ನವದೆಹಲಿ: Side Effects Of Cracking Fingers - ನೀವೂ ನಿಮ್ಮ ಕೈಬೆರಳುಗಳನ್ನು ಮುರಿಯುತ್ತೀರಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ಈ ವರದಿ ನೀವು ಓದಲೇಬೇಕು. ಏಕೆಂದರೆ ಪದೇ ಪದೇ ಬೆರಳುಗಳನ್ನು ಮುರಿದು ಆನಂದಿಸುವುದು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ನಿಮ್ಮ ಅಭ್ಯಾಸ ಕೇವಲ ನಿಮ್ಮ ಬೆರಳುಗಳ ಆಕಾರದಲ್ಲಿ ಬದಲಾವಣೆಗೆ ಮಾತ್ರ ಕಾರಣವಾಗದೆ, ಗಂಭೀರ ಕೀಲು ನೋವಿಗೂ ಕೂಡ ಕಾರಣವಾಗಬಹುದು.


COMMERCIAL BREAK
SCROLL TO CONTINUE READING

ಕೀಲು ನೋವಿಗೆ ಕಾರಣ
ಒಂದು ಸಂಶೋಧನೆಯ ಪ್ರಕಾರ, ಎರಡು ಮೂಳೆಗಳ ಕೀಲುಗಳ ನಡುವೆ ಒಂದು ದ್ರವ ತುಂಬಿರುತ್ತದೆ, ಇದು ಮೂಳೆಗಳ ಉತ್ತಮ ಚಲನೆಗೆ ಅಗತ್ಯವಾಗಿದೆ. ಇದಕ್ಕೆ ಲಿಗಾಮೆಂಟ್ ಸೈನೋವಿಯಲ್ ಫ್ಲೂಯಿಡ್ ಎಂದು ಕರೆಯಲಾಗುತ್ತದೆ. ಇದು ಮೂಳೆಗಳಲ್ಲಿ ಒಂದು ರೀತಿಯ ಗ್ರೀಸ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಪದೇ ಪದೇ ಬೆರಳುಗಳನ್ನು ಮುರಿಯುವುದರಿಂದ ಅವುಗಳ ನಡುವಿನ ದ್ರವವು ಕಡಿಮೆಯಾಗಲು ಆರಂಭವಾಗುತ್ತದೆ. ಇದು ಸಂಪೂರ್ಣವಾಗಿ ಮುಗಿದು ಹೋದರೆ, ನಂತರ ಕ್ರಮೇಣವಾಗಿ ಜಂಟಿಯಾಗಿ ನೋವು ಪ್ರಾರಂಭವಾಗುತ್ತದೆ ಮತ್ತು ಇದು ಸಂಧಿವಾತಕ್ಕೆ (Arthrites) ಒಂದು ಕಾರಣವಾಗಿ ಪರಿಣಮಿಸುತ್ತದೆ.


ಇದನ್ನೂ ಓದಿ-ತಾಮ್ರದ ಉಂಗುರ ಹಾಕುವುದರಿಂದ ನಿವಾರಣೆಯಾಗಲಿದೆ ಈ ದೋಷಗಳು


ಶಾಸ್ತ್ರದಳಲ್ಲಿ ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ (Astrology)
ಹಲವು ಧಾರ್ಮಿಕ ನಂಬಿಕೆಗಳ ಪ್ರಕಾರ, ಬೆರಳುಗಳನ್ನು ಮುರಿಯುವುದು (Cracking Fingers) ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಈ ಕಾರಣದಿಂದಾಗಿ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ಮುನಿಸಿಕೊಲ್ಲುತ್ತಾಳೆ ಎಂಬುದು ಜನರ ನಂಬಿಕೆಯಾಗಿದೆ. ಇದೇ ವೇಳೆ ಕೆಲವು ಜನರು ಬೆರಳುಗಳನ್ನು ಮುರಿಯುವುದರಿಂದ ಜಾತಕದಲ್ಲಿ ಇರುವ ಒಂಬತ್ತು ಗ್ರಹಗಳು ತೊಂದರೆ ಅನುಭವಿಸುತ್ತವೆ ಮತ್ತು ಇದರಿಂದಾಗಿ ಅಶುಭ ಸಮಯ ಪ್ರಾರಂಭವಾಗುತ್ತದೆ ಎಂದು ಹೇಳುತ್ತಾರೆ.


ಇದನ್ನೂ ಓದಿ-Moong Dal Benefits : ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಹೆಸರು ಕಾಳು : ಇದು ತೂಕ ಇಳಿಕೆಗೂ ಸಹಾಯಕ!


ಈ ಅಭ್ಯಾಸದಿಂದ ಹೇಗೆ ಮುಕ್ತಿ ಪಡೆಯಬೇಕು? (Health Tips)
1. ನಿಮ್ಮನ್ನು ನೀವು ಕಾರ್ಯನಿರತವಾಗಿಡಲು ಪ್ರಾರಂಭಿಸಿ. ನಿಮ್ಮ ಕೈಗಳು ಖಾಲಿ ಇದ್ದರೆ, ಅವು ನಿಮಗೆ  ಬೆರಳುಗಳನ್ನು ಮುರಿಯಲು ಉತ್ತೇಜಿಸುತ್ತವೆ. ಆದರೆ ನೀವು ಕಾರ್ಯನಿರತರಾಗಿದ್ದರೆ, ಬೆರಳು ಮುರಿಯುವುದರ ಕಡೆಗೆ ನಿಮ್ಮ ಗಮನವೇ ಹರಿಯುವುದಿಲ್ಲ. 
2. ಕೈ ಬೆರಳುಗಳನ್ನು ಮುರಿಯುವ ಇಚ್ಛೆಯಾದರೆ,  ನಿಮ್ಮ ಕೈಯಲ್ಲಿ ಯಾವುದಾದರೊಂದು ವಸ್ತುವನ್ನು ತೆಗೆದುಕೊಳ್ಳಿ. ಇದರಿಂದ ಬೆರಳುಗಳನ್ನು ಮುರಿಯಬಾರದು ಎಂಬುದನ್ನು ಜ್ಞಾಪಿಸಿಕೊಳ್ಳಿ.
3. ಒಂದು ವಾರದವರೆಗೆ ನೀವು ನಿಮ್ಮ ಬೆರಳುಗಳನ್ನು ಮುರಿಯುವುದನ್ನು ನಿಲ್ಲಿಸಿದರೆ, ನಂತರ ನೀವು ಈ ಅಭ್ಯಾಸವನ್ನು ತೊಡೆದುಹಾಕಬಹುದು.
4. ಕೇವಲ ಕೆಲ ಉಪಾಯಗಳು ಮತ್ತು ಇಚ್ಛಾ ಶಕ್ತಿಯ ಮೂಲಕ, ನೀವು ಸುಲಭವಾಗಿ ಬೆರಳು ಮುರಿಯುವ ಈ ನಿರುಪಯುಕ್ತ  ಅಭ್ಯಾಸವನ್ನು ತೊಡೆದುಹಾಕಬಹುದು.


ಇದನ್ನೂ ಓದಿ-Super Food For Diabetics: ಡಯಾಬಿಟಿಸ್ ರೋಗಿಗಳು ಶುಗರ್ ನಿಯಂತ್ರಣದಲ್ಲಿಡಲು ಈ 4 ಆಹಾರಗಳನ್ನು ಸೇವಿಸಲೇಬೇಕು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