Panchak April 2022: ಇಂದಿನಿಂದ 'ರಾಜ ಪಂಚಕ' ಆರಂಭ, ಶನಿಯ ಜೊತೆಗೆ ವಿಶೇಷ ಕನೆಕ್ಷನ್, ಈ ಕೆಲಸ ದುಬಾರಿ ಬೀಳಲಿದೆ

Raj panchak April 2022: ಸಾಮಾನ್ಯವಾಗಿ ಸೋಮವಾರದಿಂದ ಆರಂಭಗೊಳ್ಳುವ ಪಂಚಕವನ್ನು ರಾಜ ಪಂಚಕ ಎಂದು ಕರೆಯಲಾಗುತ್ತದೆ. ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಇದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಬಾರಿ ಪಂಚಕ ಶನಿ ಗ್ರಹದ ಜೊತೆಗೆ ಸಂಬಂಧ ಹೊಂದಿದ್ದು, ವಿಶೇಷ ಸನ್ನಿವೇಶ ಸೃಷ್ಟಿಯಾಗುತ್ತಿದೆ.  

Written by - Nitin Tabib | Last Updated : Apr 25, 2022, 05:26 PM IST
  • ಇಂದಿನಿಂದ ಪಂಚಕ ಕಾಲ ಆರಂಭ
  • ಈ ಬಾರಿಯ ಪಂಚಕ ರಾಜ ಪಂಚಕವಾಗಿದೆ
  • ಹೇಗಾಗಿ ನೀವು ಶುಭಕಾರ್ಯಗಳನ್ನು ನೆರವೇರಿಸಬಹುದು
Panchak April 2022: ಇಂದಿನಿಂದ 'ರಾಜ ಪಂಚಕ' ಆರಂಭ, ಶನಿಯ ಜೊತೆಗೆ ವಿಶೇಷ ಕನೆಕ್ಷನ್, ಈ ಕೆಲಸ ದುಬಾರಿ ಬೀಳಲಿದೆ title=
Panchak April 2022

Panchak April 2022:  ಇಂದು ಅಂದರೆ ಏಪ್ರಿಲ್ 25 ರಿಂದ ಪಂಚಕ ಆರಂಭವಾಗುತ್ತಿದೆ. ಹಿಂದೂ ಧರ್ಮಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ, ಶುಭ ಮತ್ತು ಅಶುಭ ಸಮಯವನ್ನು ಲೆಕ್ಕಾಚಾರ ಮಾಡುವಲ್ಲಿ ಪಂಚಕಗಳ ಪಾತ್ರ ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ಈ  5 ದಿನಗಳ ಪಂಚಕ ಅವಧಿಯನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದನ್ನು ನಿಷಿದ್ಧ ಎನ್ನಲಾಗಿದೆ. ಆದರೆ ಏಪ್ರಿಲ್ ಅಂತ್ಯದಲ್ಲಿ ಬಂದಿರುವ ಈ ಪಂಚಕಗಳು ಬಹಳ ವಿಶೇಷವಾಗಿದೆ.

