Daily Horoscope: ದಿನಭವಿಷ್ಯ 04-09-2021 Today astrology
Horoscope September 04, 2021: ಹಲವು ರಾಶಿಯವರಿಗೆ ಜೀವನದಲ್ಲಿ ಶುಭ ಶನಿವಾರ ಅನೇಕ ದೊಡ್ಡ ಬದಲಾವಣೆಗಳಾಗುತ್ತವೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಮೇಲೆ ಅದು ಎಷ್ಟು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ ಬನ್ನಿ...
Daily Horoscope (ದಿನಭವಿಷ್ಯ 04-09-2021) : ನಮ್ಮ ಜೀವನವು ಗ್ರಹಗಳ ಚಲನವಲನಗಳನ್ನು ಆಧರಿಸಿದೆ. ಈ ರಾಶಿಗಳ ಚಲನೆ ಬದಲಾದಂತೆ, ನಮ್ಮ ಜೀವನದಲ್ಲಿ ಬದಲಾವಣೆಗಳು ಬರಲಾರಂಭಿಸುತ್ತವೆ. ಶನಿವಾರವು ಅದರೊಂದಿಗೆ ಕೆಲವು ದೊಡ್ಡ ಬದಲಾವಣೆಗಳನ್ನು ತರುತ್ತಿದೆ. ಅದು ನಿಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮ್ಮ ಜೀವನದಲ್ಲಿ ಶುಭ ಶನಿವಾರ ಏನೇನು ನಡೆಯುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ…
ಮೇಷ ರಾಶಿ: ನಿಮ್ಮ ಖ್ಯಾತಿ ಮತ್ತು ಪ್ರತಿಷ್ಠೆಯು ಹೆಚ್ಚಳವಾಗುತ್ತದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಪ್ರಯೋಜನ ಪಡೆಯುತ್ತಾರೆ. ನಿಮಗೆ ಹಣದ ಆಗಮನವಾಗುವ ನಿರೀಕ್ಷೆ ಇದೆ. ನೀವು ಶಾಪಿಂಗ್ ಹೋದರೆ, ನಿಮ್ಮ ಜೇಬು ಭದ್ರಪಡಿಸಿಕೊಳ್ಳಿ(ಹೆಚ್ಚು ಖರ್ಚು ಆದೀತು). ಅಗತ್ಯವಿರುವವರಿಗೆ ಸಹಾಯ ಮಾಡುವುದರಿಂದ ತೃಪ್ತಿ ಇರುತ್ತದೆ.
ವೃಷಭ ರಾಶಿ: ನಿಮ್ಮ ಶಕ್ತಿಯು ತುಂಬಾ ಸಕ್ರಿಯವಾಗಿ ಉಳಿಯುತ್ತದೆ. ನಿಮ್ಮ ಆಲೋಚನಾ ಕಾರ್ಯವನ್ನು ಉತ್ತಗೊಳಿಸಬಹುದು. ಆಸ್ತಿ ವ್ಯಾಪಾರಿಗಳಿಗೆ ಶನಿವಾರ ಹೆಚ್ಚು ಲಾಭದಾಯಕವಾಗಿರುತ್ತದೆ. ನೀವು ವ್ಯಾಪಾರದ ನಿಮಿತ್ತ ಪ್ರವಾಸಕ್ಕೆ ಹೋಗಬಹುದು. ಯಾವುದೇ ಪ್ರಮುಖ ನಿರ್ಧಾರವನ್ನು ಯೋಚಿಸಿದ ನಂತರವೇ ಅಂತಿಮಗೊಳಿಸಿ.
ಮಿಥುನ ರಾಶಿ: ನಿಮ್ಮ ಹಲವು ಸಮಸ್ಯೆಗಳನ್ನು ಶನಿವಾರ ನಿವಾರಿಸಬಹುದು. ಕೆಲವು ರಾಜಕೀಯ ಜನರನ್ನು ಭೇಟಿ ಮಾಡುವುದರಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಉತ್ತಮ ಅವಕಾಶಗಳಿರಬಹುದು. ಹಣಕಾಸಿನ ಲಾಭಕ್ಕಾಗಿ ಉತ್ತಮ ಅವಕಾಶಗಳಿವೆ. ಮನೆ ನವೀಕರಣಕ್ಕೆ ಖರ್ಚು ಎದುರಾಗಬಹುದು.
