Daily Horoscope: ದಿನಭವಿಷ್ಯ 02-04-2021 Today astrology
ಶ್ರೀ ಮಾರಿಕಾಂಬಾ ದೇವಿ ತಾಯಿಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ.
Daily horoscope (ದಿನಭವಿಷ್ಯ 02-04-2021) : ಶ್ರೀ ಮಾರಿಕಾಂಬಾ ದೇವಿ ತಾಯಿಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ.
ಮೇಷ ರಾಶಿ :- ಬೇರೆಯವರ ಸಂಸಾರ ಸರಿಮಾಡಲು ಹೋಗಿ ನಿಮ್ಮ ಕುಟುಂಬ ಜೀವನದಲ್ಲಿ ಅಶಾಂತಿಯನ್ನು ತಂದುಕೊಳ್ಳದಿರಿ. ವಿದೇಶದಿಂದ ಮಗ ಹಾಗೂ ಅವರ ಕುಟುಂಬದ ಆಗಮನವಾಗಲಿದೆ. ಸಾಮಾಜಿಕ ಸೇವೆಯಲ್ಲಿಯೇ ಸಂತೃಪ್ತಿ ಕಾಣುವ ನಿಮಗೆ ಅದರಲ್ಲೇ ಕೀರ್ತಿ, ಗೌರವ ಪ್ರತಿಷ್ಠೆ ಹೆಚ್ಚಲಿದೆ. ಸ್ನೇಹಿತರು ಸಕಾಲದಲ್ಲಿ ಬೆಂಬಲ ನೀಡುವರು.
ವೃಷಭ ರಾಶಿ :- ನೂತನ ಪರಿಸರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದ್ದು ಇದು ನಿಮ್ಮ ವೃತ್ತಿಗೆ ಪೂರಕವಾಗಿದೆ ಮತ್ತು ನಿಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.
ಮಿಥುನ ರಾಶಿ :- ಸತತ ಪರಿಶ್ರಮ ಹಾಗೂ ಕಾರ್ಯ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ನಿಮ್ಮ ನೆಚ್ಚಿನ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಕಂಡುಬರುವುದು. ಆದರೆ ಯಶಸ್ಸು ಮಾತ್ರ ನಿಮ್ಮದೇ ಆಗುವುದು.
ಕಟಕ ರಾಶಿ :- ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡಾ ಅದು ಖರ್ಚುವೆಚ್ಚಗಳಿಗೆ ಸರಿ ಹೊಂದುವುದು. ಆದರೆ ಹಣ ಉಳಿತಾಯ ಮಾಡಲು ಆಗುವುದಿಲ್ಲ. ವಹಿಸಿಕೊಂಡ ಜವಾಬ್ದಾರಿ ನೀವು ಅಂದುಕೊಂಡಷ್ಟು ಶುಭವಲ್ಲ. ಬೇರೆಯವರ ಸಲಹೆಗಳನ್ನು ನಮ್ರತೆಯಿಂದ ಸ್ವೀಕರಿಸುವುದನ್ನು ಕಲಿಯಿರಿ.
ಇದನ್ನೂ ಓದಿ - Hasta Samudrika:ನಿಮ್ಮ ಕೈಯಲ್ಲಿಯೂ ಈ ರೇಖೆ ಇದೆಯಾ? ಇದ್ರೆ ನೀವೂ ನಿಮ್ಮ ಮಡದಿಯ ಕಾಳಜಿಗೆ ಪಾತ್ರರಗುವಿರಿ
ಸಿಂಹ ರಾಶಿ :- ವಿದ್ಯಾರ್ಥಿಗಳಿಗೆ ಓದು ಬರಹದಲ್ಲಿ ಆಸಕ್ತಿ ಮೂಡುವುದು. ಕುಟುಂಬದ ಸದಸ್ಯರೊಡನೆ ವಿನಾಕಾರಣ ಮನಸ್ತಾಪ ಮಾಡಿಕೊಳ್ಳದಿರಿ. ರಕ್ತಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದು. ಖರ್ಚಿನ ವಿಷಯದಲ್ಲಿ ಕಡಿವಾಣ ಹಾಕುವುದು ಉತ್ತಮ.
ಕನ್ಯಾ ರಾಶಿ :- ನಿಮ್ಮ ಉತ್ಸಾಹದ ವೇಗಕ್ಕೆ ಎದುರಾಳಿಗಳು ಕೂಡಾ ಬೆಚ್ಚಿ ಬೀಳುವರು. ಕಠಿಣ ಪರಿಶ್ರಮದಿಂದ ಯಶಸ್ಸು ದೊರೆಯುವುದು. ನಿಮ್ಮನ್ನು ನೋಡಿ ಮಾತ್ಸರ್ಯ ಪಡುವ ವ್ಯಕ್ತಿಗಳನ್ನು ಕಂಡು ತಲೆ ಕೆಡಿಸಿಕೊಳ್ಳಬೇಡಿ.
