Daily Horoscope 2022: ಶನಿವಾರದಂದು, ಸಿಂಹ ರಾಶಿಯ ಜನರಿಗೆ ಗುರು ಹಿರಿಯರಿಂದ ಪ್ರೀತಿ ಪ್ರಾಪ್ತಿಯಾಗಲಿದೆ, ನಿಮ್ಮ ಕೆಲಸದಿಂದ ಮೇಲಾಧಿಕಾರಿಗಳು ಸಂತುಷ್ಟರಾಗಲಿದ್ದಾರೆ, ಇದೇ ವೇಳೆ ಕುಂಭ ರಾಶಿಯ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯದಲ್ಲಿ ಬೇರೆ ವಿಷಯಗಳ ಬಗ್ಗೆ ಗಮನ ಹರಿಸದೆ ತಮ್ಮ ಕೆಲಸ ಮತ್ತು ಗುರಿಯತ್ತ ಗಮನವನ್ನು ಕೇಂದ್ರೀಕರಿಸಬೇಕು.


COMMERCIAL BREAK
SCROLL TO CONTINUE READING

ಮೇಷ ರಾಶಿ- ಮೇಷ ರಾಶಿಯ ಜನರು ತಮ್ಮ ಮಾತಿನ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು, ನೀವು ವೃತ್ತಿಯಲ್ಲಿ ಶಿಕ್ಷಕ ಅಥವಾ ವಕ್ತಾರರಾಗಿದ್ದರೆ ಈ ವಿಷಯವು ನಿಮಗೆ ಹೆಚ್ಚು ಮುಖ್ಯವಾಗಿದೆ. ವ್ಯಾಪಾರಸ್ಥರು ಹಣಕಾಸಿನ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು, ಕಳ್ಳತನದ ಸಾಧ್ಯತೆ ಇದೆ, ಎಚ್ಚರದಿಂದಿರಿ, ನೀವು ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ತಮವಾಗಿ ಮಾರಾಟ ಮಾಡಲು ಸಾಧ್ಯವಾಗಲಿದೆ. ಯುವಕರು ಧೈರ್ಯ ಮತ್ತು ಶಕ್ತಿಯ ಬಲದ ಮೇಲೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ, ಇದು ನಿಮ್ಮ ರ ಭವಿಷ್ಯಕ್ಕೆ ಪ್ರಯೋಜನಕಾರಿ ಸಾಬೀತಾಗಲಿದೆ. ಮನೆಗಾಗಿ ಮಾಡಿದ ಹಳೆಯ ಹೂಡಿಕೆಗಳು ಪ್ರಯೋಜನ ನೀಡಲಿದೆ, ಏಕೆಂದರೆ ಇದೀಗ ಮನೆಗಾಗಿ ಮಾಡಿದ ಹೂಡಿಕೆಯ ಕಾಲ ಬಂದಿದೆ. ಬೆನ್ನು ನೋವು ಬರುವ ಸಾಧ್ಯತೆ ಇದ್ದು, ಮುಂದಕ್ಕೆ ಬಾಗುವ ಚಟುವಟಿಕೆಗಳಿಂದ ದೂರವಿರಿ, ಸ್ವಲ್ಪ ವಿಶ್ರಾಂತಿಯನ್ನೂ ತೆಗೆದುಕೊಂಡರೆ ಉತ್ತಮ. ಸ್ನೇಹಿತರ ವ್ಯಾಪ್ತಿ ಹೆಚ್ಚಾಗಲಿದೆ. ಇದು ಒಳ್ಳೆಯ ಬೆಳವಣಿಗೆ, ಆದರೆ ಇದೇ ವೇಳೆ ಹಳೆಯ ಸ್ನೇಹಿತರಲ್ಲಿಯೂ ಕೂಡ ನಂಬಿಕೆ ಇರಿಸಿ.


