Ganesh Chaturthi 2021 : ಈ ದಿನದಿಂದ ಆರಂಭವಾಗಲಿದೆ ಗಣೇಶ ಉತ್ಸವ, ಈ ಶುಭ ಮುಹೂರ್ತದಲ್ಲಿ ಮನೆಗೆ ಬರಲಿ ಗಣಪ

Ganesh Chaturthi 2021 date: ಗಣೇಶನ ಜನ್ಮದಿನದ ಆಚರಣೆಯನ್ನು ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣೇಶ ಚತುರ್ಥಿಯ ದಿನ, ಗಣೇಶನನ್ನು  ವಿಶೇಷವಾಗಿ ಪೂಜಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಗಣೇಶ ಜನನವಾಯಿತು ಎನ್ನುವುದು ನಂಬಿಕೆ.  

Written by - Ranjitha R K | Last Updated : Sep 3, 2021, 07:23 PM IST
  • ಗಣೇಶನ ಜನ್ಮದಿನದ ಆಚರಣೆಯನ್ನು ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ.
  • ಗಣೇಶ ಚತುರ್ಥಿಹಬ್ಬವು 10 ದಿನಗಳ ನಂತರ, ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ
  • ಗಣಪತಿಯ ಮಂತ್ರವನ್ನು ಜಪಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆರತಿ ಮಾಡಿ
Ganesh Chaturthi 2021 : ಈ ದಿನದಿಂದ ಆರಂಭವಾಗಲಿದೆ ಗಣೇಶ ಉತ್ಸವ, ಈ ಶುಭ ಮುಹೂರ್ತದಲ್ಲಿ ಮನೆಗೆ ಬರಲಿ ಗಣಪ  title=
Ganesh Chaturthi 2021 (file photo)

ನವದೆಹಲಿ : Ganesh Chaturthi 2021 date: ಗಣೇಶನ ಜನ್ಮದಿನದ ಆಚರಣೆಯನ್ನು ಗಣೇಶ ಚತುರ್ಥಿ (Ganesh Chaturthi September Date 2021) ಎಂದು ಕರೆಯಲಾಗುತ್ತದೆ. ಗಣೇಶ ಚತುರ್ಥಿಯ ದಿನ, ಗಣೇಶನನ್ನು  ವಿಶೇಷವಾಗಿ ಪೂಜಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಗಣೇಶ ಜನನವಾಯಿತು ಎನ್ನುವುದು ನಂಬಿಕೆ.  ಗಣೇಶೋತ್ಸವ ಅಂದರೆ ಗಣೇಶ ಚತುರ್ಥಿಹಬ್ಬವು 10 ದಿನಗಳ ನಂತರ, ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ.  ಈ  ದಿನ  ಗಣೇಶನ ವಿಸರ್ಜನೆ ನಡೆಸಲಾಗುತ್ತದೆ. ಅನಂತ ಚತುರ್ದಶಿಯ ದಿನದಂದು ಭಕ್ತರು ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಸರೋವರ, ನದಿ ಇತ್ಯಾದಿಗಳಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ. ಈ ವರ್ಷ ಗಣೇಶ ಚತುರ್ಥಿ ಹಬ್ಬವು ಸೆಪ್ಟೆಂಬರ್ 10 ರಿಂದ ಆರಂಭವಾಗುತ್ತದೆ.

ಗಣೇಶ ಚತುರ್ಥಿ ಪೂಜೆ ಮುಹೂರ್ತ (Ganesh Chaturthi 2021 Muhuat)
ಗಣೇಶ ಚತುರ್ಥಿ ಶುಕ್ರವಾರ, ಸೆಪ್ಟೆಂಬರ್ 10, 2021
ಮಧ್ಯಾಹ್ನ ಗಣೇಶ ಪೂಜೆ ಮುಹೂರ್ತ - ಬೆಳಗ್ಗೆ 11:03ರಿಂದ  ಮಧ್ಯಾಹ್ನ 1:33 
ಗಣೇಶ ವಿಸರ್ಜನೆ ದಿನಾಂಕ : ಸೆಪ್ಟೆಂಬರ್ 19, 2021
ನಿಷೇಧಿತ ಚಂದ್ರದರ್ಶನ ಸಮಯ - ಬೆಳಿಗ್ಗೆ 09:12ರಿಂದ ರಾತ್ರಿ 08:53 

ಇದನ್ನೂ ಓದಿ Astrology: ಅಪಾಯದೊಂದಿಗೆ ಸರಸ ಆಡುವುದೆಂದರೆ ಈ ರಾಶಿಯವರಿಗೆ ಅಚ್ಚುಮೆಚ್ಚು

ಚತುರ್ಥಿ ತಿಥಿ ಆರಂಭ - ಸೆಪ್ಟೆಂಬರ್ 10, 2021 ಬೆಳಿಗ್ಗೆ 12:18 ಕ್ಕೆ
ಚತುರ್ಥಿ ದಿನಾಂಕ ಅಂತ್ಯ - ಸೆಪ್ಟೆಂಬರ್ 10, 2021 ರಾತ್ರಿ 09:57 

ಗಣೇಶ ಚತುರ್ಥಿ ಪೂಜೆ ವಿಧಿ :
ಸ್ವಚ್ಛವಾದ ಆಸನದ ಮೇಲೆ ಕುಳಿತು, ಮೊದಲು ಗಣೇಶನಿಗೆ (Lord Ganesha) ಪಂಚಾಮೃತ ಮಜ್ಜನ ಮಾಡಿಸಿ. ಇದರ ನಂತರ, ಕುಂಕುಮ, ಶ್ರೀಗಂಧ, ಅಕ್ಷತೆ, ಹೂವುಗಳು(Flower), ದಕ್ಷಿಣೆ ಮತ್ತು ಇಷ್ಟವಾದ ತಿನಿಸುಗಳನ್ನು ಅರ್ಪಿಸಿ. ಹೀಗೆ ಚತುರ್ಥಿಯ ವೇಳೆ, ಪ್ರತಿಷ್ಟಾಪಿಸಿದ ಗಣೇಶ ಮನೆಯಲ್ಲಿರುವವರೆಗೂ, ಗಣೇಶ ಪುರಾಣ, ಗಣೇಶ ಚಾಲೀಸಾ(Ganesha Chalisa), ಗಣೇಶ ಸ್ತುತಿ, ಶ್ರೀ ಗಣೇಶ ಸಹಸ್ರನಾಮಾವಳಿ, ಆರತಿ, ಸಂಕಟನಾಶನ ಗಣೇಶ ಸ್ತೋತ್ರ ಇತ್ಯಾದಿಗಳನ್ನು ಪಠಿಸಿ. ಗಣಪತಿಯ ಮಂತ್ರವನ್ನು ಜಪಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆರತಿ ಮಾಡಿ. ಹೀಗೆ  ಮಾಡುವುದರಿಂದ ಗಣಪತಿ ಕುಟುಂಬದ ಎಲ್ಲಾ ವಿಘ್ನಗಳನ್ನು ನಿವಾರಿಸುತ್ತಾನೆ ಎನ್ನಲಾಗಿದೆ.

ಇದನ್ನೂ ಓದಿ : Loved Ones Death: ಮೃತ ಪ್ರೀತಿಪಾತ್ರರ ನೆನಪಿಗಾಗಿ ಅವರ ಬಟ್ಟೆ ಧರಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News