Monthly Horoscope 2022: ಸೆಪ್ಟೆಂಬರ್ 17ರ ಬಳಿಕ ಈ ರಾಶಿಗಳಿಗೆ ಅಪಾರ ಧನಲಾಭ

September Month Horoscope - ಸೆಪ್ಟೆಂಬರ್ ನಲ್ಲಿ ಹಲವು ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸಲಿವೆ. ಗ್ರಹ-ನಕ್ಷತ್ರಗಳ ಈ ರಾಶಿ ಪರಿವರ್ತನೆ ಮಾನವನ ಜೀವನದ ಮೇಲೆ ನೇರ ಪ್ರಭಾವ ಬೀರಲಿವೆ. ಅಂದರೆ, ಇದು ಎಲ್ಲಾ ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರಲಿದೆ.
 

September 2022 Month Horoscope: ಸೆಪ್ಟೆಂಬರ್ ತಿಂಗಳಿನಲ್ಲಿ ಹಲವು ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸಲಿವೆ. ಗ್ರಹ-ನಕ್ಷತ್ರಗಳ ನಡೆಯಲ್ಲಿನ ಈ ಪರಿವರ್ತನೆ ಎಲ್ಲಾ ವ್ಯಕ್ತಿಗಳ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಅಂದರೆ, ಗ್ರಹಗಳ ಈ ಸ್ಥಿತಿ ಪರಿವರ್ತನೆ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರಲಿದೆ.

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-Planet Transit: ಮುಂದಿನ 4 ತಿಂಗಳು ಈ ರಾಶಿಗಳ ಜಾತಕದವರಿಗೆ ಬಂಬಾಟಾಗಿರಲಿವೆ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /12

ಮೇಷ ರಾಶಿ  - ಸ್ವಾವಲಂಬಿಯಾಗಿರಿ, ಅತಿಯಾದ ಕೋಪ ಮತ್ತು ಉತ್ಸಾಹವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜೀವನದಲ್ಲಿ ಪರಿಸ್ಥಿತಿಗಳು ಅಸ್ತವ್ಯಸ್ತವಾಗಬಹುದು. ಸೆಪ್ಟೆಂಬರ್ 17 ರ ನಂತರ, ಶೈಕ್ಷಣಿಕ ಕೆಲಸಗಳಲ್ಲಿ ಅಡಚಣೆಗಳು ಉಂಟಾಗಬಹುದು. ಎಚ್ಚರವಾಗಿರಿ. ಮಗುವಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಖರ್ಚು ಹೆಚ್ಚಾಗಲಿದೆ. ಉದ್ಯೋಗದಲ್ಲಿ ವಿದೇಶ ಪ್ರವಾಸಕ್ಕೆ ಅವಕಾಶಗಳು ದೊರೆಯುತ್ತವೆ. ಸ್ನೇಹಿತರ ಬೆಂಬಲ ನಿಮಗೆ ಸಿಗಲಿದೆ.  

2 /12

ವೃಷಭ ರಾಶಿ- ಆತ್ಮವಿಶ್ವಾಸ ಹೆಚ್ಚಾಗಲಿದೆ, ಆದರೆ ಮನಸ್ಸು ವಿಚಲಿತವಾಗಬಹುದು. ಸಮಾಧಾನದಿಂದಿರಿ.ಸೆಪ್ಟೆಂಬರ್ 17ರಿಂದ ತಾಳ್ಮೆ ಮತ್ತಷ್ಟು ಕಡಿಮೆಯಾಗಬಹುದು. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಉದ್ಯೋಗದಲ್ಲಿ ಬದಲಾವಣೆಯ ಅವಕಾಶವಿದೆ. ಆದಾಯವೂ ಹೆಚ್ಚಾಗಲಿದೆ, ಆದರೆ ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯೂ ಇರಬಹುದು. ಕೆಲಸ ಒತ್ತಡ ಹೆಚ್ಚಾಗಲಿದೆ. ವಾಹನ ಸುಖ ಹೆಚ್ಚಾಗಲಿದೆ. ಗೆಳೆಯರ ಆಗಮನ.  