ವೃಷಭ ರಾಶಿ- ಈ ರಾಶಿಯ ಜನರು ತಮ್ಮ ಕಚೇರಿಯಲ್ಲಿ ಚತುರ್ಥ ಶ್ರೇಣಿಯ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುವ ಮೂಲಕ ಅವರನ್ನು ಮೆಚ್ಚಿಸಲು ಪ್ರಯತ್ನಿಸಬೇಕು. ವ್ಯಾಪಾರಿಗಳು ಯಾವುದೇ ಹೊಸ ಯೋಜನೆಯನ್ನು ತರಾತುರಿಯಲ್ಲಿ ಪ್ರಾರಂಭಿಸಬಾರದು, ಮೊದಲು ಅದರ ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಪರಿಗಣಿಸಿ. ಯುವಜನರು ತಮ್ಮ ಪ್ರೀತಿಪಾತ್ರರೊಂದಿಗಿನ ವಿವಾದದಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಆದರೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು ಎಂಬುದರ ಕಾಳಜಿ ವಹಿಸಿ. ಕುಟುಂಬದಲ್ಲಿ ಯಾರೊಬ್ಬರ ಮದುವೆ ಸಮಾರಂಭದಲ್ಲಿ ನೀವು ಸಹಾಯ ಮಾಡಬೇಕಾಗಬಹುದು, ನಿಮ್ಮ ಪ್ರೀತಿಪಾತ್ರರಿಗೆ ನೀವು ಸಹಾಯ ಮಾಡಬೇಕು. ಕೆಮ್ಮು, ನೆಗಡಿ ನಿಮ್ಮನ್ನು ಕಾಡಬಹುದು, ಆದ್ದರಿಂದ ನೀವು ಶೀತ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿದರೆ, ಈ ಕಾಯಿಲೆಗಳಿಂದ ದೂರವಿರಬಹುದು. ನಿಮ್ಮ ತೀಕ್ಷ್ಣವಾದ ನಡವಳಿಕೆ ಇತರರ ಮುನಿಸಿಗೆ ಕಾರಣವಾಗಬಹುದು, ಆದ್ದರಿಂದ ನಿಮ್ಮ ನಡವಳಿಕೆಯನ್ನು ಸರಿಪಡಿಸಿ ಮತ್ತು ನಮ್ರತೆಯನ್ನು ತಂದುಕೊಳ್ಳಿ.


ಮಿಥುನ ರಾಶಿ- ಮಿಥುನ ರಾಶಿಯ ಜನರು ಕಚೇರಿಯ ಪರವಾಗಿ ಇತರ ನಗರಗಳಿಗೆ ಪ್ರಯಾಣಿಸಬೇಕಾಗಬಹುದು, ಇದಕ್ಕಾಗಿ ನೀವು ಸಿದ್ಧರಾಗಿರಬೇಕು. ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗಲಿದೆ, ಅವರು ತಮ್ಮ ಗ್ರಾಹಕರನ್ನು ತೃಪ್ತಿಪಡಿಸುವ ಜೊತೆಗೆ ಷೇರುಗಳ ಬಗ್ಗೆ ಚಿಂತಿಸಬೇಕು. ಯುವಕರು ಹೊಸ ಸಂಬಂಧಗಳಲ್ಲಿ ಸರಿಯಾದ ಅಂತರವನ್ನು ಕಾಯ್ದುಕೊಳ್ಳಬೇಕು, ಬೇಗ ಹತ್ತಿರವಾಗುವುದು ಒಳ್ಳೆಯದಲ್ಲ. ಹೊಸ ಸಂಬಂಧಗಳಿಗೆ ಆತುರಪಡುವುದು ಭವಿಷ್ಯದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು, ಆರಂಭಿಕ ಹಂತದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ಕ್ರಮೇಣ ಅವರನ್ನು ಹತ್ತಿರಕ್ಕೆ ತರಲು ಅವಕಾಶವನ್ನು ನೀಡುತ್ತದೆ. ನೀವು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ತಂಪಾದ ಮತ್ತು ಶುದ್ಧ ನೀರಿನಿಂದ ಕಣ್ಣನ್ನು ಚೆನ್ನಾಗಿ ತೊಳೆಯಿರಿ. ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯರಾಗಿ, ಸಸಿಗಳನ್ನು ನೆಡಬೇಕು, ಈ ದಿನಗಳಲ್ಲಿ ಮಳೆಯಾಗುತ್ತಿದೆ ಮತ್ತು ನೆಟ್ಟ ನಂತರ ಅವುಗಳು ಬೆಳೆದ ಬಳಿಕ ಕಾಳಜಿವಹಿಸಿ.


