ಮೇಷ ರಾಶಿ:
ನಿಮ್ಮ ವ್ಯವಹಾರಗಳಲ್ಲಿ ಮತ್ತಷ್ಟು ವಿಸ್ತರಣೆ ಮಾಡುವುದು ಅಗತ್ಯ. ಆಪ್ತ ವರ್ಗದಿಂದ ವಿಶೇಷ ಸೌಲಭ್ಯ ಪಡೆಯುವ ಅವಕಾಶ ಕಾಣಬಹುದು. ಪ್ರೇಮಿಗಳಲ್ಲಿ ಮನಸ್ತಾಪ ಬರುವ ಸಾಧ್ಯತೆ ಕಾಣಬಹುದು. ಇಂದು ಕೆಲಸಗಳನ್ನು ಪೂರ್ಣಗೊಳಿಸುವ ಸ್ಥಿತಿ ಕಂಡು ಬರುತ್ತದೆ. ನಿಮ್ಮ ಅಧಿಕ ಚೈತನ್ಯವನ್ನು ಬಳಸಿಕೊಳ್ಳಿ.


COMMERCIAL BREAK
SCROLL TO CONTINUE READING

ವೃಷಭ ರಾಶಿ:
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ಕಂಡು ಬರಬಹುದು. ಪ್ರೇಮಿಗಳಿಗೆ ಉತ್ತಮ ದಿನ. ಲಾಭಾಂಶದ ಲೆಕ್ಕಾಚಾರ ಮಾಡಿ ವ್ಯಾಪಾರವನ್ನು ಆರಂಭಿಸಿ. ಇಂದು ಸಂಬಂಧಿಕರೊಡನೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಬಿಡುವಿನ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ.  


ಮಿಥುನ ರಾಶಿ:
ಇಂದು ನಿಮ್ಮ ಆಲಸ್ಯ ಹೆಚ್ಚಾಗಲಿದೆ. ಇದರಿಂದ ಕಾರ್ಯಕ್ಷಮತೆ ಕುಂಠಿತವಾಗಬಹುದು. ನಿಮ್ಮ ಸಂಗಾತಿಯು ಇಂದು ನಿಮ್ಮನ್ನು ಪ್ರೇಮದಿಂದ ಸಂತೋಷವಾಗಿ ಇಡುತ್ತಾರೆ. ಪ್ರೀತಿ-ಪ್ರೇಮ-ಪ್ರಣಯದಲ್ಲಿ ಹಿನ್ನಡೆ ಆಗುವಂತಹ ಸನ್ನಿವೇಶ ಕಂಡು ಬರಬಹುದು. ನಿಮ್ಮ ಸ್ನೇಹಿತರೊಂದಿಗೆ ಸಂತೋಷವಾದ ಪ್ರಯಾಣವನ್ನು ಬೆಳೆಸುತ್ತೀರಿ.


ಇದನ್ನೂ ಓದಿ: Negative Energy: ನಿಮ್ಮ ಅಕ್ಕಪಕ್ಕದಲ್ಲಿಯೂ ಕೂಡ ನಕಾರಾತ್ಮಕ ಶಕ್ತಿಗಳಿರುತ್ತವೆ, ಅಪ್ಪಿತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ


ಕಟಕ ರಾಶಿ:
ದಾಂಪತ್ಯ ಜೀವನದಲ್ಲಿ ಮಾತಿಗೆ ಮಾತು ಬೆಳೆಸುವುದು ಬೇಡ. ಇದು ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆಯಾಗಬಹುದು. ಆದಷ್ಟು ಪ್ರೀತಿಯಿಂದ ವರ್ತಿಸಿ ನಿಮ್ಮ ಕಾರ್ಯದಕ್ಷತೆಯಿಂದ ಹಲವು ಅವಕಾಶಗಳು ಹುಡುಕಿಕೊಂಡು ಬರಬಹುದು. ಆರ್ಥಿಕ ಚೇತರಿಕೆಗೆ ಕುಟುಂಬದವರ ಜೊತೆ ಚರ್ಚಿಸುವುದು ಸೂಕ್ತ. 