ಕರ್ಕ ರಾಶಿ: ನಿಮ್ಮ ಈ ದಿನವು ಸಂತೋಷಗಳೊಂದಿಗೆ ಹಾದುಹೋಗುವ ಸಂಕೇತವಾಗಿದೆ. ಇತರರ ಮೇಲೆ ಬಲವಾದ ಪ್ರಭಾವ ಬೀರುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ. ಆಸ್ತಿ ವ್ಯವಹಾರಗಳಿಂದ ನೀವು ದೊಡ್ಡ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ. ವ್ಯಾಪಾರ ಕ್ಷೇತ್ರದಲ್ಲಿ ಲಾಭಕ್ಕಿಂತ ಹೆಚ್ಚಿನ ಶ್ರಮವಿರುತ್ತದೆ.
ಇದನ್ನೂ ಓದಿ: Ganesh Chaturthi 2021 : ಈ ದಿನದಿಂದ ಆರಂಭವಾಗಲಿದೆ ಗಣೇಶ ಉತ್ಸವ, ಈ ಶುಭ ಮುಹೂರ್ತದಲ್ಲಿ ಮನೆಗೆ ಬರಲಿ ಗಣಪ
ಸಿಂಹ ರಾಶಿ: ಶನಿವಾರವು ನಿಮಗೆ ಪ್ರಗತಿಯ ಹೊಸ ಮಾರ್ಗ ತೆರೆಯುತ್ತದೆ. ದೊಡ್ಡ ಗುರಿಯನ್ನು ಸಾಧಿಸಲು, ನಿಮಗೆ ಯಾರೊಬ್ಬರ ಸಹಾಯವೂ ಬೇಕಾಗಿಲ್ಲ. ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ನಿಶ್ಚಿತತೆಗಳನ್ನು ನೋಡಿಕೊಳ್ಳಬೇಕು.
ಕನ್ಯಾ ರಾಶಿ: ಸ್ವಾವಲಂಬನೆಯತ್ತ ಹೆಜ್ಜೆ ಇಡಿ. ಸಾಹಿತ್ಯಕ್ಕೆ ಸಂಬಂಧಿಸಿದ ಜನರಿಗೆ ಈ ದಿನ ಒಳ್ಳೆಯದು. ನಿಮ್ಮ ಶ್ರಮ ಸಾರ್ಥಕವಾಗುತ್ತದೆ. ನೀವು ಯಾವುದೇ ಆಸ್ತಿಯನ್ನು ಖರೀದಿಸಬಹುದು. ಆಪ್ತ ಸ್ನೇಹಿತರ ಸಲಹೆಯು ನಿಮಗೆ ಉಪಯುಕ್ತವಾಗಿದೆ.
ತುಲಾ ರಾಶಿ: ಅದೃಷ್ಟಕ್ಕಿಂತ ಕರ್ಮದಲ್ಲಿ ಹೆಚ್ಚು ನಂಬಿಕೆ ಇಡಿ. ಏಕಾಂಗಿಯಾಗಿ ಸ್ವಲ್ಪ ಸಮಯ ಕಳೆಯಿರಿ, ಅದು ನಿಮಗೆ ಒಳ್ಳೆಯದು. ಆದಾಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ನಡೆಯುತ್ತಿರುವ ಕೆಲಸದಲ್ಲಿ ಪ್ರಗತಿ ಸಾಧಿಸಲಾಗುವುದು. ಯುವಕರು ವಿದೇಶದಲ್ಲಿ ಕೆಲಸ ಮಾಡಲು ಅವಕಾಶಗಳನ್ನು ಪಡೆದುಕೊಳ್ಳಬಹುದು. ಕೆಲಸ ಮಾಡುವವರಿಗೆ ಈ ದಿನವು ಉತ್ತಮವಾಗಿರುತ್ತದೆ.
ವೃಶ್ಚಿಕ ರಾಶಿ: ಪ್ರತಿಯೊಂದು ಕೆಲಸದಲ್ಲೂ ನಿಮ್ಮ ಬುದ್ಧಿಯು ನಿಮಗೆ ಸಹಕಾರಿಯಾಗುತ್ತದೆ. ಯಾವುದೇ ಕ್ಷೇತ್ರದ ಕೆಲಸದ ಫಲಿತಾಂಶವು ಅತ್ಯುತ್ತಮವಾಗಿರುತ್ತದೆ. ಬೇರೆ ಮೂಲಗಳಿಂದ ಹಣ ಗಳಿಕೆ ಇರುತ್ತದೆ. ಸಾಲ ಸಂಬಂಧಿತ ವಿಷಯಗಳಲ್ಲಿ ಪ್ರಗತಿ ಇರುತ್ತದೆ. ಯುವಕರು ತಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಬದಲಾವಣೆ ತರಬೇಕು.
