Beauty tips: ಇದು ಸನ್ ಟ್ಯಾನ್ ಮತ್ತು ಸೂರ್ಯನ ಕಿರಣದಿಂದ ಉಂಟಾಗುವ ಉರಿಯನ್ನು ಕಡಿಮೆ ಮಾಡುತ್ತದೆ. ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಕಂದು ಬಣ್ಣವನ್ನು ಕಡಿಮೆ ಮಾಡುತ್ತದೆ. ಒತ್ತಡ, ನಿದ್ರೆಯ ಸಮಸ್ಯೆಯಿಂದ ಕಣ್ಣಿನ ಕೆಳಗೆ ಉಂಟಾದ ಡಾರ್ಕ್ ಸರ್ಕಲ್ ನ್ನು ಇದು ನಿವಾರಿಸುತ್ತದೆ. 


COMMERCIAL BREAK
SCROLL TO CONTINUE READING

ಸೌತೆಕಾಯಿ ದೇಹದ ಆರೋಗ್ಯದ ಜತೆಗೆ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕಾರಿ. ಹಾಗಾದ್ರೆ ಈ ಸೌತೆಕಾಯಿಯಿಂದ ಯಾವೆಲ್ಲಾ ಸೌಂದರ್ಯ ಸಮಸ್ಯೆಗಳು ನಿವಾರಿಸಬಹುದು ಮತ್ತು ಮಾನವನ ಆರೋಗ್ಯಕ್ಕೆ ಎಷ್ಟೆಲ್ಲ ಸಹಾಯಕವಾಗಿದೆ ಎಂಬುದನ್ನು ತಿಳಿಯೋಣ. ಸೌತೆಕಾಯಿಯಲ್ಲಿ 45 ಕ್ಯಾಲರಿ, 11 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 2 ಗ್ರಾಂ ಪ್ರೋಟೀನ್, 2 ಗ್ರಾಂ ನಾರಿನಾಂಶ, ವಿಟಮಿನ್ ಸಿ, ವಿಟಮಿನ್ ಕೆ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ಮ್ಯಾಂಗನೀಸ್ ಇದೆ. ಸೌತೆಕಾಯಿ ದಿನನಿತ್ಯ ಸೇವಿಸಿದರೆ ಅದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಯಿರಿ.


ಇದನ್ನೂ ಓದಿ:Panchak April 2022: ಇಂದಿನಿಂದ 'ರಾಜ ಪಂಚಕ' ಆರಂಭ, ಶನಿಯ ಜೊತೆಗೆ ವಿಶೇಷ ಕನೆಕ್ಷನ್, ಈ ಕೆಲಸ ದುಬಾರಿ ಬೀಳಲಿದೆ


ಇದು ಸನ್ ಟ್ಯಾನ್ ಮತ್ತು ಸೂರ್ಯನ ಕಿರಣದಿಂದ ಉಂಟಾಗುವ ಉರಿಯನ್ನು ಕಡಿಮೆ ಮಾಡುತ್ತದೆ. ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಕಂದು ಬಣ್ಣವನ್ನು ಕಡಿಮೆ ಮಾಡುತ್ತದೆ. ಒತ್ತಡ, ನಿದ್ರೆಯ ಸಮಸ್ಯೆಯಿಂದ ಕಣ್ಣಿನ ಕೆಳಗೆ ಉಂಟಾದ ಡಾರ್ಕ್ ಸರ್ಕಲ್ ನ್ನು ಇದು ನಿವಾರಿಸುತ್ತದೆ. ಹಾಗೇ ಕಣ್ಣುಗಳ ಕೆಳಗೆ ಊದಿಕೊಂಡಿರುವುದು ಕಡಿಮೆಯಾಗುತ್ತದೆ. ಸೌತೆಕಾಯಿಯಲ್ಲಿ ಹೆಚ್ಚಾಗಿ ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಂ ಇದ್ದು, ಇದು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಎಣ್ಣೆ ಮತ್ತು ಮೊಡವೆಗಳ ಸಮಸ್ಯೆಯನ್ನು ದೂರ ಮಾಡುತ್ತದೆ. ಸೌತೆಕಾಯಿಯಲ್ಲಿರುವ ಆಯಂಟಿಆಕ್ಸಿಡೆಂಟ್ ಗಳು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.