ಸಿಂಹ ರಾಶಿ: 
ಹಳೆಯ ವ್ಯಾಪಾರಗಳು ಇಂದು ಉತ್ತಮ ಲಾಭದಾಯಕವಾಗಿ .ನಿಮ್ಮ ಬೆಳವಣಿಗೆ ಕಂಡು ಹೊಟ್ಟೆ ಕಿಚ್ಚು ಪಡುವ ಜನರು ಇದ್ದಾರೆ. ಜನರ ದೃಷ್ಟಿಕೋನ ನಿಮ್ಮ ಮೇಲೆ ಬೀಳಬಹುದು. ವ್ಯಾಪಾರದಲ್ಲಿ ಚತುರತೆಯಿಂದ ವರ್ತಿಸುವುದು ಸೂಕ್ತ. ಮಕ್ಕಳ ಬಗ್ಗೆ ಸೂಕ್ತ ಕಾಳಜಿ ವಹಿಸಿ ಹೊರಗಿನ ಆಹಾರವನ್ನು ಸೇವಿಸುವಾಗ ಎಚ್ಚರ ವಿರಲಿ.


ಕನ್ಯಾ ರಾಶಿ:
ನಿಮ್ಮ ವಿಚಾರಗಳು ಹಾಗೂ ಕಾರ್ಯಶೈಲಿಯನ್ನು ಕಂಡು ನಿಮ್ಮ ಬಳಿ ಜನರು ಬರಲಿದ್ದಾರೆ. ನಿಮ್ಮ ಸಂಗಾತಿಯ ಮಾತು ಮತ್ತು ಅವರ ಜೊತೆ ಇರುವಂತಹ ವೈಯಕ್ತಿಕ ಕ್ಷಣಗಳು ನಿಮ್ಮ ಎಲ್ಲಾ ಕೆಲಸಗಳನ್ನು ಚೈತನ್ಯವಾಗಿ ಇರುವಂತೆ ಮಾಡುತ್ತದೆ ಎಂದು ನಿಮ್ಮ ಪ್ರೇಮ ಜೀವನ ಉತ್ತಮವಾಗಿರುತ್ತದೆ.


ಇದನ್ನೂ ಓದಿ: New Year 2021 Auspicious Yog:ವರ್ಷಾರಂಭದ ಮೊದಲ ದಿನವೇ ಮೂರು ಮಹಾ ಸಂಯೋಗಗಳ ನಿರ್ಮಾಣ


ತುಲಾ ರಾಶಿ: 
ಯಾವುದೇ ಕೆಲಸವಿದ್ದರೂ ತಾಳ್ಮೆ ಬಹಳ ಮುಖ್ಯವಾಗಿರುತ್ತದೆ. ಮಕ್ಕಳಲ್ಲಿ ಕೆಲವು ಅಭ್ಯಾಸಗಳಿಂದ ನಿಮಗೆ ಚಿಂತೆ ಕಾಡಲಿದೆ. ನೀವು ಅವರ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ನಿಮ್ಮ ಮನಸ್ಸಿನಲ್ಲಿ ಇರುವ ಇಚ್ಛೆಗಳನ್ನು ನೆರವೇರಿಸಲು ಚಾಲನೆಯನ್ನು ನೀಡುತ್ತೀರಾ. ಆರೋಗ್ಯ ಚೆನ್ನಾಗಿರುತ್ತದೆ.


ವೃಶ್ಚಿಕ ರಾಶಿ:
ಕೆಲಸದಲ್ಲಿನ ನಿಮ್ಮ ಶ್ರಮ ಮತ್ತು ಪ್ರಯತ್ನದಿಂದ ಯಶಸ್ಸು. ನಿಮ್ಮಲ್ಲಿ ಬರುವಂತಹ ಅನುಮಾನಗಳು ಸುಳ್ಳು ಆಗಿರಬಹುದು. ಕುಲಂಕುಶವಾಗಿ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ನೀವು ಬಹುಕಾಲದಿಂದ ಎದುರು ನೋಡುತ್ತಿರುವ ಜೀವನ ಇಂದು ನಿಮಗೆ ಸಿಗಬಹುದು.


