ಹಳದಿ ಬಣ್ಣ ಮತ್ತು ಗುರುವಾರಕ್ಕೇನು ಸಂಬಂಧ ತಿಳಿದಿದೆಯೇ ?

ಗುರುವಾರ ಭಗವಾನ್ ವಿಷ್ಣುವಿನ ಜೊತೆ ಗುರುರಾಯರನ್ನು ಕೂಡಾ ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಜೊತೆಗೆ ಗುರುಗಳಿಗೂ ಹಳದಿ ಬಣ್ಣ ಎಂದರೆ ಅತ್ಯಂತ ಪ್ರಿಯ ಎನ್ನಲಾಗಿದೆ.

Written by - Ranjitha R K | Last Updated : Apr 1, 2021, 01:35 PM IST
  • ಗುರುವಾರ ಹಳದಿ ಬಣ್ಣಕೆ ಯಾಕೆ ಪ್ರಾಶಸ್ತ್ಯ
  • ಹಳದಿ ಬಟ್ಟೆಗಳನ್ನು ಧರಿಸುವುದರಿಂದ ಈ ದಿನ ಅನೇಕ ಪ್ರಯೋಜನಗಳಿವೆ
  • ಹಳದಿ ಬಣ್ಣವು ವಿಷ್ಣು ಮತ್ತು ಬೃಹಸ್ಪತಿ ದೇವರ ನೆಚ್ಚಿನ ಬಣ್ಣವಾಗಿದೆ.
ಹಳದಿ ಬಣ್ಣ ಮತ್ತು ಗುರುವಾರಕ್ಕೇನು ಸಂಬಂಧ ತಿಳಿದಿದೆಯೇ ? title=
ಗುರುವಾರ ಹಳದಿ ಬಣ್ಣಕೆ ಯಾಕೆ ಪ್ರಾಶಸ್ತ್ಯ (file photo)

ನವದೆಹಲಿ : ವಾರದ ಪ್ರತಿಯೊಂದು ದಿನವೂ ಒಬ್ಬ ದೇವರಿಗೆ ಸಮರ್ಪಿತ ಎನ್ನುವ ಹಾಗೆ, ಆಯಾ ದಿನಕ್ಕೆ ನಿಗದಿತ ಬಣ್ಣವನ್ನು ಬಳಸಿದರೆ ಶುಭ ಅನ್ನುವುದು ಕೂಡಾ ನಂಬಿಕೆ. ಸೋಮವಾರ ಶಿವನನ್ನು (Lord Shiva) ಪೂಜಿಸಲಾಗುತ್ತದೆ ಹಾಗೆ ಬಿಳಿ ಬಣ್ಣ ಸೋಮವಾರಕ್ಕೆ ಶುಭ ಎನ್ನಲಾಗುತ್ತದೆ. ಮಂಗಳವಾರ ಹನುಮನನ್ನು (Lord Hanuma) ಪೂಜಿಸಲಾಗುತ್ತದೆ ಆ ದಿನ ಕೆಂಪು ಬಣ್ಣಕ್ಕೆ ಪ್ರಾಶಸ್ತ್ಯ. ಅದೇ ರೀತಿ, ಬ್ರಹಸ್ಪತಿ ದಿನವಾದ ಗುರುವಾರ ಹಳದಿ ಬಣ್ಣದ (Yellow colour on thursday) ಬಟ್ಟೆಗಳನ್ನು ಧರಿಸುವುದು ಶ್ರೇಷ್ಠ ಎನ್ನಲಾಗಿದೆ. ಗುರುವಾರ ಜನರು ಹಳದಿ ಹೂವು, ಹಳದಿ ಬಣ್ಣದ ವಸ್ತುಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. 

