New Year 2021 Auspicious Yog:ವರ್ಷಾರಂಭದ ಮೊದಲ ದಿನವೇ ಮೂರು ಮಹಾ ಸಂಯೋಗಗಳ ನಿರ್ಮಾಣ

New Year 2021 Auspicious Yog: 2020ನೇ ಹಲವು ಜನರಿಗೆ ವಿಭಿನ್ನ ಫಲಗಳನ್ನು ನೀಡಿದೆ. ಆದರೆ, 2021 ನೂತನ ವರ್ಷ ಹಲವು ಶುಭ ಸಂಯೋಗ ಹಾಗೂ ಶುಭ ಮುಹೂರ್ತಗಳನ್ನು ಹೊತ್ತು ತರುತ್ತಿದೆ. ಹೊಸ ವರ್ಷದ ಆರಂಭದಲ್ಲಿಯೂ ಕೂಡ ಮೂರು ಮಹಾ ಸಂಯೋಗಗಳ ಸೃಷ್ಟಿಯಾಗಲಿದ್ದು, ಇವು ಹಲವರಿಗೆ ಶುಭ ಫಲಗಳನ್ನು ನೀಡಲಿವೆ.

Written by - Nitin Tabib | Last Updated : Dec 26, 2020, 10:59 AM IST
  • ವರ್ಷದ ಮೊದಲ ದಿನ ಸೂರ್ಯೋದಯದವರೆಗೆ ಅಮೃತಸಿದ್ಧಿಯೋಗ ಇರಲಿದೆ.
  • ಜನವರಿ 1, 2021ರ ಸೂರ್ಯೋದಯದ ವರೆಗೆ ಗುರು ಪುಷ್ಯಾಮೃತಯೋಗ ಕೂಡ ಇರಲಿದೆ.
  • ಹೊಸ ವರ್ಷದ ಮೊದಲು ಸಂಧ್ಯಾಕಾಲದಲ್ಲಿ ಸರ್ವಾರ್ಥ ಸಿದ್ಧಿಯೋಗ ನಿರ್ಮಾಣಗೊಳ್ಳುತ್ತಿದೆ.
New Year 2021 Auspicious Yog:ವರ್ಷಾರಂಭದ ಮೊದಲ ದಿನವೇ ಮೂರು ಮಹಾ ಸಂಯೋಗಗಳ  ನಿರ್ಮಾಣ title=
New Year 2021 Auspicious Yog (Representational Image )

ನವದೆಹಲಿ: New Year 2021 Auspicious Yog: ನೂತನ ವರ್ಷದ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಸ್ವಾಗತಕ್ಕಾಗಿ ಎಲ್ಲೆಡೆ ಭರದಿಂದ ಸಿದ್ಧತೆಗಳು ಮುಂದುವರೆದಿವೆ. ಕೊರೊನಾ ಪ್ರಕೋಪದ ನಡುವೆಯೂ ಕೂಡ ಜನಸಾಮಾನ್ಯರು ನೂತನ ವರ್ಷದ ಆಗಮನಕ್ಕಾಗಿ ಕಾತರರಾಗಿದ್ದಾರೆ. ನೂತನ ವರ್ಷ ತಮಗೆ ಹೊಸ ಆಶೆಗಳು ಮತ್ತು ಶುಭ ಸಂದೇಶಗಳನ್ನು ಹೊತ್ತು ತರಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.

ಹೊಸ ವರ್ಷದ ಆಗಮನದೊಂದಿಗೆ ಹೊಸ ಉತ್ಸಾಹ, ಹೊಸ ಆನಂದ, ಹೊಸ ಕನಸುಗಳು ಹಾಗೂ ಹೊಸ ಹಬ್ಬಗಳ ಆಗಮನ ಕೂಡ ಆಗಲಿದೆ. ಈ ಬಾರಿಯ ನೂತನ ವರ್ಷ ಹಲವು ಶುಭ ಸಂಯೋಗ ಹಾಗೂ ಶುಭ ಮುಹೂರ್ತಗಳೊಂದಿಗೆ ಆಗಮಿಸಲಿದೆ ಎಂದು ಜ್ಯೋತಿಷ್ಯ ಪಂಡಿತರು ಹೇಳಿದ್ದಾರೆ. ವರ್ಷದ ಆರಂಭದಲ್ಲಿಯೇ ಹಲವು ಮಹಾ ಸಂಯೋಗಗಳು ನಿರ್ಮಾಣಗೊಳ್ಳಲಿವೆ ಹಾಗೂ ವಿವಿಧ ಜಾತಕದ ಜನರಿಗೆ ಶುಭ ಫಲಗಳನ್ನು ನೀಡಲಿವೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- Vastu Tips For New Year 2021: ನೂತನ ವರ್ಷದಲ್ಲಿ ಮನೆಗೆ ಈ 10 ವಸ್ತುಗಳನ್ನು ಮನೆಗೆ ತನ್ನಿ, ಧನ ಲಾಭವಾಗಲಿದೆ