ಧನು ರಾಶಿ:
ಸಂಗಾತಿಯ ಸಾಂಗತ್ಯದಿಂದ ನಿಮ್ಮ ದಿನ ಆಕರ್ಷಕವಾದ ದಿನವಾಗಿರುತ್ತದೆ. ಈ ದಿನ ಬಹಳ ರೋಮಾಂಚನಕಾರಿ ಆಗಿರುತ್ತದೆ. ಜಗಳವಾಡುವ ಪರಿಸ್ಥಿತಿ ಬಂದರೆ ಆದಷ್ಟು ಜಾಗದಿಂದ ಹೋಗುವುದು ಒಳ್ಳೆಯದು. ದೇವತಾಕಾರ್ಯಗಳಿಗೆ ಮನೆಯಲ್ಲಿ ಚಿಂತನೆ ಮಾಡುವರು. ನಿಮ್ಮ ಸಭ್ಯ ನಡುವಳಿಕೆಗಳು ಮೆಚ್ಚುಗೆಗೆ ಪಾತ್ರವಾಗುತ್ತದೆ.


ಇದನ್ನೂ ಓದಿ: Eclipse: 2021ರಲ್ಲಿ ಒಟ್ಟು ಎಷ್ಟು ಗ್ರಹಣ ಸಂಭವಿಸಲಿದೆ : ಯಾವಾಗ ಗೋಚರಿಸಲಿದೆ ಮೊದಲ ಸೂರ್ಯಗ್ರಹಣ


ಮಕರ ರಾಶಿ:
ಕೊಟ್ಟಿರುವ ಸಾಲವನ್ನು ಹಿಂಪಡೆಯಲು ಸಿದ್ದರಾಗಿ. ಮನೋವ್ಯಾಧಿ ಎಂಬುದು ಔಷಧಿ ಇಲ್ಲದ ಕಾಯಿಲೆ ನೀವು ಆದಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಯೋಜನೆ ಸಿದ್ಧತೆ ಮಾಡಿಕೊಳ್ಳಿ. ಇದರಿಂದ ನಿಮಗೆ ನಿವೇಶನ ಖರೀದಿಗೆ ಆಸಕ್ತಿ ಬರುತ್ತದೆ.


ಕುಂಭ ರಾಶಿ:
ಈ ದಿನ ಉತ್ತಮವಾಗಿರುತ್ತದೆ. ಆದರೂ ಸಹ ನಿಮಗೆ ಚಡಪಡಿಕೆ ಕನವರಿಕೆಗಳು ಹೆಚ್ಚಾಗಿರುತ್ತದೆ. ಅತಿ ಆಸೆ ಹಟಮಾರಿತನ ಶುಭವಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳ್ಳೆಯದು. ಸಮಾಜದ ಮುಖ್ಯವಾಹಿನಿಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆದಷ್ಟು ಆಶಾದಾಯಕವಾಗಿ ಇರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ.


ಮೀನ ರಾಶಿ:
ಒಳ್ಳೆಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಿ. ದುಂದು ವೆಚ್ಚ ಒಳ್ಳೆಯದಲ್ಲ ಸಂಗಾತಿಯೊಡನೆ ಮನಬಿಚ್ಚಿ ಮಾತನಾಡಿ. ಸಣ್ಣ ವಿಚಾರಕ್ಕೂ ಕೂಡ ಮುನಿಸಿಕೊಳ್ಳುವುದು ಒಳ್ಳೆಯದಲ್ಲ. ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ. ಉಳಿತಾಯ ಅಗತ್ಯ ನಿಮ್ಮ ಒತ್ತಡವನ್ನು ಸುಲಭವಾಗಿ ತೆಗೆದು ಹಾಕಿ.


ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.