3 /12

ಮಿಥುನ ರಾಶಿ- ತಿಂಗಳ ಆರಂಭದಲ್ಲಿ ಮನಸ್ಸು ಸಂತೋಷದಿಂದ ಕೂಡಿರಲಿದೆ. ಆತ್ಮವಿಶ್ವಾಸವೂ ಇರುತ್ತದೆ. ಆದರೆ, ತಾಳ್ಮೆಯಿಂದಿರಿ. ಅನಗತ್ಯ ವಿವಾದಗಳನ್ನು ತಪ್ಪಿಸಿ. ಕೆಲಸದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ನೀವು ವಿದೇಶ ಪ್ರವಾಸಕ್ಕೂ ಹೋಗಬಹುದು. ಕೆಲಸದ ವ್ಯಾಪ್ತಿಯಲ್ಲಿ ಹೆಚ್ಚಾಗಬಹುದು. ಕೆಲಸ ಒತ್ತಡ ಇರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ಕುಟುಂಬದ ಬೆಂಬಲ ಸಿಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಲಾಭದ ಅವಕಾಶಗಳೂ ಇರುತ್ತವೆ.  

4 /12

ಕರ್ಕ ರಾಶಿ- ತಿಂಗಳ ಆರಂಭದಲ್ಲಿ ಆತ್ಮವಿಶ್ವಾಸದಿಂದ ತುಂಬಿರುವಿರಿ. ಸಂಯಮದಿಂದಿರಿ ಅನಗತ್ಯ ಕೋಪ ಮತ್ತು ಚರ್ಚೆಯನ್ನು ತಪ್ಪಿಸಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಸೆಪ್ಟೆಂಬರ್ 17 ರೊಳಗೆ, ಹಿರಿಯ ವ್ಯಕ್ತಿಯಿಂದ ಧನ ಪ್ರಾಪ್ತಿಯಾಗಲಿದೆ. ಸೆಪ್ಟೆಂಬರ್ 18 ರಿಂದ ವ್ಯಾಪಾರದಲ್ಲಿ ಹೆಚ್ಚಳದ ಅವಕಾಶ ಇರಲಿದೆ, ಆದರೆ ಸಾಕಷ್ಟು ಪರಿಶ್ರಮ ಇರಲಿದೆ. ಕೆಲವು ತೊಂದರೆಗಳೂ ಎದುರಾಗಬಹುದು. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ಸ್ನೇಹಿತರ ಬೆಂಬಲ ಸಿಗಲಿದೆ.

5 /12

ಸಿಂಹ ರಾಶಿ- ತಿಂಗಳ ಆರಂಭದಲ್ಲಿ ಆತ್ಮವಿಶ್ವಾಸದಿಂದ ತುಮ್ಬಿರುವಿರಿ. ಆದರೆ, ಇನ್ನೊಂದೆಡೆ ಮನಸ್ಸು ಕೂಡ ವಿಚಲಿತವಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ಪ್ರಗತಿಯ ಅವಕಾಶಗಳು ಲಭ್ಯವಾಗಬಹುದು. ಆದರೆ ಕಾರ್ಯಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ನೀವು ಬೇರೆ ಯಾವುದೇ ಸ್ಥಳಕ್ಕೆ ಹೋಗಬಹುದು. ನೀವು ಕುಟುಂಬದಿಂದ ದೂರ ಉಳಿಯಬೇಕಾಗಬಹುದು. ಖರ್ಚು ಹೆಚ್ಚಾಗಲಿದೆ.