ಕರ್ಕ ರಾಶಿ- ಈ ರಾಶಿಯ ಜನರು ತಮ್ಮ ಬಾಕಿ ಇರುವ ಕೆಲಸವನ್ನು ಬೇಗನೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಹಿಂದೆ ಬೀಳುವಿರಿ, ನಿಮ್ಮ ಕೆಲಸವನ್ನು ನೀವು ವೇಗಗೊಳಿಸಬೇಕಾಗುತ್ತದೆ. ಆಹಾರ ಮತ್ತು ಪಾನೀಯ ತಯಾರಿಸುವ ಉದ್ಯಮಿಗಳು ತಮ್ಮ ಸರಕುಗಳ ಗುಣಮಟ್ಟದ ಮೇಲೆ ನಿಗಾ ವಹಿಸಬೇಕು ಮತ್ತು ಯಾವುದೇ ಬೆಲೆಗೆ ಅದನ್ನು ಕುಸಿಯಲು ಬಿಡಬೇಡಿ. ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಬಹುದು, ಆದ್ದರಿಂದ ಅವರು ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಸಂಗಾತಿಯೊಂದಿಗೆ ಜಗಳದ ಸಾಧ್ಯತೆ ಇದೆ. ಯಾವುದೇ ರೀತಿಯ ವಿವಾದಗಳು ಸಂಭವಿಸದಂತೆ ನೀವು ಶಾಂತವಾಗಿರುವುದು ಉತ್ತಮ. ಅಸಿಡಿಟಿ ಇಂದು ಕಾಡಲಿದೆ, ನೀರು ಸೇವನೆಯ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ, ಜಿಡ್ಡಿನಿಂದ ಕೂಡಿದ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ನಿಮ್ಮ ಆಹಾರದಿಂದ ತೆಗೆದುಹಾಕಬೇಕಾಗುತ್ತದೆ. ನೀವು ಕೆಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗಬೇಕಾಗಬಹುದು. ಇಂತಹ ಕಾರ್ಯಕ್ರಮಗಳಿಗೆ ಹೋಗುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಬರುವುದು ಒಳ್ಳೆಯದು.


ಸಿಂಹ ರಾಶಿ- ಸಿಂಹ ರಾಶಿಯವರಿಂದ ಪ್ರೀತಿ ಪ್ರಾಪ್ತಿಯಗಲಿದೆ, ಮೇಲಾಧಿಕಾರಿಗಳು ಕೂಡ ನಿಮ್ಮ ಮೇಲೆ ಪ್ರಶಂಸೆ ವ್ಯಕ್ತವಾಗುವ ಹಾಗೆ ಕೆಲಸ ಮಾಡುವಿರಿ. ವ್ಯಾಪಾರಿಗಳು ವಿದೇಶಿ ಕಂಪನಿಗಳಿಂದ ಉತ್ತಮ ಕೊಡುಗೆಗಳನ್ನು ಪಡೆಯಬಹುದು, ವಿದೇಶಿ ಕಂಪನಿಗಳ ಸರಕುಗಳಲ್ಲಿ ವ್ಯವಹರಿಸುವವರು, ಅವರು ಕಂಪನಿಯೊಂದಿಗೆ ಸಂಪರ್ಕದಲ್ಲಿರಬೇಕು. ಯುವಕರು ತಮ್ಮ ಕರ್ಮವೇ ಆರಾಧನೆ, ತತ್ವ ಎಂಬುದನ್ನು ನಿಮ್ಮ ಜೀವನದ ಗುರಿಯಾಗಿರಿಸಿಕೊಳ್ಳಿ, ಯಾರಾದರೂ ಸಹಾಯಕ್ಕಾಗಿ ಕೇಳಿದರೆ, ಅವರನ್ನು ನಿರಾಶೆಗೊಳಿಸಬೇಡಿ. ನೀವು ಅಕ್ಕ ಮತ್ತು ಸಹೋದರಿಯ ಬೆಂಬಲವನ್ನು ಪಡೆಯುವಿರಿ, ಅವರೊಂದಿಗೆ ಪ್ರೀತಿ ಮತ್ತು ಗೌರವದಿಂದ ಮಾತನಾಡಿ. ರಸ್ತೆಗಳಲ್ಲಿ ಜಾಗರೂಕರಾಗಿರಿ, ಇಲ್ಲದಿದ್ದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹಸಿಯಿಂದ ಹೂಡಿರುವ ಜಾಗದಲ್ಲಿ ಜಾರಿಬೀಳುವುದರ ಬಗ್ಗೆ ಹೆಚ್ಚು ಎಚ್ಚರವಹಿಸುವ ಅವಶ್ಯಕತೆಯಿದೆ. ಇಂದು ನೀವು ಬಯಸಿದ ಉಡುಗೊರೆಗಳನ್ನು ಪಡೆಯಬಹುದು, ಯಾರಾದರೂ ಉಡುಗೊರೆಯನ್ನು ನೀಡುತ್ತಾರೆ, ಅದು ನಿಮಗೆ ಸಂತೋಷವನ್ನು ನೀಡಲಿದೆ.