ಗುರುವಾರ ಭಗವಾನ್ ವಿಷ್ಣುವಿನ (Lord Vishnu) ಜೊತೆ ಗುರುರಾಯರನ್ನು (Guru Raghavendra Swamy) ಕೂಡಾ ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಜೊತೆಗೆ ಗುರುಗಳಿಗೂ ಹಳದಿ ಬಣ್ಣ ಎಂದರೆ ಅತ್ಯಂತ ಪ್ರಿಯ ಎನ್ನಲಾಗಿದೆ. ಆದ್ದರಿಂದ ಇವರ ಕೃಪೆಗೆ ಪಾತ್ರರಾಗಲು ಜನರು ಗುರುವಾರದ ದಿನ ಹಳದಿ ಬಟ್ಟೆಗಳನ್ನು (Yellow cloth) ಧರಿಸುತ್ತಾರೆ. ಅಲ್ಲದೆ, ಹಳದಿ ಬಣ್ಣದ ತಿಂಡಿಗಳು, ಹಳದಿ ಬಣ್ಣದ ಹಣ್ಣುಗಳನ್ನು ಮಾತ್ರ ಭಗವಂತನಿಗೆ ಅರ್ಪಿಸುತ್ತಾರೆ.  ಗುರುವಾರ ಹಳದಿ ಬಣ್ಣದ ವಸ್ತುಗಳನ್ನು ದಾನ (Donate) ಮಾಡುವುಡು ಕೂಡ ಶುಭ ಫಲ ನೀಡುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ : Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

ಹಳದಿ ಬಣ್ಣ ಯಾಕೆ ಶುಭ ? 
- ಹಳದಿ ಬಣ್ಣವನ್ನು ಹಿಂದೂ ಧರ್ಮದಲ್ಲಿ ಬಹಳ ಶುಭ ಎಂದು ಪರಿಗಣಿಸಲಾಗಿದೆ
-  ಅರಿಶಿನವನ್ನು (Turmeric) ಹಚ್ಚುವ ಮೂಲಕವೇ  ವಿವಾಹ ವಿಧಿಗಳು ಪ್ರಾರಂಭವಾಗುತ್ತವೆ.
- ಧರ್ಮಗ್ರಂಥಗಳಲ್ಲಿ, ಹಳದಿ ಬಣ್ಣವನ್ನು ಸಮೃದ್ಧಿಯ ಸಂಕೇತ ಎಂದು ವಿವರಿಸಲಾಗಿದೆ.
-ಹಳದಿ ಬಣ್ಣವು ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎನ್ನಲಾಗಿದೆ. .

ಗುರುವಾರ ಹಳದಿ ಧರಿಸುವುದರಿಂದ ಆಗುವ ಪ್ರಯೋಜನಗಳು:
ಜ್ಯೋತಿಷ್ಯದ (Astrology) ಪ್ರಕಾರ, ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯ ನಡೆಯಬೇಕಾದರೆ ಗುರುಬಲ ಇರಲೇಬೇಕು. ಹಾಗಾಗಿ ಮದುವೆ ವಿಚಾರದಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ,  ಗುರುವಾರ ಹಳದಿ ಬಟ್ಟೆಗಳನ್ನು ಧರಿಸಬೇಕು ಎನ್ನುತ್ತಾರೆ. 
- ಭಗವಾನ್ ವಿಷ್ಣು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾನೆ. ಹಾಗಿರುವಾಗ ವಿಷ್ಣುವಿನ ದಿನವಾದ ಗುರುವಾರ ಹಳದಿ ಬಟ್ಟೆ ಮತ್ತು ಹಳದಿ ಲೋಹ  ಧರಿಸಿದರೆ, ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯಬಹುದು ಎಂಬುವುದು ನಂಬಿಕೆ. 
- ಗುರುವಾರ ಹಳದಿ ಬಟ್ಟೆಗಳನ್ನು ಧರಿಸುವುದರಿಂದ ಆರೋಗ್ಯವು (Health) ಉತ್ತಮವಾಗಿರುತ್ತದೆ ಮತ್ತು ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರುತ್ತದೆ.

ಇದನ್ನೂ ಓದಿ : Budh Rashi Parivartan 2021: ಏಪ್ರಿಲ್ ಮೊದಲ ದಿನವೇ ಬುಧನ ರಾಶಿ ಪರಿವರ್ತನೆ ; ಖುಲಾಯಿಸಲಿದೆ ಈ 5 ರಾಶಿಗಳ ಅದೃಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News