6 /12

ಕನ್ಯಾ ರಾಶಿ- ಮಾತಿನಲ್ಲಿ ಮಾಧುರ್ಯ ಇರಲಿದೆ. ಆತ್ಮವಿಶ್ವಾಸ ತುಂಬಿರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲಸದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಗಳು ಇರಬಹುದು. ಪರಿಶ್ರಮ ಇರಲಿದೆ. ನೀವು ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಸೆಪ್ಟೆಂಬರ್ 17 ರಿಂದ ಮನಸ್ಸಿಗೆ ತೊಂದರೆಯಾಗಬಹುದು. ತಾಳ್ಮೆಯಿಂದಿರಲು ಪ್ರಯತ್ನಿಸಿ. ಬರವಣಿಗೆ ಮತ್ತು ಬೌದ್ಧಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಾಗಲಿದೆ ಮತ್ತು ಧನ ಪ್ರಾಪ್ತಿಯಾಗಲಿದೆ.  

7 /12

ತುಲಾ ರಾಶಿ - ತಿಂಗಳ ಆರಂಭದಲ್ಲಿ ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರಲಿದೆ, ಆದರೆ ಸಂಭಾಷಣೆಯಲ್ಲಿ ಮಿತವಾಗಿರಿ. ವ್ಯಾಪಾರ ವಹಿವಾಟಿನಲ್ಲಿ ವೃದ್ಧಿ ಇದೆ. ವ್ಯಾಪಾರ ವಿಸ್ತರಣೆಗೆ ಖರ್ಚು ಹೆಚ್ಚಾಗಬಹುದು. ನೀವು ಸ್ನೇಹಿತರಿಂದ ಹಣವನ್ನು ಪಡೆಯಬಹುದು. ಸೆಪ್ಟೆಂಬರ್ 17 ರಿಂದ ಖರ್ಚು ಹೆಚ್ಚಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಯೂ ಇದೆ. ಕಾರ್ಯಕ್ಷೇತ್ರದಲ್ಲೂ ಬದಲಾವಣೆಯಾಗಬಹುದು.  

8 /12

ವೃಶ್ಚಿಕ ರಾಶಿ - ನೀವು ಆತ್ಮವಿಶ್ವಾಸದಿಂದ ತುಮ್ಬಿರುವಿರಿ. ತಿಂಗಳ ಆರಂಭದಲ್ಲಿ ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ ನೀವು ನೀಡುವ ಯಾವುದೇ ಪರೀಕ್ಷೆ ಮತ್ತು ಸಂದರ್ಶನ ಇತ್ಯಾದಿಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಆದಾಯ ಹೆಚ್ಚಾಗಲಿದೆ. ಆಗಸ್ಟ್ 17ರ ನಂತರ ತಾಳ್ಮೆ ಕಡಿಮೆಯಾಗಬಹುದು. ವ್ಯಾಪಾರಕ್ಕಾಗಿ ತಂದೆಯಿಂದ ಧನಸಹಾಯ ಸಿಗಬಹುದು. ವ್ಯಾಪಾರ ವೃದ್ಧಿಯಾಗಲಿದೆ. ಲಾಭದ ಅವಕಾಶಗಳಿರುತ್ತವೆ.  

9 /12

ಧನು ರಾಶಿ - ತಿಂಗಳ ಆರಂಭದಲ್ಲಿ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸದಿಂದ ತುಂಬಿರುವಿರಿ. ಆದರೆ ಮನಸ್ಸು ನಕಾರಾತ್ಮತೆಯ ಭಾವದಿಂದ ಕೂಡಿರಬಹುದು. ಕುಟುಂಬದ ಬೆಂಬಲ ಸಿಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ನೀವು ವ್ಯಾಪಾರಕ್ಕಾಗಿ ವಿದೇಶಿ ಪ್ರವಾಸ ಕೈಗೊಳ್ಳಬಹುದು. ಪ್ರಯಾಣ ಲಾಭದಾಯಕವಾಗಲಿದೆ. ಕೆಲಸ ಒತ್ತಡ ಇರಲಿದೆ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸೆಪ್ಟೆಂಬರ್ 17 ರಿಂದ ಓಡಾಟದಲ್ಲಿ ವಿಪರೀತ ಹೆಚ್ಚಳ ಇರಲಿದೆ. ಜೀವನ ನಡೆಸುವುದು ಕಷ್ಟವಾಗುತ್ತದೆ.  

