ನು ಕಾಪಾಡಿಕೊಳ್ಳಬಹುದು. ಒಣದ್ರಾಕ್ಷಿಯನ್ನು ಮೊಸರಿನೊಂದಿಗೆ ಬೆರೆಸಿದರೆ, ಅದು ತುಂಬಾ ಪ್ರಯೋಜನಕಾರಿ. ಮೊಸರು ಮತ್ತು ಒಣದ್ರಾಕ್ಷಿ ತಿನ್ನುವ ಸಮಯ ಕೂಡ ಬಹಳ ಮುಖ್ಯ. ಆದ್ದರಿಂದ, ನಾವು ಆರೋಗ್ಯದ ಸಂಪೂರ್ಣ ಲಾಭವನ್ನು ಪಡೆಯಲು ಬಯಸಿದರೆ, ನಾವು ಅದನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಮೊಸರು ಮತ್ತು ಒಣದ್ರಾಕ್ಷಿಗಳ ಸಂಯೋಜನೆಯು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವುದಲ್ಲದೆ ಅನೇಕ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುತ್ತದೆ.
ಮೊಸರು ಮತ್ತು ಒಣದ್ರಾಕ್ಷಿಗಳ ಸಂಯೋಜನೆಯ ಅದ್ಭುತ ಪ್ರಯೋಜನಗಳು:
ಒಣದ್ರಾಕ್ಷಿ (Raisins) ಕೂಡ ನಮ್ಮ ದೇಹಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ. ಇದು ಮಲಬದ್ಧತೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮೊಸರು-ಒಣದ್ರಾಕ್ಷಿ ಸಂಯೋಜನೆಯು ಹೊಟ್ಟೆಯ ಕೆಟ್ಟ ಬ್ಯಾಕ್ಟೀರಿಯಾವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರ ಸೇವನೆಯು ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ, ಏಕೆಂದರೆ ಮೊಸರು ಪ್ರೋಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಒಣದ್ರಾಕ್ಷಿಯಲ್ಲಿರುವ ಕರಗುವ ನಾರು ಮಾನವ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ- Benefits Of Curd: ಈ ಪದಾರ್ಥಗಳೊಂದಿಗೆ ಮೊಸರನ್ನು ಸೇವಿಸಿ, ಹಲವು ರೋಗಗಳಿಂದ ದೂರವಿರಿ
ಮೊಸರು ಮತ್ತು ಒಣದ್ರಾಕ್ಷಿ ಸೇವನೆಯ ವೈದ್ಯಕೀಯ ಪ್ರಯೋಜನಗಳು:
ಒಣದ್ರಾಕ್ಷಿ (ಕಪ್ಪು ಬಣ್ಣದಲ್ಲಿದ್ದರೆ ಉತ್ತಮ) ಮತ್ತು ಅರ್ಧ ಚಮಚ ಮೊಸರನ್ನು ಬೆರೆಸಿ ಸೇವಿಸುವುದರಿಂದ, ಒಣ ಚರ್ಮದ ಸಮಸ್ಯೆಯನ್ನು (Dry Skin Problem) ತೆಗೆದುಹಾಕುತ್ತದೆ. ಮೊಸರು ಮತ್ತು ಒಣದ್ರಾಕ್ಷಿಗಳ ಕಾಕ್ಟೈಲ್ ಕೂದಲಿನ ಬೂದು ಬಣ್ಣವನ್ನು ತಡೆಯುತ್ತದೆ. ತಜ್ಞರ ಪ್ರಕಾರ, ಮೊಸರು ಮತ್ತು ಒಣದ್ರಾಕ್ಷಿಗಳನ್ನು ಒಟ್ಟಿಗೆ ತಿನ್ನುವುದರಿಂದ, ನಿಮ್ಮ ಕೂದಲು ನಿರ್ಜೀವವಾಗುವುದನ್ನು ತಡೆಯಬಹುದು. ಇದರ ಸೇವನೆಯು ಪಿರಿಯಡ್ಸ್ ನೋವಿನಲ್ಲಿ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.
ಮೊಸರು ಮತ್ತು ಒಣದ್ರಾಕ್ಷಿಯನ್ನು ಒಟ್ಟಿಗೆ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರ ಹೊರತಾಗಿ, ಹೆಚ್ಚಿದ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಮೊಸರು ಮತ್ತು ಒಣದ್ರಾಕ್ಷಿ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಮೊಸರು ಮತ್ತು ಒಣದ್ರಾಕ್ಷಿಗಳನ್ನು ಯಾವಾಗ ತಿನ್ನಬೇಕು?
ಮೊಸರು-ಒಣದ್ರಾಕ್ಷಿ ತಿನ್ನಲು ಉತ್ತಮ ಸಮಯವೆಂದರೆ ಮಧ್ಯಾಹ್ನ ಅಥವಾ ಬೆಳಗಿನ ಉಪಹಾರ ಸಮಯ. ನೀವು ಮಧ್ಯಾಹ್ನ 3-4 ಗಂಟೆಯ ಸಮಯದಲ್ಲಿ ಮೊಸರನ್ನು ಒಣದ್ರಾಕ್ಷಿ ಜೊತೆಗೆ ಸೇವಿಸಬಹುದು. ಮೊಸರಿನ ಬಟ್ಟಲಿನಲ್ಲಿ ನೀವು ಹೆಚ್ಚು ಒಣದ್ರಾಕ್ಷಿಗಳನ್ನು ಹಾಕುವುದಿಲ್ಲ ಎಂಬುದನ್ನು ಸಹ ನೆನಪಿನಲ್ಲಿಡಿ. ಮೊಸರಿನ ಬಟ್ಟಲಿನಲ್ಲಿ ನೀವು ಕೇವಲ 4-5 ಒಣದ್ರಾಕ್ಷಿಗಳನ್ನು ಮಾತ್ರ ಬೆರೆಸಿ ತಿನ್ನುವುದು ಉತ್ತಮ.
ಸೂಚನೆ: ಈ ಲೇಖನದಲ್ಲಿ ಪ್ರಕಟವಾದ ಮಾಹಿತಿಯು ಆಯುರ್ವೇದ ತಜ್ಞರ ಸಲಹೆ ಮತ್ತು ಮನೆಮದ್ದುಗಳನ್ನು ಆಧರಿಸಿದೆ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.