ಕನ್ಯಾ ರಾಶಿ- ಈ ರಾಶಿಯವರಿಗೆ ಕಛೇರಿಯಲ್ಲಿ ಕೆಲಸ ಜಾಸ್ತಿಯಾಗುವುದರಿಂದ ಒತ್ತಡ ಹೆಚ್ಚಾಗಲಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಆದ್ದರಿಂದ ತೊಡಗಿಸಿಕೊಳ್ಳಿ. ಇಂದು ವ್ಯಾಪಾರವು ಸಾಮಾನ್ಯವಾಗಿರುತ್ತದೆ, ನಷ್ಟವಾಗಲಿ ಅಥವಾ ಲಾಭವಾಗಲಿ ಇರುವುದಿಲ್ಲ, ವ್ಯವಹಾರವು ಎಂದಿನಂತೆ ನಡೆಯುತ್ತದೆ, ನೀವು ಹೊಸ ವ್ಯವಹಾರವನ್ನು ಯೋಜಿಸಬಹುದು. ಯುವಕರು ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ವಹಿಸಲಿದ್ದಾರೆ, ಅವರಿಗೆ ತಮ್ಮ ಇಮೇಜ್ ಅನ್ನು ಬೆಳಗಿಸಲು ಅವಕಾಶ ಸಿಗಲಿದೆ, ಅವರು ಅಧ್ಯಯನದ ಹೊರತಾಗಿ ಏನಾದರೂ ಮಾಡಬೇಕು. ಕುಟುಂಬ ಸದಸ್ಯರ ನಡುವೆ ಪರಸ್ಪರ ಭಿನ್ನಾಭಿಪ್ರಾಯ ತಲೆದೋರುವ ಸಾಧ್ಯತೆಯಿದೆ, ಇಂತಹ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರ ನಡುವೆ ಸಮತೋಲನವನ್ನು ಸೃಷ್ಟಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾದ ಮಲಬದ್ಧತೆ, ಗ್ಯಾಸ್ ಸಮಸ್ಯೆ ಕಾಡಲಿದೆ. ಹಲವು ತಲೆಮಾರುಗಳಿಂದ ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿರುವ ವ್ಯಾಪಾರಸ್ಥರು ಜನರೊಂದಿಗೆ ಬಾಂಧವ್ಯ ಮತ್ತು ಸಂಪರ್ಕವನ್ನು ಬಲಪಡಿಸುವ ಮೂಲಕ ಲಾಭವನ್ನು ಗಳಿಸಲು ಸಾಧ್ಯವಾಗಲಿದೆ. 