ಜೀರ್ಣಕಾರ್ಯಕ್ಕೆ ಮತ್ತು ತೂಕ ಇಳಿಸಲು ಸಹಕಾರಿ: ಸೌತೆಕಾಯಿಯಲ್ಲಿ ಅಧಿಕ ಜಲಾಂಶವಿದ್ದು, ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ, ತೂಕ ನಷ್ಟ ವನ್ನು ಹೊಂದಲು ಬಯಸುವವರಿಗೆ ಸೌತೆಕಾಯಿಯು ವರದಾನ ವಾಗಿದೆ. ಸೌತೆಕಾಯಿಗಳನ್ನು ಸೂಪುಗಳಲ್ಲಿ ಮತ್ತು ಸಲಾಡ್ ಗಳಲ್ಲಿ ಬಳಸಿರಿ.


ಮೆದುಳಿಗೆ ಸೌತೆಕಾಯಿ ತುಂಬಾ ಒಳ್ಳೆಯದು: ಸೌತೆಕಾಯಿಯಲ್ಲಿ ಉರಿಯೂತ ಶಮನಕಾರಿ ಫ್ಲಾವೊನೊಲ್ ಇದ್ದು, ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನರಕೋಶಗಳ ಸಂರ್ಪಕವನ್ನು ಹೆಚ್ಚಿಸುವುದು. ಇದೇ ಕಾರಣಕ್ಕಾಗಿ ಪ್ರತಿನಿತ್ಯ ಸೌತೆಕಾಯಿ ಸೇವಿಸಿ.


ಇದನ್ನೂ ಓದಿ:ಮುಖದ ಅಂದ ಹೆಚ್ಚಿಸಬೇಕೇ? ಈ ಮಣ್ಣಿನ ಫೇಸ್‌ಪ್ಯಾಕ್‌ ಒಮ್ಮೆ ಬಳಸಿ ನೋಡಿ!


ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ: ಸೌತೆ ಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ. ಸೌತೆಕಾಯಿಯು ಸಿಲಿಕಾದ ಒಂದು ಉತ್ತಮ ಮೂಲವಾಗಿರುವುದರಿಂದ, ಇದು ಕೀಲುಗಳ ಅಂಗಾಂಶಗಳನ್ನು ಶಕ್ತಿಯುತಗೊಳಿಸುವುದರ ಮೂಲಕ ಸಂದುಗಳ ಆರೋಗ್ಯವನ್ನು ವೃದ್ಧಿಸುತ್ತದೆ.


ಸೌತೆಕಾಯಿಯು ಮಧುಮೇಹವನ್ನು ಗುಣಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮತ್ತು ರಕ್ತ ದೊತ್ತಡವನ್ನು ನಿಯಂತ್ರಿಸುತ್ತದೆ.  ಸೌತೆ ಕಾಯಿಯಲ್ಲಿ ಇರುವಂತಹ ಶೇ.95ರಷ್ಟು ನೀರಿನಾಂಶವು ದೇಹವನ್ನು ತೇವಾಂಶದಿಂದ ಇಡುತ್ತದೆ. ಇದು ಕೋಶಗಳಿಗೆ ಪೋಷಣೆ ನೀಡುವುದು ಮತ್ತು ಒಳಗಿನ ಕ್ರಿಯೆಗಳಿಗೆ ತುಂಬಾ ನೆರವಾಗುವುದು. ನೋವು ಹಾಗೂ ಸೋಂಕು ನಿವಾರಣೆಗೆ ಸೌತೆಕಾಯಿ ಜ್ಯೂಸ್ ತುಂಬಾ ಪರಿಣಾಮಕಾರಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.