ಇದನ್ನೂ ಓದಿ: Astrology: ಅಪಾಯದೊಂದಿಗೆ ಸರಸ ಆಡುವುದೆಂದರೆ ಈ ರಾಶಿಯವರಿಗೆ ಅಚ್ಚುಮೆಚ್ಚು
ಧನು ರಾಶಿ: ಶನಿವಾರವು ನಿಮಗೆ ಖಚಿತವಾದ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಮಗೆ ಪ್ರಯೋಜನಗಳನ್ನು ಪಡೆಯುವ ಸಂಪೂರ್ಣ ಅವಕಾಶಗಳಿವೆ. ಹಣ ಮತ್ತು ವ್ಯವಹಾರದ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ನೀವು ಮನೆಯಲ್ಲಿ ಬಳಸಿದ ವಸ್ತುಗಳನ್ನು ಖರೀದಿಸಬಹುದು. ಈ ರಾಶಿಯ ಅವಿವಾಹಿತರು ಮದುವೆಯ ಪ್ರಸ್ತಾಪವನ್ನು ಪಡೆಯಬಹುದು.
ಮಕರ ರಾಶಿ: ನಿಮ್ಮ ಸುತ್ತ ಗದ್ದಲ ಇರುತ್ತದೆ, ಹೀಗಾಗಿ ಸ್ವಲ್ಪ ಎಚ್ಚರಿಕೆ ವಹಿಸಿ. ಮಹಿಳೆಯರು ಕೆಲವು ವಿಶೇಷ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಈಗಾಗಲೇ ವ್ಯಾಪಾರದಲ್ಲಿರುವವರಿಗೆ, ಶನಿವಾರವು ಕೆಲವು ಉತ್ತಮ ಶುಭವಾರ್ತೆಯನ್ನು ತರುತ್ತದೆ. ಹೊಸ ಖರೀದಿಯೊಂದಿಗೆ ನಿಮ್ಮ ಸಂತೋಷ ಹೆಚ್ಚಾಗುವ ಸಾಧ್ಯತೆಯಿದೆ.
ಕುಂಭ ರಾಶಿ: ನಿಮ್ಮ ಸುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ. ಇತರರ ಅಭಿಪ್ರಾಯವನ್ನು ಎಚ್ಚರಿಕೆಯಿಂದ ಆಲಿಸಿ. ನೀವು ನಿಜವಾಗಿಯೂ ಲಾಭವನ್ನು ಬಯಸಿದರೆ, ಯೋಚಿಸಿದ ನಂತರ ನಿಮ್ಮ ವ್ಯಾಪಾರ-ವ್ಯವಹಾರಗಳಿಗೆ ಮುಂದಡಿ ಇಡಿ. ನಿಮ್ಮ ಹಣಕಾಸಿನ ಸ್ಥಿತಿ-ಗತಿ ಸುಧಾರಿಸುತ್ತದೆ. ಮನೆಯಿಂದ ಕೆಲಸ ಮಾಡುವ ಜನರ ಕಾರ್ಯವು ಸಮಯಕ್ಕೆ ತಕ್ಕನಾಗಿ ಪೂರ್ಣಗೊಳ್ಳುತ್ತದೆ.
ಮೀನ ರಾಶಿ: ನಿಮ್ಮ ದಿನ ಸುವರ್ಣವಾಗಿರುತ್ತದೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಜನರು ನಿಮ್ಮನ್ನು ಹೊಗಳುತ್ತಾರೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಯಾರೊಬ್ಬರ ಸಹಾಯವನ್ನು ಪಡೆಯಬೇಕಿಲ್ಲ. ನೀವು ವ್ಯಾಪಾರದಲ್ಲಿ ಲಾಭ ಪಡೆಯಬಹುದು. ಕಚೇರಿಯ ಕೆಲಸವು ದಿನನಿತ್ಯಕ್ಕಿಂತ ಉತ್ತಮವಾಗಿ ನಡೆಯಲಿದೆ.
ಇದನ್ನೂ ಓದಿ: Loved Ones Death: ಮೃತ ಪ್ರೀತಿಪಾತ್ರರ ನೆನಪಿಗಾಗಿ ಅವರ ಬಟ್ಟೆ ಧರಿಸುವ ತಪ್ಪನ್ನು ಎಂದಿಗೂ ಮಾಡಬೇಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