ತುಲಾ ರಾಶಿ- ತುಲಾ ರಾಶಿಯ ಜನರು ತಮ್ಮ ಕಾರ್ಯಕ್ಷಮತೆಯನ್ನು ಉತ್ತಮವಾಗಿ ಇಟ್ಟುಕೊಳ್ಳುವ ಮೂಲಕ ಯಾರನ್ನೂ ನಿರಾಶೆಗೊಳಿಸಬಾರದು, ಕೆಲಸದ ಸ್ಥಳದಲ್ಲಿ ಇಡೀ ತಂಡವನ್ನು ನಿಮ್ಮೊಂದಿಗೆ ಕರೆದೊಯ್ಯಿರಿ. ಅನುಭವ,  ಶಕ್ತಿ, ಧೈರ್ಯ ಮತ್ತು ಬಂಡವಾಳದೊಂದಿಗೆ ವ್ಯವಹಾರದಲ್ಲಿ ಪ್ರಮುಖ ವಿಷಯವಾಗಿದೆ, ಕೆಲವೊಮ್ಮೆ ಬಂಡವಾಳ, ಧೈರ್ಯ ಅಥವಾ ಕಠಿಣ ಪರಿಶ್ರಮ ಹಿಂದಕ್ಕೆ ಬಿದ್ದರೆ ಮತ್ತು ಅನುಭವ ಅದನ್ನು ಮುನ್ನಡೆಸುತ್ತದೆ. ಮಕ್ಕಳು ಅತಿಯಾದ ಮೊಬೈಲ್ ಬಳಕೆಯನ್ನು ತಪ್ಪಿಸಬೇಕು, ಅದನ್ನು ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ, ಪೋಷಕರು ಮಕ್ಕಳೊಂದಿಗೆ ತೊಡಗಿಸಿಕೊಳ್ಳಬೇಕು. ನಿಮ್ಮ ಸಹೋದರಿಯ ಆರೋಗ್ಯವನ್ನು ನೋಡಿಕೊಳ್ಳಿ, ಅವರ ಯೋಗಕ್ಷೇಮವನ್ನು ಕೇಳಿ ಮತ್ತು ಅಗತ್ಯವಿದ್ದಾಗ ಸಹಾಯ ಮಾಡಲು ಸಿದ್ಧರಾಗಿರಿ. ಅನಾವಶ್ಯಕವಾಗಿ ಟಿವಿ, ಮೊಬೈಲ್, ಲ್ಯಾಪ್ ಟಾಪ್ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಒಂದಿಷ್ಟು ಇಂಡೋರ್ ಗೇಮ್ ಆಡಿ ಅಥವಾ ಸ್ವಲ್ಪ ಸಮಯ ಪ್ರಕೃತಿಯನ್ನು ನೋಡಿ. ಗುರಿಗಳನ್ನು ಸಾಧಿಸಲು, ಈ ರಾಶಿಯ ಜನರು ಸಹ ಪ್ರಯತ್ನಿಸುತ್ತಲೇ ಇರುತ್ತಾರೆ, ಯಾವುದೂ ಕೂಡ ಸ್ವಯಂಚಾಲಿತವಾಗಿ ಬರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. 