ತುಲಾ ರಾಶಿ :- ವ್ಯವಹಾರದಲ್ಲಿ ಸ್ನೇಹಿತರು, ಅನುಭವಿಗಳ ಹಾಗೂ ಹಿರಿಯರ ಸಹಾಯ ದೊರೆಯಲಿದೆ. ಅದು ದುರುಪಯೋಗವಾಗದಂತೆ ಎಚ್ಚರ ವಹಿಸಿರಿ. ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ.
ವೃಶ್ಚಿಕ ರಾಶಿ :- ಬಹಳ ಆಲೋಚಿಸಿ ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು. ಆದಾಯ ಮೂಲಗಳ ಹೆಚ್ಚಳದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಯೋಜನಾಬದ್ಧ ನಿರ್ಧಾರಗಳಿಂದ ಮಾತ್ರ ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು.
ಇದನ್ನೂ ಓದಿ - Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?
ಧನುಸ್ಸು ರಾಶಿ :- ಮಕ್ಕಳ ಭವಿಷ್ಯದ ಬಗೆಗೆ ಈಗಲೇ ಒಂದು ನಿರ್ಧಾರಕ್ಕೆ ಬರುವುದು ಉತ್ತಮ. ಗುರು ದೇವತಾನುಗ್ರಹದಿಂದ ಹೆಚ್ಚಿನ ಆತ್ಮಬಲ ಬರಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ದೇವತಾ ದರ್ಶನದಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳುವಿರಿ.
ಮಕರ ರಾಶಿ :- ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲು ಪ್ರಯತ್ನಿಸಿ. ಆತ್ಮೀಯರೊಂದಿಗೆ ರಹಸ್ಯ ಸಮಾಲೋಚನೆ ನಡೆಯಲಿದೆ. ಆರ್ಥಿಕವಾಗಿ ಹೆಚ್ಚಳ ಕಂಡು ಬರುವುದು. ಖಾಸಗಿ ಕಂಪನಿ ನೌಕರರಿಗೆ ಹಳೆಯ ಕಂಪನಿಯಿಂದ ಹೆಚ್ಚಿನ ವೇತನದ ಮರು ಅವಕಾಶ ಒದಗಿ ಬರುವ ಸಾಧ್ಯತೆ ಇರುತ್ತದೆ.
ಕುಂಭ ರಾಶಿ :- ಮನೆಗೆ ಬಂಧುಮಿತ್ರರ ಆಗಮನದಿಂದ ಸಂತಸ. ಹೆಚ್ಚಿನ ಖರ್ಚಿಗೆ ದಾರಿಯಾಗುವುದು. ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಯೋಗ ಮತ್ತು ಧ್ಯಾನದ ಮೊರೆಹೋಗುವುದು ಅನಿವಾರ್ಯ. ಸ್ನೇಹಿತರಿಂದ ಸಿಕ್ಕ ಉತ್ತಮ ಸಲಹೆ ಮನೆಯಲ್ಲಿ ಶಾಂತಿ ವಾತಾವರಣ ಮೂಡಿಸುವುದು. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ.
ಮೀನ ರಾಶಿ :- ನಿಮ್ಮ ಬುದ್ಧಿವಂತಿಕೆ ಹಾಗೂ ಚಾಣಾಕ್ಷ ತನದಿಂದಾಗಿ ಶತ್ರುಗಳ ಪಿತೂರಿ ಬಯಲಾಗಲಿದೆ. ಮತ್ತಾರದೋ ತಂಟೆ ಬಗೆಹರಿಸಲು ಹೋಗಿ ನೀವು ಹಣ ಕಳೆದುಕೊಳ್ಳುವಿರಿ. ಬರಲಿರುವ ಸವಾಲುಗಳನ್ನು ಸುಲಭವಾಗಿ ನಿಭಾಯಿಸುವಿರಿ. ಹಣಕಾಸು ವಿವಿಧ ಮೂಲದಿಂದ ಕೈಸೇರಲಿದೆ.
ಇದನ್ನೂ ಓದಿ - ಹಳದಿ ಬಣ್ಣ ಮತ್ತು ಗುರುವಾರಕ್ಕೇನು ಸಂಬಂಧ ತಿಳಿದಿದೆಯೇ ?
ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.