ನವದೆಹಲಿ : ಚರ್ಮದ ಆರೋಗ್ಯಕಾಗಿ ಅದರ ಸರಿಯಾದ ಆರೈಕೆ ಬಹಳ ಮುಖ್ಯ (Oily skin care). ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ಅದರ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಎಣ್ಣೆಯುಕ್ತ ಚರ್ಮದ ಮೇಲೆ ಮೊಡವೆ, ಕಲೆಗಳು, ದೊಡ್ಡ ರಂಧ್ರಗಳ ಸಮಸ್ಯೆ ಕಾಡಬಹುದು. ಎಣ್ಣೆಯುಕ್ತ ಮುಖವನ್ನು ತೊಡೆದುಹಾಕಲು ಮನೆಯಲ್ಲಿ ತಯಾರಿಸಿದ ಕ್ಲೆನ್ಸರ್ ಅನ್ನು ಬಳಸಬಹುದು. ಇದು ತಕ್ಷಣವೇ ನಿಮಗೆ ಪರಿಣಾಮವನ್ನು ನೀಡುತ್ತದೆ.
ಎಣ್ಣೆಯುಕ್ತ ಚರ್ಮದ ಸಮಸ್ಯೆ ನಿವಾರಣೆಗೆ ಮನೆಯಲ್ಲಿ ತಯಾರಿಸಿದ ಕ್ಲೆನ್ಸರ್ ಬಳಸಿ :
ರೋಸ್ ವಾಟರ್: ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ರೋಸ್ ವಾಟರ್ (Rose water) ಅತ್ಯುತ್ತಮ ಪರಿಹಾರ. ರಾತ್ರಿ ಮಲಗುವ ಮುನ್ನ, ಹತ್ತಿಯ ಸಹಾಯದಿಂದ, ರೋಜ್ ವಾಟರ್ ಅನ್ನು ಮುಖಕ್ಕೆ ಹಚ್ಚಿ ಇಡೀ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಎದ್ದು ಶುದ್ಧ ನೀರಿನಿಂದ (Water) ಮುಖ ತೊಳೆಯಿರಿ. ಹೀಗೆ ಪ್ರತಿ ದಿನ ಮಾಡುತ್ತಾ ಬಂದರೆ ಉತ್ತಮ ಫಲಿತಾಂಶ ಸಿಗಲಿದೆ.
ಇದನ್ನೂ ಓದಿ: Super Food For Diabetics: ಡಯಾಬಿಟಿಸ್ ರೋಗಿಗಳು ಶುಗರ್ ನಿಯಂತ್ರಣದಲ್ಲಿಡಲು ಈ 4 ಆಹಾರಗಳನ್ನು ಸೇವಿಸಲೇಬೇಕು
ಕಡಲೆ ಹಿಟ್ಟು ಮತ್ತು ಅರಿಶಿನ : ಎಣ್ಣೆಯುಕ್ತ ಚರ್ಮವನ್ನು ಸ್ವಚ್ಛಗೊಳಿಸಲು ಕಡಲೆ ಹಿಟ್ಟು ಮತ್ತು ಅರಿಶಿನ ಪರಿಣಾಮಕಾರಿ. 1 ಟೀಚಮಚ ಕಡಲೆ ಹಿಟ್ಟು, ಅರ್ಧ ಟೀಚಮಚ ಅರಿಶಿನ (turmeric) ಮತ್ತು ಅರ್ಧ ಟೀ ಚಮಚ ಹೆಸರುಬೇಳೆಯ ಪುಡಿಯನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಈ ಪೇಸ್ಟ್‌ನಿಂದ ಮುಖವನ್ನು ಸ್ಕ್ರಬ್ ಮಾಡಿ..10 ನಿಮಿಷಗಳ ಕಾಲ ಮುಖದ ಮೇಲೆ ಬಿಡಿ. ನಂತರ ಮುಖವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.
ಹಾಲು : 1 ಟೀಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು 3 ಚಮಚ ಹಾಲಿನ (Milk) ಜೊತೆ ಬೆರೆಸಿ ಮಿಶ್ರಣ ಮಾಡಿ. ಈ ಪೇಸ್ಟ್‌ನಿಂದ ಮುಖದ ಮೇಲೆ ಕ್ಲಾಕ್ ವೈಸ್ ಮತ್ತು ಆಂಟಿ ಕ್ಲಾಕ್ ವೈಸ್ ಮಸಾಜ್ ಮಾಡಿ. 5 ನಿಮಿಷಗಳ ಕಾಲ ಹೀಗೆ ಮಾಡಿ ಒಣಗಲು ಬಿಡಿ. ನಂತರ, ಉಗುರು ಬೆಚ್ಚಗಿನ ನೀರಿನಿಂದ (Warm water) ಮುಖ ತೊಳೆಯಿರಿ. ಇದನ್ನ ಪ್ರತಿ ದಿನ ಮಾಡುತ್ತಾ ಬಂದರೆ ಆಯಿಲಿ ಸ್ಕಿನ್ ನಿಂದ ಪರಿಹಾರ ಸಿಗುತ್ತದೆ.
ಸೌತೆಕಾಯಿ ಮತ್ತು ಟೊಮೆಟೊ : ಸೌತೆಕಾಯಿ ಮತ್ತು ಟೊಮೆಟೊ ಆಯಿಲಿ ಸ್ಕಿನ್ ಗೆ ಉತ್ತಮ ಕ್ಲೆನ್ಸರ್. ಅರ್ಧ ಸೌತೆಕಾಯಿ ಮತ್ತು 1 ಟೊಮೆಟೊವನ್ನು (Tomato) ರುಬ್ಬಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಪರಿಣಾಮ ತಿಳಿಯಲಿದೆ.
ಇದನ್ನೂ ಓದಿ: Ginger Tea Benefits: ನಿಮಗೂ ಈ ಸಮಸ್ಯೆಗಳಿದ್ದರೆ ನೀವೂ ಸೇವಿಸಿ Ginger Tea
ನಿಂಬೆ ಮತ್ತು ಜೇನುತುಪ್ಪ : ನಿಂಬೆ ಮತ್ತು ಜೇನುತುಪ್ಪವನ್ನು (Honey) ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಆಯಿಲಿ ಸ್ಕಿನ್ ನಿಂದ ಮುಕ್ತಿ ಸಿಗುವುದಲ್ಲದೆ, ಮುಖದ ಕಾಂತಿಯೂ ಹೆಚ್ಚುತ್ತದೆ. 1 ಟೀ ಚಮಚ ನಿಂಬೆ ರಸದಲ್ಲಿ (Lemon) 2 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಮಸಾಜ್ ಮಾಡಿ. ಮಸಾಜ್ ಮಾಡಿದ ನಂತರ ಅದನ್ನು 10 ನಿಮಿಷಗಳ ಕಾಲ ಮುಖದ ಮೇಲೆ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ರಾತ್ರಿ ಮಲಗುವ ಮುನ್ನ ಇದನ್ನು ಮಾಡುತ್ತಾ ಬಂದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