ವೃಶ್ಚಿಕ ರಾಶಿ- ಈ ರಾಶಿಯ ಜನರು ತಮ್ಮ ಸಹೋದ್ಯೋಗಿಯ ಕೆಲಸವನ್ನು ಸಹ ಮಾಡಬೇಕಾಗಬಹುದು, ಆದರೆ ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡಿ,  ಸಂತೋಷದಿಂದ ಮಾಡಿ. ಉದ್ಯಮಿಗಳ ಪ್ರತಿಷ್ಠೆ ಹೆಚ್ಚಾಗಲಿದೆ, ಅವರ ನಿಶ್ಚಲ ಹಣವು ಮಾರುಕಟ್ಟೆಯಲ್ಲಿ ನಿಮಗೆ ಬರಬೇಕಾದ ಹಣ ನಿಮಗೆ ಸಿಗಲಿದೆ.  ಜೊತೆಗೆ ವ್ಯಾಪಾರ ಸಮಸ್ಯೆಗಳು ನಿವಾರಣೆಯಾಗುತ್ತವೆ. ಯುವಕರ ಸೌಮ್ಯ ನಡವಳಿಕೆ ಇತರರನ್ನು ಆಕರ್ಷಿಸಲಿದೆ ಮತ್ತು ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ, ಆದ್ದರಿಂದ ನಿಮ್ಮ ಸೌಮ್ಯತೆಯನ್ನು ಕಾಪಾಡಿಕೊಳ್ಳಿ. ಹಳೆ ಸ್ಥಳೀಯ ವಿವಾದಗಳಿಗೆ ಗಾಳಿಯನ್ನು ನೀಡಬೇಡಿ, ಆದರೆ ಅವುಗಳನ್ನು ತಂಪಾಗಿಸಲು ಮತ್ತು ಅವುಗಳನ್ನು ಮರೆತುಬಿಡಲು ಪ್ರಯತ್ನಿಸಿ. ಸೊಳ್ಳೆಗಳು ಮತ್ತು ಕೊಳೆಯಿಂದ ಹರಡುವ ರೋಗಗಳಗಳಿಂದ ತೊಂದರೆಗೊಳಗಾಗಬಹುದು, , ಡೆಂಗ್ಯೂ ಮತ್ತು ಅತಿಸಾರವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹರಡುತ್ತಿದೆ, ಕಾಳಜಿವಹಿಸಿ. ಅಧ್ಯಯನ ಮಾಡಲು, ಧಾರ್ಮಿಕ ಪುಸ್ತಕಗಳನ್ನು ಓದಲು ಮತ್ತು ನಂತರ ನಿಮ್ಮ ಸ್ವಂತ ಹೊಸ ರೀತಿಯಲ್ಲಿ ನಿಮ್ಮ ವಿಮರ್ಶೆಯನ್ನು ಬರೆಯಲು ಇದು ಸರಿಯಾದ ಸಮಯ.


ಧನು ರಾಶಿ- ಧನು ರಾಶಿಯ ಜನರ ಕಚೇರಿಯಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ, ಆದರೆ ನೀವು ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸಬೇಕಾಗಿಲ್ಲ. ನೀವು ಕಂಪನಿಯ ಮಾಲೀಕರಾಗಿದ್ದರೆ, ಕೆಲಸ ಮಾಡಲು ವಿಫಲವಾದರೆ, ಕೋಪದಲ್ಲಿ ಸಂಯಮವನ್ನು ಕಳೆದುಕೊಳ್ಳಬೇಡಿ ಮತ್ತು ಕೋಪಗೊಳ್ಳದೆ ಸಂಬಂಧಪಟ್ಟ ಜನರೊಂದಿಗೆ ಮಾತನಾಡಿ. ಇಂದು ಯುವಕರು ತಮ್ಮ ಕೆಲಸಕ್ಕಾಗಿ ಇಡೀ ದಿನ ಭಾರಿ ಓಡಾಟ ನಡೆಸಬೇಕಾಗಲಿದೆ, ಆದರೆ, ಯಶಸ್ಸು ಸಿಗಲಿದೆ. ನಿಮ್ಮ ತಾಯಿಯ ಆರೋಗ್ಯವು ಬಹಳ ದಿನಗಳಿಂದ ಹದಗೆಟ್ಟಿದ್ದರೆ, ಇಂದಿನಿಂದ ಅವರು ಪರಿಹಾರವನ್ನು ಪಡೆಯಲಿದ್ದಾರೆ. ಪ್ರಸ್ತುತ ಸಮಯದಲ್ಲಿ ಅಸ್ತಮಾ ರೋಗಿಗಳು ಜಾಗೃತರಾಗಿರಬೇಕು, ಕೆಲವೊಮ್ಮೆ ಮಳೆಯ ತೇವಾಂಶ ಮತ್ತು ಕೆಲವೊಮ್ಮೆ ತೇವಾಂಶದ ವಾತಾವರಣ ನಿಮ್ಮ ಸಮಸ್ಯೆಯನ್ನು ಹೆಚ್ಚಿಸಬಹುದು. ನೀವು ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಬೇಕು, ಯಾವುದೇ ಕೆಲಸದ ಯಶಸ್ಸಿಗೆ ಆತ್ಮವಿಶ್ವಾಸ ಅಗತ್ಯ, ಆದರೆ ಅದು ಅತಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.


