Crassula plant: ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರುವ ಅನೇಕ ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ಇಂತಹ ಹೇಳಲಾಗಿದೆ. ಯಾವುದನ್ನಾದರೂ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ, ವ್ಯಕ್ತಿಯ ಪ್ರಗತಿಯ ಹಾದಿಯು ತೆರೆದುಕೊಳ್ಳುತ್ತದೆ ಮತ್ತು ಮನೆಯಿಂದ ವಾಸ್ತು ದೋಷಗಳು ದೂರವಾಗುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಮನೆ ಮುಂದೆ ಈ ಪ್ರಾಣಿಗಳನ್ನು ಕಂಡರೆ ಭಾರೀ ಅದೃಷ್ಟ


ಮನೆಯಲ್ಲಿ ಜನರು ಮನಿ ಪ್ಲಾಂಟ್ ನೆಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇದರಿಂದ ಲಕ್ಷ್ಮಿಯು ಮನೆಯಲ್ಲಿ ವಾಸವಾಗುತ್ತಾರೆ ಎಂಬುದು ನಂಬಿಕೆ. ಆದರೆ ಮನಿ ಪ್ಲಾಂಟ್‌ಗಿಂತ ಹೆಚ್ಚು ಪರಿಣಾಮಕಾರಿಯಾದ ಮತ್ತೊಂದು ಸಸ್ಯವೆಂದರೆ ಕ್ರಾಸ್ಸುಲಾ ಸಸ್ಯ. ಮನೆಯ ಸರಿಯಾದ ದಿಕ್ಕಿನಲ್ಲಿ ಅದನ್ನು ಇಡುವುದರಿಂದ, ಹಣವು ಅನೇಕ ಪಟ್ಟು ವೇಗವಾಗಿ ಹೆಚ್ಚಾಗುತ್ತದೆ.


ಮನೆಯಲ್ಲಿ ಈ ಗಿಡವನ್ನು ನೆಡಿ:


ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಹೊರತಾಗಿ ಇನ್ನೊಂದು ಗಿಡವನ್ನು ನೆಟ್ಟು ಮನೆಯಲ್ಲಿನ ಆರ್ಥಿಕ ಮುಗ್ಗಟ್ಟು ಹೋಗಲಾಡಿಸುತ್ತದೆ. ಈ ಸಸ್ಯವು ಕ್ರಾಸ್ಸುಲಾ ಸಸ್ಯ ಜಾತಿಗೆ ಸೇರಿದ್ದಾಗಿದೆ. ಕ್ರಾಸ್ಸುಲಾ ಸಸ್ಯದ ಎಲೆಗಳು ಅಗಲವಾಗಿರುತ್ತವೆ ಮತ್ತು ತುಂಬಾ ಮೃದುವಾಗಿರುತ್ತವೆ. ಹಸಿರು ಎಲೆಗಳಲ್ಲಿ ಹಳದಿ ಬಣ್ಣದ ಮಿಶ್ರಣ ಕಾಣಬರುತ್ತದೆ. ಈ ಗಿಡವನ್ನು ತೆರೆದ ಜಾಗದಲ್ಲಿ ನೆಡುವುದರಿಂದ ವೇಗವಾಗಿ ಬೆಳೆಯುತ್ತದೆ. ಈ ಸಸ್ಯಕ್ಕೆ ಬಲವಾದ ಸೂರ್ಯನ ಬೆಳಕು ಅಗತ್ಯವಿಲ್ಲ, ಆದ್ದರಿಂದ ಇದನ್ನು ಮನೆಯೊಳಗೆ ನೆಡಬಹುದು.


ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿ ಕ್ರಾಸ್ಸುಲಾ ಗಿಡವನ್ನು ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವನ್ನು ನೆಡುವುದರಿಂದ ಸಂಪತ್ತು ವೇಗವಾಗಿ ಹೆಚ್ಚಾಗುತ್ತದೆ. ಈ ಸಸ್ಯವು ತನ್ನ ಕಡೆಗೆ ಹಣವನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ. ಮನೆಯಲ್ಲಿ ಇದನ್ನು ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಮಾತೆಲಕ್ಷ್ಮಿಯ ವಾಸಸ್ಥಾನವಾಗುತ್ತದೆ.


ಕ್ರಾಸ್ಸುಲಾವನ್ನು ನೆಡಲು ಸರಿಯಾದ ದಿಕ್ಕು:


ಮನೆಯ ಪ್ರವೇಶ ದ್ವಾರದಲ್ಲಿ ಈ ಗಿಡವನ್ನು ನೆಡಲಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಪ್ರವೇಶದ್ವಾರದ ಬಲಭಾಗದಲ್ಲಿ ಇರಿಸಿ. ಈ ಸಸ್ಯವನ್ನು ನೆಟ್ಟ ಕೆಲವು ದಿನಗಳ ನಂತರ, ನಿಮ್ಮಲ್ಲಾಗುವ ಬದಲಾವಣೆಗಳನ್ನು ನೋಡಲು ಪ್ರಾರಂಭಿಸುತ್ತೀರಿ. ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಸಹ ಕ್ರಾಸ್ಸುಲಾ ಸಸ್ಯವನ್ನು ನೆಡಬಹುದು. ಇವುಗಳು ಪರಿಹಾರ ನೀಡುತ್ತದೆ.


ಇದನ್ನೂ ಓದಿ: ಪ್ರೀತಿಯಲ್ಲಿ ನಂಬಿಕೆಯೇ ಇಲ್ಲದ ಮರುಳುಗಾಡಿನ ಪಯಣ


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.