ಸಕಲ ಕಾರ್ಯ ಸಿದ್ಧಿ
ಹೊಸ ವರ್ಷದ (New Year 2021) ಆರಂಭದಲ್ಲಿ ಗುರು ಪುಷ್ಯಾಮೃತ ಯೋಗ, ಅಮೃತ ಸಿದ್ಧಿಯೋಗ ಹಾಗೂ ಸರ್ವಾರ್ಥ ಸಿದ್ಧಿಯೋಗ ನಿರ್ಮಾಣಗೊಳ್ಳಲಿವೆ. ಈ ಮೂರು ಮಹಾ ಸಂಯೋಗಗಳನ್ನು ಅತ್ಯಂತ ಶುಭಕಾರಿ ಎನ್ನಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಮೂರು ಯೋಗಗಳ ಸಂದರ್ಭದಲ್ಲಿ ಮಾಡಲಾಗುವ ಎಲ್ಲ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಹಾಗಾದರೆ ಬನ್ನಿ ಈ ಮೂರು ಶುಭ ಯೋಗಗಳ ಕುರಿತು ತಿಳಿದುಕೊಳ್ಳೋಣ.

ಇದನ್ನು ಓದಿ- New Year ಸಂಭ್ರಮಾಚರಣೆಗೆ ತಡೆ: ನೈಟ್ ಕರ್ಪ್ಯೂ ಹೋಗ್ತಿದ್ದಂತೆ ಬರ್ತಿದೆ ಟಾಪ್ ರೂಲ್ಸ್!

ಹೊಸವರ್ಷಾರಂಭದಲ್ಲಿ ನಿರ್ಮಾಣಗೊಳ್ಳಲಿವೆ ಈ ಮೂರು ಅದ್ಭುತ ಸಂಯೋಗಗಳು
1. ವರ್ಷದ ಮೊದಲ ದಿನ ಅಂದರೆ ಜನವರಿ 1, 2021ರ ಸೂರ್ಯೋದಯದವರೆಗೆ ಅಮೃತ ಸಿದ್ಧಿಯೋಗ ಇರಲಿದೆ. ಈ ಶುಭ ಸಂಯೋಗ 2020ರ ಕೊನೆಯ ದಿನವಾಗಿರುವ ಡಿಸೆಂಬರ್ 31 ರಂದು ಸಂಜೆ 7:49ಕ್ಕೆ ಆರಂಭವಾಗಲಿದೆ. ಈ ಶುಭ ಸಂಯೋಗ ಮಾರನೆ ದಿನ ಸೂರ್ಯೋದಯದವರೆಗೆ ಇರಲಿದೆ.

2. ವರ್ಷದ ಮೊದಲ ದಿನ ಸೂರ್ಯೋದಯದವರೆಗೆ ಗುರುಪುಷ್ಯಾಮೃತ ಯೋಗ ಕೂಡ ಇರಲಿದೆ. ಈ ಶುಭ ಸಂಯೋಗ ಕೂಡ ಡಿಸೆಂಬರ್ 31 ರಂದು ಸಂಜೆ 7:49ಕ್ಕೆ ಆರಂಭಗೊಂಡು ಮಾರನೆ ದಿನ ಅಂದರೆ ಜನವರಿ 1ರ ಸೂರ್ಯೋದಯದವರೆಗೆ ಇರಲಿದೆ.

ಇದನ್ನು ಓದಿ-ಬೆಂಗಳೂರಿಗರಿಗೆ ಬಿಗ್ ಶಾಕ್: ‘ನ್ಯೂ ಇಯರ್’ ಮೋಜು ಮಸ್ತಿಗೆ BBMP ಬ್ರೇಕ್..!

3.ಹೊಸವರ್ಷದ ಮೊದಲು ಸಂಧ್ಯಾಕಾಲದಲ್ಲಿ ಸರ್ವಾರ್ಥ ಸಿದ್ಧಿಯೋಗ ನಿರ್ಮಾಣಗೊಳ್ಳುತ್ತಿದೆ.  ಈ ಯೋಗದ ಕಾಲಾವಧಿಯಲ್ಲಿ ಮಾಡಲಾಗುವ ಸಕಲ ಕಾರ್ಯಗಳಲ್ಲಿ ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಇದು ಡಿಸೆಂಬರ್ 31, 2020 ರ ಸೂರ್ಯೋದಯದಿಂದ ಜನವರಿ 1, 2021ರ ಸೂರ್ಯೋದಯದವರೆಗೆ ಇರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News