ಮಕರ ರಾಶಿ- ಈ ರಾಶಿಯ ಜನರು ತಮ್ಮ ಕೆಲಸದಲ್ಲಿ ಹೆಚ್ಚು ಪರಿಶ್ರಮ ಪಡಬೇಕಾಗಲಿದೆ. ಇಂದಿನ ಕೆಲಸವನ್ನು ಇಂದೇ ಮುಗಿಸಿ, ನಾಳೆಗೆ ಬಿಡಬೇಡಿ. ಉದ್ಯಮಿಗಳ ವೆಚ್ಚದಲ್ಲಿ ಅನಗತ್ಯ ಹೆಚ್ಚಳವು ಅವರ ಒತ್ತಡವನ್ನು ಹೆಚ್ಚಿಸಬಹುದು, ಒತ್ತಡವನ್ನು ಹೆಚ್ಚಿಸುವ ಬದಲು ಖರ್ಚುಗಳನ್ನು ನಿಯಂತ್ರಿಸಿ. ಯುವಕರು ಅನುಸರಿಸುತ್ತಿರುವ ಹಿಂದಿನ ನಿಯಮಗಳನ್ನು ಬದಲಾಯಿಸುವ ಸಮಯ ಬಂದಿದೆ, ಸಮಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಬೇಕು. ಮನೆಯ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಿ, ಇದು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಮತ್ತು ಅವರು ಸುಸಂಸ್ಕೃತರಾಗುತ್ತಾರೆ, ಕೆಟ್ಟ ಪರಿಸರವು ಕೆಟ್ಟ ಪರಿಣಾಮ ಬೀರುತ್ತದೆ. ಹಳೆಯ ಗಾಯವು ಮತ್ತೆ ಘಾಸಿಗೊಳಿಸಬಹುದು, ಆದ್ದರಿಂದ ಜಾಗರೂಕರಾಗಿರಿ ಇದರಿಂದ ಗಾಯದ ಸಾಧ್ಯತೆಗಳು ಕಡಿಮೆಯಾಗುತ್ತವೆ. ರಾಜಕೀಯಕ್ಕೆ ಸಂಬಂಧಿಸಿದ ಜನರು ತಮ್ಮ ಪ್ರಚಾರವನ್ನು ಹೆಚ್ಚಿಸಿಕೊಳ್ಳಬೇಕು, ನೀವು ಮಾಡಿದ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು.


ಕುಂಭ ರಾಶಿ- ಕಂಪನಿಯ ಸಲಹೆಗಾರರಾಗಿ ಕೆಲಸ ಮಾಡುವ ಕುಂಭ ರಾಶಿಯವರು ಬಹಳ ಎಚ್ಚರಿಕೆಯಿಂದ ಸಲಹೆಗಳನ್ನು ನೀಡಬೇಕು. ವ್ಯಾಪಾರದಲ್ಲಿ ಒಂದಿಷ್ಟು ನಷ್ಟವಾಗುವ ಸಂಭವವಿರುವುದರಿಂದ ಅನಾವಶ್ಯಕ ಪ್ರಮಾಣದ ದಾಸ್ತಾನು ಇಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಅಧ್ಯಯನದ ಸಮಯದಲ್ಲಿ ಬೇರೆ ವಿಷಯಗಳತ್ತ ಗಮನ ಕೊಡಬೇಡಿ ಮತ್ತು ನಿಮ್ಮ ಕೆಲಸ ಮತ್ತು ಗುರಿಯನ್ನು ಮುಂದಿಟ್ಟುಕೊಂಡು ಮುಂದಕ್ಕೆ ಸಾಗಿ. ಕುಟುಂಬದ ಕೆಲವು ಪ್ರಮುಖ ವಿಷಯದ ಕುರಿತು ಚರ್ಚೆ ನಡೆಯಲಿದೆ, ಅದರಲ್ಲಿ ಎಲ್ಲಾ ಸದಸ್ಯರು ಹಾಜರಿರುತ್ತಾರೆ. ನಿಮ್ಮ ಆಲೋಚನೆಗಳನ್ನು ಶಾಂತವಾಗಿ ವ್ಯಕ್ತಪಡಿಸಿ. ಅನಾರೋಗ್ಯದಿಂದ ಬಳಲುತ್ತಿರುವ ಜನರು ಜಾಗರೂಕರಾಗಿರಬೇಕು, ಏಕೆಂದರೆ ಅವರ ಆರೋಗ್ಯವು ಮತ್ತಷ್ಟು ಹದಗೆಡಬಹುದು, ನಿಮ್ಮ ಔಷಧಿಗಳನ್ನು ಮತ್ತು ಆಹಾರವನ್ನು ತೆಗೆದುಕೊಳ್ಳಿ. ನಿಮ್ಮನ್ನು ನೀವು ಆತ್ಮವಿಶ್ವಾಸದಲ್ಲಿಟ್ಟುಕೊಳ್ಳಿ ಮತ್ತು ನಿಮ್ಮಲ್ಲಿ ನಾಯಕತ್ವವನ್ನು ಬೆಳೆಸಿಕೊಳ್ಳಿ, ಎಲ್ಲರನ್ನೂ ಕರೆದುಕೊಂಡು ಮುಂದಕ್ಕೆ ಸಾಗಲು ಪ್ರಯತ್ನಿಸಿ.