10 /12

ಮಕರ ರಾಶಿ - ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ, ಆದರೆ ಸ್ವಯಂ ಸಂಯಮದಿಂದ ಇರಲು ಪ್ರಯತ್ನಿಸಿ. ಕೋಪದಿಂದ ದೂರವಿರಿ. ವ್ಯಾಪಾರ ಹೆಚ್ಚಾಗಲಿದೆ. ಸೆಪ್ಟೆಂಬರ್ 17 ರಿಂದ ವ್ಯವಹಾರದಲ್ಲಿ ಹೆಚ್ಚಿನ ಶ್ರದ್ಧೆ ಇರಲಿದೆ. ಉದ್ಯೋಗದಲ್ಲಿ ಬದಲಾವಣೆಗೆ ಅವಕಾಶವಿರಬಹುದು. ಸ್ನೇಹಿತರ ಬೆಂಬಲವನ್ನು ಸಹ ಪಡೆಯಬಹುದು. ಆದಾಯ ಹೆಚ್ಚಲಿದೆ. ವಾಹನ ಸುಖ ಕಡಿಮೆಯಾಗಬಹುದು. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ಜೀವನ ಅಸ್ತವ್ಯಸ್ತವಾಗಲಿದೆ.

11 /12

ಕುಂಭ ರಾಶಿ– ಮಾಸದ ಆರಂಭದಲ್ಲಿ ಮನಸ್ಸಿಗೆ ತೊಂದರೆಯಾಗುವುದು. ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಡಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಯೋಜನೇತರ ವೆಚ್ಚಗಳು ಹೆಚ್ಚಾಗಲಿವೆ. ಸಿಹಿ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು. ಕೆಲಸ ಕಾರ್ಯಗಳಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ಪ್ರಗತಿಯ ಹಾದಿ ಸುಗಮವಾಗಲಿದೆ. ಆದಾಯ ಹೆಚ್ಚಾಗಲಿದೆ. ವಾಹನ ಸುಖಹೆಚ್ಚಾಗಬಹುದು. ಸೆಪ್ಟೆಂಬರ್ 17 ರ ನಂತರ ಕಾರ್ಯಕ್ಷೇತ್ರದಲ್ಲಿ ಬದಲಾವಣೆಗಳಾಗಬಹುದು.

12 /12

ಮೀನ ರಾಶಿ- ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದರೆ ಮನಸ್ಸಿನಲ್ಲಿನ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಮಾಸದ ಆರಂಭದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಶೈಕ್ಷಣಿಕ ಕೆಲಸದಲ್ಲಿ ತೊಂದರೆ ಎದುರಾಗಬಹುದು. ಎಚ್ಚರದಿಂದಿರಿ. ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಪ್ರಾಪ್ತಿಯಾಗಲಿದೆ. ಪ್ರಗತಿಯ ಅವಕಾಶಗಳು ಲಭ್ಯವಾಗಬಹುದು. ಕೆಲಸದ ಹೊರೆ ಹೆಚ್ಚಾಗಲಿದೆ. ಪರಿಶ್ರಮ ಇರಲಿದೆ. ಇನ್ನೊಂದೆಡೆ ಆದಾಯವೂ ಹೆಚ್ಚಾಗಲಿದೆ. ಸೆಪ್ಟೆಂಬರ್ 17 ರ ನಂತರ ತಾಳ್ಮೆವಹಿಸುವ ಅವಶ್ಯಕತೆ ಇದೆ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ಸಿಗಲಿವೆ.