ಇದು 'ರಾಜ ಪಂಚಕ'
ಈ ಬಾರಿ ಬಂದಿರುವ ಪಂಚಕ ರಾಜ ಪಂಚಕವಾಗಿದೆ. ಸೋಮವಾರದಿಂದ ಪಂಚಕ ಕಾಲ ಪ್ರಾರಂಭವಾದಾಗ ಅದನ್ನು ರಾಜ ಪಂಚಕ ಎಂದು ಕರೆಯಲಾಗುತ್ತದೆ. ಅದೇ ರೀತಿ ಭಾನುವಾರದಿಂದ ಪ್ರಾರಂಭವಾಗುವ ಪಂಚಕವನ್ನು ರೋಗ ಪಂಚಕ ಎಂದು ಕರೆಯಲಾಗುತ್ತದೆ, ಮಂಗಳವಾರದಿಂದ ಪ್ರಾರಂಭವಾಗುವ ಪಂಚಕವನ್ನು ಅಗ್ನಿ ಪಂಚಕ ಎಂದು ಕರೆಯಲಾಗುತ್ತದೆ, ಶುಕ್ರವಾರದಿಂದ ಪ್ರಾರಂಭವಾಗುವ ಪಂಚಕವನ್ನು ಕಳ್ಳ ಪಂಚಕ ಎಂದು ಕರೆಯಲಾಗುತ್ತದೆ ಮತ್ತು ಶನಿವಾರದಿಂದ ಪ್ರಾರಂಭವಾಗುವ ಪಂಚಕವನ್ನು ಮೃತ್ಯು ಪಂಚಕ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ, ಬುಧವಾರ ಮತ್ತು ಗುರುವಾರದಿಂದ ಪ್ರಾರಂಭವಾಗುವ ಪಂಚಕಗಳನ್ನು ಹೆಚ್ಚಿನ ಕೆಲಸಗಳಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ರಾಜ ಪಂಚಕ ಕೂಡ ಹೊಸ ಕೆಲಸವನ್ನು ಪ್ರಾರಂಭಿಸಲು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಪಂಚಕದ ಅವಧಿಯಲ್ಲಿ ಶನಿ ಭ್ರಮಣ
ಚಂದ್ರನು ಘೃಣಿತ, ಶತಭಿಷ, ಪೂರ್ವ ಭಾದ್ರಪದ, ಉತ್ತರ ಭಾದ್ರಪದ ಮತ್ತು ರೇವತಿ ನಕ್ಷತ್ರಗಳಲ್ಲಿ ಸಂಚರಿಸುವಾಗ ಪಂಚಕ ಸಂಭವಿಸುತ್ತದೆ. ಈ ಬಾರಿಯ ಪಂಚಕದಲ್ಲಿ ಕರ್ಮದ ಫಲ ಕೊಡುವ ಶನಿಯ ಭ್ರಮಣ ನಿರೀಕ್ಷಿಸಲಾಗಿದೆ. ಎರಡೂವರೆ ವರ್ಷಗಳ ನಂತರ, ಶನಿಯು ಏಪ್ರಿಲ್ 29 ರಂದು ಪಂಚಕ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಈ ಪಂಚಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ. ಇದು ರಾಜ ಪಂಚಕ ಆಗಿರುವುದರಿಂದ ಈ ಅವಧಿಯಲ್ಲಿ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದು ತುಂಬಾ ಮಂಗಳಕರವಾಗಿರುತ್ತದೆ.

ಇದನ್ನೂ ಓದಿ-Vastu Tips: ನಿವೇಶನ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ, ಇಲ್ದಿದ್ರೆ ಅದನ್ನು ಮಾರುವುದರಿಂದಲೂ ದೋಷ ತಗುಲುತ್ತದೆ

ಪಂಚಕ ಸಮಯದಲ್ಲಿ ಈ ಕೆಲಸವನ್ನು ಮಾಡಬೇಡಿ
>> ಪಂಚಕ ಸಮಯದಲ್ಲಿ ದೇವರನ್ನು ಪೂಜಿಸಿ ಮತ್ತು ಯಾವುದೇ ತಪ್ಪು ಕೆಲಸ ಮಾಡಬೇಡಿ.
>> ಪಂಚಕದ ಸಮಯದಲ್ಲಿ ಹುಲ್ಲು, ಮರ ಇತ್ಯಾದಿ ಸುಡುವ ವಸ್ತುಗಳನ್ನು ಸಂಗ್ರಹಿಸಬೇಡಿ.
>> ನಾಲ್ಕು ಕಾಲುಗಳಿರುವ ಪಲ್ಲಂಗವನ್ನು ಖರೀದಿಸಬೇಡಿ.
>> ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ, ಮನೆಯ ಮೇಲ್ಛಾವಣಿಯನ್ನು ಪಂಚಕದ ಕಾಲದಲ್ಲಿ ಹಾಕಬೇಡಿ ಅಥವಾ ಮನೆಗೆ ಬಾಗಿಲು ಹಾಕಬೇಡಿ.

ಇದನ್ನೂ ಓದಿ -Planatory Transit: ಈ ಗ್ರಹದ ಕಾರಣ ಮೀನ ರಾಶಿಯ ಸಂಕಷ್ಟದಲ್ಲಿ ಹೆಚ್ಚಳ, ಧನು ರಾಶಿಗೆ ಸುಖ ಪ್ರಾಪ್ತಿ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News