ಇದನ್ನೂ ಓದಿ-Monthly Horoscope 2022: ಸೆಪ್ಟೆಂಬರ್ 17ರ ಬಳಿಕ ಈ ರಾಶಿಗಳಿಗೆ ಅಪಾರ ಧನಲಾಭ


ಮೀನ ರಾಶಿ- ಈ ರಾಶಿಯ ಜನರು ತಮ್ಮ ಮೇಲಧಿಕಾರಿಯೊಂದಿಗಿನ ಸಂಬಂಧವನ್ನು ಹಾಳಾಗಲು ಬಿಡಬಾರದು, ಉದ್ಯೋಗದಲ್ಲಿ ಬಾಸ್ ಪಾತ್ರ ತುಂಬಾ ಮುಖ್ಯವಾಗಿರುತ್ತದೆ ಮತ್ತು ಕೋಪದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಚಿಲ್ಲರೆ ವ್ಯಾಪಾರಸ್ಥರಿಗೆ ಆರ್ಥಿಕ ಪ್ರಗತಿಯಾಗಲಿದೆ, ಅದಕ್ಕಾಗಿ ತಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ದಾಸ್ತಾನು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಯುವಕರು ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು, ಆಗ ಮಾತ್ರ ಅವರು ತಮ್ಮ ವಿಷಯದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ, ಧ್ಯಾನವನ್ನು ರೂಢಿಸಿಕೊಳ್ಳಿ. ನಿಯಮಗಳನ್ನು ಅನುಸರಿಸಿ, ಒಬ್ಬರು ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಾಗಬಹುದು, ಆದರೆ ಸಾಮಾಜಿಕ ನಿಯಮಗಳನ್ನು ಎಲ್ಲಿಯೂ ಮುರಿಯಬೇಡಿ. ಹಳಸಿದ ಆಹಾರವನ್ನು ಸೇವಿಸಬೇಡಿ, ಏಕೆಂದರೆ ನಿರ್ಜಲೀಕರಣದ ಸಾಧ್ಯತೆಯಿದೆ ಮತ್ತು ಇದಕ್ಕೆ ದೊಡ್ಡ ಕಾರಣ ಹಳಸಿದ ಆಹಾರ. ಥಟ್ಟನೆ ಹಣ ಖರ್ಚಾಗುವಂತೆ ತೋರುತ್ತದೆ, ಏನೇ ಇರಲಿ, ಅಗತ್ಯವಿದ್ದರೆ ಖರ್ಚು ಮಾಡಬೇಕು, ಆತ್ಮವಿಶ್ವಾಸ ಮತ್ತು ಮನೋಬಲ ಹೆಚ್ಚಾಗಲಿದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ಓದಿ-Solar Eclipse: ದೀಪಾವಳಿಯ ದಿನ ಸೂರ್ಯ ಗ್ರಹಣ! ಲಕ್ಷ್ಮಿ-ಗಣೇಶ ಪೂಜೆ ಹೇಗೆ?


ಇದನ್ನೂ ನೋಡಿ-https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.